ಕಲ್ಯಾಣಸಿರಿ

ನೂತನ ಎಂ.ಸಿ.ಎಲ್.ಕೋಲ್ ಫ್ಯಾಕ್ಟರಿಗೆ ಭೂಮಿ ಪೂಜೆ

ರೈತರು ನೇಪಿಯರ್ ಗ್ರಾಸ್ ಬೆಳೆದು ಅಧಿಕ ಲಾಭ ಪಡೆಯಿರಿ:ಕಾಶಪ್ಪನವರ

ಕೆರೂರ; ಎಂ.ಸಿ.ಎಲ್. ಅಡಿಯಾಳದಲ್ಲಿ ಸಾವಯವ ಕೃಷಿಯ ಮೂಲಕ ಎಂ.ಕೋಲ್ ತಯಾರಿಕೆ ಘಟಕ ಬಾದಾಮಿ ತಾಲೂಕಿನ ರೈತರಿಗೆ ಸಂತಸದ ದಿನವಾಗಿದೆ ಎಂದು ಮಾಜಿ ಶಾಸಕರಾದ ಡಾ ವಿಜಯಾನಂದ ಎಸ್ ಕಾಶಪ್ಪನವರ ಹೇಳಿದರು ಅವರು ಗುರುವಾರ ಪಟ್ಟಣದ ವಿಜಯಪುರ-ಹುಬ್ಬಳ್ಳಿ ರಸ್ತೆಯ ಸಂಪತ್ ದಾಬಾ ಹತ್ತಿರ ಪ್ರಾರ್ಥನಾ ಓಂ ಬಯೋಫಿಲ್ ಪ್ರೈ.ಲಿ.ವತಿಯಿಂದ ನೂತನ ಕೋಲ್ ಫ್ಯಾಕ್ಟರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ ಪ್ರಾರ್ಥನಾ ಬಯೋಫಿಲ್ಸ್ ಪ್ರೈ.ಲಿ. ಸಂಸ್ಥಾಪಕರಾದ ಕಿರಣ ಕಟ್ಟೀಮನಿ ಅವರು ಬಾದಾಮಿ ತಾಲೂಕಿನ ರೈತರಿಗೆ ಆರ್ಥಿಕವಾಗಿ ಸದೃಢ ಮಾಡುವ ೩೦೦೦ ಕೋಟಿ ರೂ.ಆದಾಯ ರೈತರಿಗೆ ಒದಗಿಸುವ ವಿಚಾರದಲ್ಲಿ ರೈತರ ಮಕ್ಕಳಿಗೆ ಉದ್ಯೋಗವಕಾಶ ನೀಡಬೇಕೆಂಬ ಮಹದುದ್ದೇಶ, ದೂರದೃಷ್ಟಿಯಿಂದ ಸ್ಥಾಪನೆ ಮಾಡುತ್ತಿದ್ದಾರೆ. ಇದರಿಂದ ರೈತರಿಗೆ ನೇಪಿಯಾರ್ ಗ್ರಾಸ್ ಬೆಳೆಸುವುದರಿಂದ ಅಧಿಕ ಲಾಭ ಹಾಗೂ ಭೂಮಿ ಫಲವತ್ತತೆಯಿಂದ ಇರುತ್ತದೆ. ಇದು ರೈತರ ಉಜ್ವಲ ಭವಿಷ್ಯದ ಭರವಸೆಯ ಯೋಜನೆಯಾಗಿದೆ. ಬನ್ನಿ ನಮ್ಮೊಂದಿಗೆ ಕೈಜೋಡಿಸಿ ಹಸಿರು ಕ್ರಾಂತಿ ಸೇರಿಕೊಳ್ಳಿರಿ ಎಂದು ಮನವಿ ಮಾಡಿದರು.
ಸಂಸ್ಥೆಯ ನಿರ್ದೇಶಕ ರಂಗನಗೌಡ ಗೌಡರ ಮಾತನಾಡಿ ನೀವೆಲ್ಲರೂ ಎಂ.ಸಿ.ಎಲ್.ಬೆಂಬಲಿಸಿ ಇದರಿಂದ ನಿಮಗೆ ಆರ್ಥಿಕವಾಗಿ ಸಹಾಯವಾಗಲಿದೆ ಎಂದು ಹೇಳಿದರು.
ಸಂಸ್ಥೆಯ ಬಗ್ಗೆ ಪ್ರಾಸ್ಥಾವಿಕವಾಗಿ ಮುತ್ತಣ್ಣ ಯರಗೊಪ್ಪ ಮಾತನಾಡಿ ರೈತರಿಗೆ ಈ ಫ್ಯಾಕ್ಟರಿಯ ಬಗ್ಗೆ ಸವಿಸ್ಥಾರವಾಗಿ ಮಾತನಾಡಿ ದೇಶದಲ್ಲಿಯೇ ಎಂ.ಸಿ.ಎಲ್.ಕಂಪನಿ ಮಹತ್ವವಾದ ಸಾಧನೆಯನ್ನು ಮಾಡುತ್ತಿದೆ.ದೇಶದ ಯುವಕರ ಮುಂದಿನ ಭವಿಷ್ಯವನ್ನು ಉತ್ತಮವಾಗಿ ಮಾಡಲು ಅಬ್ದುಲ್ ಕಲಾಂ ಅವರ ಕನಸನ್ನು ನನಸು ಮಾಡಲು ಹಾಗೂ ಬರಡು,ವಿಷಯುಕ್ತವಾದ ಭೂಮಿಯನ್ನು ಸಾವಯವ ಭೂಮಿಯನ್ನಾಗಿ ಮಾಡಿ ನೇಪಿಯರ್ ಹುಲ್ಲಿನಿಂದ ಸಿ.ಎನ್.ಜಿ.ಗ್ಯಾಸ್ ಹಾಗೂ ವಿದ್ಯುತ್ ಉತ್ಪಾದನೆ ಮಾಡಿ ಬೇರೆ ದೇಶಕ್ಕೆ ರಫ್ತು ಮಾಡಿ ನಮ್ಮ ದೇಶವನ್ನು ಸ್ವಾವಲಂಬಿ ಮಾಡಲು ಎಲ್ಲ ಯುವಕರು, ರೈತರು ಮಹಿಳೆಯರು ಪಣ ತೊಡಬೇಕು ಎಂದು ಹೇಳಿದರು. ಸಂಸ್ಥಾಪಕ ಕಿರಣ ಕಟ್ಟೀಮನಿ ಮತ್ತು ಎಂ.ವಿ.ಪಿ. ರಾಘವೇಂದ್ರ ರಾಮದುರ್ಗ ದಂಪತಿಗಳನ್ನು ಎಲ್ಲರ ಪರವಾಗಿ ಸನ್ಮಾನಿಸಿ, ಗೌರವಿಸಲಾಯಿತು. ವೇದಿಕೆಯಲ್ಲಿ ಬೀಳಗಿ ಎಂ.ಪಿ.ಓ.ಮುರುಳಿಧರ ಕೊಪ್ಪದ, ಮಂಜು ಗುಬ್ಬಿ,ಸೋಮನಕೊಪ್ಪದ ಶಿವಲೋಹಿತ ಮಹಾಸ್ವಾಮಿಗಳು, ಕಿತ್ತೂರ ಎಂ.ವಿ.ಪಿ.ಸಂತೋಷ, ಇಲಕಲ್ ಎಂ.ವಿ.ಪಿ.ಗಳು ಸೇರಿದಂತೆ ಇತರರು ಹಾಜರಿದ್ದರು. ಇದೇ ಸಂದರ್ಭದಲ್ಲಿ ಸಾಧನೆ ಮಾಡಿದ ರೈತರಿಗೆ ಸನ್ಮಾನಿಸಿ, ಗೌರವಿಸಲಾಯಿತು. ಸುಶ್ಮಾ ಪಾರ್ವತಿಮಠ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು. ಕಾರ್ಯಕ್ರಮದಲ್ಲಿ ಪ್ರದೀಪ ಪೂಜಾರ, ಬಸವರಾಜ ಗೋಗೇರಿ, ಲಲಿತಾ ದಾನಪ್ಪನವರ, ಪಿ.ಎ.ಶಿರಹಟ್ಟಿ, ವಸ್ತಲಾ ರಾಮದುರ್ಗ, ರುದ್ರಪ್ಪ ಹುಣಸಿಕಟ್ಟಿ, ಅರ್ಜುನ ಗಲಿಗಲಿ, ಶ್ರೀನಿವಾಸ ಪಾಟೀಲ, ರೇಶ್ಮಾ ಪಾರ್ವತಿಮಠ, ಸುಲೋಚನಾ ಪಾರ್ವತಿಮಠ, ಬಸವರಾಜ ಗೌಡಪ್ಪನವರ, ಶ್ರೀನಿವಾಸ ನಾಯಕ, ಶ್ರೀದೇವಿ ಬಾರಕಿ, ಶೈಲಾ ಗೊಗೇರಿ, ಮಂಜುನಾಥ ರಾಮದುರ್ಗ, ಶಶಿಧರ ವಸ್ತçದ ಸೇರಿದಂತೆ ಎಂ.ವಿ.ಪಿ.ಗಳು ಸೇರಿದಂತೆ ಇತರರು ಭಾಗವಹಿಸಿದ್ದರು.

ಎಚ್ ಮಲ್ಲಿಕಾರ್ಜುನ
Editor and Owner Of Kalyansiri.in Kannada Digital News Portal

Leave a Reply

ನಕಲು ಬಲ ರಕ್ಷಿಸಲಾಗಿದೆ