ಕಲ್ಯಾಣಸಿರಿ

ಕಾಂಗ್ರೆಸ್ ಬಿಟ್ಟು ಬಿಎಸ್ಪಿ ಪಕ್ಷ ಸೇರಿದ ತಿಪಟೂರು ಕಾಂಗ್ರೆಸ್ ಮುಖಂಡಾ, ಅಶ್ವಥ್ ನಾರಾಯಣ


ತುಮಕೂರು -ಕುರುಬ ಸಮುದಾಯದ ಪ್ರಭಾವಿ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಅಶ್ವಥ್ ನಾರಾಯಣ್ ರವರು ಕಾಂಗ್ರೆಸ್ ಪಕ್ಷದ ಮುಖಂಡರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಕಾಂಗ್ರೆಸ್ ಪಕ್ಷವನ್ನು ತೊರೆದು ಬಿ ಎಸ್ ಪಿ ಪಕ್ಷವನ್ನು ಸೇರ್ಪಡೆಯಾಗಿದ್ದಾರೆ.

ಬಿ ಎಸ್ ಪಿ ಪಕ್ಷದ ಹಿರಿಯ ಮುಖಂಡರ ನೇತೃತ್ವದಲ್ಲಿ ಪಕ್ಷ ಸೇರ್ಪಡೆಯಾದ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು ಕಾಂಗ್ರೆಸ್ ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತರಿಗೆ ಯಾವುದೇ ಮನ್ನಣೆ ನೀಡುತ್ತಿಲ್ಲ ಹಾಗಾಗಿ ಪಕ್ಷದ ಮುಖಂಡರ ನೀತಿಯಿಂದ ಬೇಸತ್ತು ಬಿ ಎಸ್ ಪಿ ಪಕ್ಷದ ತತ್ವ ಸಿದ್ಧಾಂತಗಳನ್ನ ಒಪ್ಪಿ ಬಿಎಸ್ಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದು ಇದುವರೆಗೂ ತುಮಕೂರು ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಮೂರನೇ ಸ್ಥಾನದಲ್ಲಿದ್ದು ಕುರುಬ ಸಮುದಾಯಕ್ಕೆ ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಉತ್ತಮ ಸ್ಥಾನಮಾನ ಸಿಗುತ್ತಿಲ್ಲ ಎಂದರು.
ಇನ್ನು ತಿಪಟೂರು ತಾಲೂಕಿನಲ್ಲಿ ಒಂದು ಲಕ್ಷದ ಮೂವತ್ತು ಸಾವಿರಕ್ಕೂ ಹೆಚ್ಚು ಅಹಿಂದ ಮತಗಳು ಇದ್ದು ತಿಪಟೂರಿನಲ್ಲಿ ನಮ್ಮ ಸಮುದಾಯಕ್ಕೆ ಯಾವುದೇ ಸ್ಥಾನಮಾನ ಸಿಕ್ಕಿಲ್ಲ, ಇನ್ನು ತಿಪಟೂರು ತಾಲೂಕಿನ ಅಹಿಂದ ಸಮುದಾಯದ ಮುಖಂಡರು ತಮಗೆ ಬೆಂಬಲ ಸೂಚಿಸಿದ್ದು ಅವರೊಂದಿಗೆ ಚರ್ಚಿಸಿ ಬಿಎಸ್ಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದು ಮುಂಬರುವ ಚುನಾವಣೆಯಲ್ಲಿ ಬಿ ಎಸ್ ಪಿ ಪಕ್ಷದಿಂದ ಸ್ಪರ್ಧಿಸಿ ಚುನಾವಣೆಯಲ್ಲಿ ಗೆಲ್ಲುವ ಬಗ್ಗೆ ಸ್ಪಷ್ಟಪಡಿಸಿದರು.

ಇನ್ನು ತಿಪಟೂರು ತಾಲೂಕಿನಲ್ಲಿ ಅಹಿಂದ ಸಮುದಾಯ ಸಾಕಷ್ಟು ಪೆಟ್ಟು ತಿಂದಿದೆ ಇದುವರೆಗೂ ಮುಖ್ಯ ವಾಹಿನಿಗೆ ಬರಲು ಸಾಧ್ಯವಾಗಿಲ್ಲ ಹಾಗಾಗಿ ಅಹಿಂದ ನಾಯಕರನ್ನ ಭೇಟಿ ಮಾಡಿ ಚರ್ಚಿಸಿ ತಾವು ಪಕ್ಷ ಸೇರ್ಪಡೆಯಾಗಿರುವುದಾಗಿ ತಿಳಿಸಿದರು.
ಮೇಲ್ವರ್ಗದ ನಾಯಕರ ದಬ್ಬಾಳಿಕೆಯಿಂದ ತಿಪಟೂರಿನ ಅಹಿಂದ ಮತದಾರರು ಹೈರಾಣ ಆಗಿದ್ದಾರೆ.ಇನ್ನು ತುಮಕೂರು ಜಿಲ್ಲೆಯಲ್ಲಿ ಲಕ್ಕಪ್ಪ ಹಾಗೂ ಭಾಸ್ಕರ್ ಅವರನ್ನು ಹೊರತುಪಡಿಸಿದರೆ ಇದುವರೆಗೂ ಕುರುಬ ಸಮುದಾಯಕ್ಕೆ ಯಾವುದೇ ಉತ್ತಮ ಸ್ಥಾನಮಾನ ಸಿಕ್ಕಿಲ್ಲ ಮುಂದಿನ ದಿನದಲ್ಲಿಯೂ ಸಹ ತಮಗೆ ಯಾವುದೇ ಸ್ಥಾನಮಾನ ಸಿಗುವುದಿಲ್ಲ ಎನ್ನುವ ಸ್ಪಷ್ಟ ಸಂದೇಶ ಸಿಕ್ಕ ನಂತರವೇ ಬಿಎಸ್ಪಿ ಪಕ್ಷವನ್ನ ಸೇರ್ಪಡೆಯಾಗಿದ್ದೇನೆ ಎಂದರು.

ಎಚ್ ಮಲ್ಲಿಕಾರ್ಜುನ
Editor and Owner Of Kalyansiri.in Kannada Digital News Portal

Leave a Reply

ನಕಲು ಬಲ ರಕ್ಷಿಸಲಾಗಿದೆ