ಕಲ್ಯಾಣಸಿರಿ

ಪೋಲಿಸ್ ಅಧಿಕಾರಿ
ನಾಗರಾಜುಗೆ ರಾಷ್ಟ್ರಪತಿ ಪದಕ ಹುಟ್ಟುರಲ್ಲಿ ಸಂಭ್ರಮ.


ವರದಿ:ಬಂಗಾರಪ್ಪ ಸಿ ಹನೂರು .
ಹನೂರು: ತಾಲೂಕು ವ್ಯಾಪ್ತಿಯ ಕಣ್ಣೂರು ಗ್ರಾಮದ ಪೋಲಿಸ್ ಅಧಿಕಾರಿ ನಾಗರಾಜು ಎಸ್ ರವರಿಗೆ 2023 ನೇ ಸಾಲಿನ ಗಣರಾಜ್ಯೋತ್ಸವದ ಅಂಗವಾಗಿ ಸರ್ಕಾರದಿಂದ ನೀಡುವ ರಾಷ್ಟ್ರಪತಿ ಪದಕಕ್ಕೆ ಭಾಜನರಾಗಿದ್ದಾರೆ. ಇವರಿಗೆ ಗ್ರಾಮಸ್ಥರಿಂದ ಉತ್ತಮ ಶ್ಲಾಘನೀಯ ದೊರೆತಿದೆ ,ಊರಿನ ಮಗ ಸೇವಾ ಪದಕ ಪಡೆದು ತಾಲೂಕಿಗೆ ಕೀರ್ತಿ ತಂದಿದ್ದಾರೆ ಎಂದು ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ , ಇವರು ಮೂಲತಃ ಹನೂರು
ತಾಲೂಕಿನ ಕಣ್ಣೂರು ಗ್ರಾಮದ ದಿ. ಸಿದ್ದೇಗೌಡ ಮತ್ತು ಪುಟ್ಟ ವೀರಮ್ಮ ದಂಪತಿಯ ಕಿರಿಯ ಪುತ್ರ ರಾಗಿರುವ ಇವರು ಪ್ರಾಥಮಿಕ ಶಿಕ್ಷಣವನ್ನು ಕಣ್ಣೂರು ಗ್ರಾಮದಲ್ಲಿ ಪೂರೈಸಿ ಪ್ರೌಢ ಶಿಕ್ಷಣವನ್ನು ಕೊಳ್ಳೇಗಾಲದ ಎಮ್ ಸಿ ಕೆ ಸಿ ಪ್ರೌಢಶಾಲೆಯಲ್ಲಿ ಪೂರೈಸಿ ನಂತರ ಉನ್ನತ ಶಿಕ್ಷಣಕ್ಕಾಗಿ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
2001 ನೇ ಸಾಲಿನಲ್ಲಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹುದ್ದೆಗೆ ಪೋಲಿಸ್ ಇಲಾಖೆಗೆ ನೇಮಕಗೊಂಡು ಪಾವಗಡ ತಾಲ್ಲೂಕಿನ ವೈ.ಎನ್. ಹೊಸಕೋಟೆ ಯಲ್ಲಿ ವೃತ್ತಿ ಪ್ರಾರಂಭಿಸಿ, ಬೆಂಗಳೂರು ಹೆಬ್ಬಗೋಡಿ ಪೊಲೀಸ್ ಠಾಣೆ, ಸಂಚಾರ ಪೊಲೀಸ್ ಠಾಣೆ,ಹಾಗೂ ತುಮಕೂರು ನಗರಗಳಲ್ಲಿ ಸೇವೆ ಸಲ್ಲಿಸಿ 2008ರಲ್ಲಿ ಸರ್ಕಲ್ ಇನ್ಸ್ಪೆಕ್ಟರ್,ಹುದ್ದೆಗೆ ಮುಂಬಡ್ತಿ ಪಡೆದು, ಬೆಂಗಳೂರು ನಗರದ ಮಹಾಲಕ್ಷ್ಮಿ ಪೊಲೀಸ್ ಠಾಣೆ, ಮಾಗಡಿ ರಸ್ತೆ ಸಂಚಾರಿ ಪೊಲೀಸ್ ಠಾಣೆ, ಹಾರೋಹಳ್ಳಿ ವೃತ್ತ ರಾಮನಗರ ಜಿಲ್ಲೆ ,ಡಿ ಆರ್ ಸಿ ಇ ಬೆಂಗಳೂರು ಗ್ರಾಮಾಂತರ, ಆರ್‌ಎಂಸಿ ಯಾರ್ಡ್ ಪೊಲೀಸ್ ಠಾಣೆ, ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ, ಬಿಡಿಎ ಜಾಗೃತಿ ದಳ, ಮತ್ತು ಕುಂಬಳಗೋಡು ಪೊಲೀಸ್ ಠಾಣೆ ಗಳಲ್ಲಿ ವೃತ ನಿರೀಕ್ಷಕರಾಗಿ ಸೇವೆ ಸಲ್ಲಿಸಿ 2021ರ ಸಾಲಿನಲ್ಲಿ ಡಿವೈಎಸ್ಪಿ ಯಾಗಿ ಮುಂಬಡ್ತಿ ಹೊಂದಿದ್ದು ಹಾಲಿ ಡಿಜಿ ಮತ್ತು ಐಜಿಪಿ ಕಚೇರಿ ಬೆಂಗಳೂರು ಇಲ್ಲಿ ಸೇವೆ ಸಲ್ಲಿಸುತ್ತಿರುವ ಇವರು, 2015 ನೇ ಸಾಲಿನಲ್ಲಿ ಮುಖ್ಯಮಂತ್ರಿಗಳ ಚಿನ್ನದ ಪದಕ ಪುರಸ್ಕೃತರಾಗಿದ್ದಾರೆ.
ಇದೀಗ ರಾಷ್ಟ್ರಪತಿಯವರ ಪದಕ ದೊರೆತಿರುವುದು ಶ್ಲಾಘನೀಯ, ಸೇವಾ ಪದಕ ಪಡೆದು ತಾಲೂಕಿಗೆ ಹಾಗೂ ಜಿಲ್ಲೆಗೆ ಕೀರ್ತಿ ತಂದಿರುವ ಇವರಿಗೆ ತಾಲ್ಲೂಕು ಕರ್ನಾಟಕ ಪತ್ರಕರ್ತರ ಸಂಘದ ಗೌರವ ಅಧ್ಯಕ್ಷರಾದಿಯಾಗಿ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರುಗಳು ಅಭಿನಂದನೆ ಸಲ್ಲಿಸಿದ್ದಾರೆ.

ಎಚ್ ಮಲ್ಲಿಕಾರ್ಜುನ
Editor and Owner Of Kalyansiri.in Kannada Digital News Portal

Leave a Reply

ನಕಲು ಬಲ ರಕ್ಷಿಸಲಾಗಿದೆ