ಕಲ್ಯಾಣಸಿರಿ

ಇತ್ತಿಚಿನ ದಿನಗಳಲ್ಲಿ ಯುವಕರೆ ಬಿಜೆಪಿ ಪಕ್ಷಕ್ಕೆ ಆಸ್ತಿ :ಡಾಕ್ಟರ್ ದತ್ತೇಶ್ ಕುಮಾರ್ .


ವರದಿ :ಬಂಗಾರಪ್ಪ ಸಿ ಹನೂರು .
ಹನೂರು :ನಮ್ಮ ಪಕ್ಷವು ಪ್ರಪಂಚದಲ್ಲೆ ಅತಿ ಹೆಚ್ಚು ಕಾರ್ಯಕರ್ತರನ್ನು ಹೊಂದಿದ್ದು ಈಗಾಗಲೇ ನಮ್ಮ‌ಪ್ರಧಾನಿಯವರು ಅತ್ಯುತ್ತಮವಾದ ಕೆಲಸ ಮಾಡುತ್ತಿದ್ದು ವಿಶ್ವವೇ ತಿರುಗಿ ನೋಡುವಮನತಾಗಿದೆ ಎಂದು ಬಿ ಜೆ ಪಿ ಪಕ್ಷದ ಜಿಲ್ಲಾ ಉಪಾಧ್ಯಕ್ಷರಾದ ಡಾಕ್ಟರ್
ದತ್ತೇಶ್ ಕುಮಾರ್ ತಿಳಿಸಿದರು .
ವಿಧಾನಸಭಾ ಕ್ಷೇತ್ರದ ತೆಳ್ಳನೂರು ಗ್ರಾಮದಲ್ಲಿ ನಡೆದ ಮನೆ ಮನೆಗೆ ಕರಪತ್ರ ಹಂಚುವ ಮೂಲಕ ಮಾತನಾಡಿದ ಅವರು ಜನವರಿ ಎರಡನೆ ತಾರೀಖಿನಿಂದ ಹನ್ನೆರಡರನೆ ತಾರೀಖಿನವರಿಗೆ ಬೂತ್ ವಿಜಯ ಅಭಿಯಾನ ವನ್ನು ಯಶಸ್ವಿಯಾಗಿ ಮಾಡಿದ್ದೆವಿ ಹಾಗೇಯೆ ಬೂತ್ ವಿಜಯ ಸಂಕಲ್ಪ ಅಭಿಯಾನವನ್ನು ನಮ್ಮ ಜಿಲ್ಲೆಯಲ್ಲಿ ಅಚ್ಚುಕಟ್ಟಾಗಿ ಮಾಡಲಾಗುತ್ತಿದೆ , ಸನ್ಮಾನ್ಯ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಮೇಲೆ ಹಲವಾರು ಜನಪ್ರಿಯ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ ಅವುಗಳಲ್ಲಿ ಅಬಾ ಕಾರ್ಡ್ ,ಕಿಸಾನ್ ಸಮ್ಮಾನ್, ಇದರಲ್ಲಿ ರೈತನ ಖಾತೆಗೆ ಹತ್ತು ಸಾವಿರ ಹಣ ವರ್ಗಾವಣೆ ಮಾಡುವ ಕಾರ್ಯ ಶೂನ್ಯ ಮೊತ್ತದಲ್ಲಿ ಜನದನ್ ಖಾತೆ ತೆರೆಯಲು ಅವಕಾಶ ನಮ್ಮ ಮೋದಿಯವರ ಸಾದನೆ ,ಮೆಕ್ ಇನ್ ಇಂಡಿಯ .ಸ್ಮಾರ್ಟ್ ಸಿಟಿ ಪ್ರಧಾನ ಮಂತ್ರಿ ಅವಾಸ್ ಯೋಜನೆ,ಮುದ್ರ ಯೋಜನೆ ,ಉಜ್ವಲ್ ಯೋಜನೆ ಸ್ವಚ್ಛ ಭಾರತ್ ಯೋಜನೆ , ಇಂತಹ ಹಲವಾರು ಯೋಜನೆಯನ್ನು ನೀಡಿದ ಸರ್ಕಾರ ನಮ್ಮದು ಮುಂದೆಯಿ ಅಭಿವೃದ್ಧಿ ಹೊಂದುವಂತೆ ಮಾಡುತ್ತೆವಿ ,ರಾಜ್ಯದಲ್ಲಿ ಕಮಲ ಅರಳಿಸುವುದೆ ನಮ್ಮ ಮುಂದಿನ ಗುರಿ ನೂರೈವತ್ತಕ್ಕೂ ಹೆಚ್ಚಿನ ಸೀಟನ್ನು ಪಡೆದು ಸರ್ಕಾರ ರಚಿಸಲು ನಾವು ಬದ್ದರಾಗಿದ್ದೆವಿ,ಈಗಾಗಲೇಒಂದು ಕೋಟಿಗೂ ಹೆಚ್ಚು ಫಲಾನುಭವಿಗಳ ಮನೆ ಹಾಗೂ ಮನಸ್ಸನ್ನು ಮುಟ್ಟುತ್ತೆವೆ ,ಒಂದು ಕೋಟಿ ಕರ ಪತ್ರವನ್ನು ಹಂಚಲು ,ಗೊಡೆಗಳ‌ ಮೇಲೆ ಬರಹ ಬರೆಯುತ್ತೆವೆ ಹಾಗೆನೆ, ಎಲ್ಲಾ ಚುನಾಯಿತ ೨೫೩ ಬೂತ್ ನಲ್ಲು ಸಕ್ರಿಯವಾಗಿದ್ದೆವೆ ನಿರಂತರವಾಗಿ ಕಾರ್ಯವನ್ನು ಮಾಡುತ್ತೆವೆ ಹಾಗೂ ಮಹಾಶಕ್ತಿಕೇಂದ್ರವೆಂದು ಮಾಡಲಾಗಿದೆ. ಹನೂರು ಕ್ಷೇತ್ರದಲ್ಲಿ ಅಧಿಕಾರ ಇಡಿಯುವುದರಲ್ಲಿ ನಾವು ಸಪಲರಾಗುತ್ತೆವೆ ಎಂದರು .ಇದೇ ಸಂದರ್ಭದಲ್ಲಿ ತೆಳ್ಳನೂರು ಪಂಚಾಯಿತಿಯ ಗ್ರಾಮಗಳಲ್ಲಿ ವಿಜಯ ಸಂಕಲ್ಪ ಅಭಿಯಾನ ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಡಾ ಎಸ್ ದತ್ತ ಕುಮಾರ್ ತೆಳ್ಳನೂರಿನ ಯುವ ಮುಖಂಡರಾದ ಪ್ರಸನ್ನ ಕುಮಾರ್ ಗ್ರಾಮದ ಮುಖಂಡರಾದ ಕೃಷ್ಣೆಗೌಡ ಸಂತೋಷ್ ಮರಿಗೌಡ ಸಂತೋಷ್ ಗೋವಿಂದ ಆಟೋ ವಿಜಯ್ ರಾಜು ಕೃಷ್ಣ ಶ್ರೀಧರ್ ಶಿವಕುಮಾರ್ ಇನ್ನು ಮುಂತಾದವರು ಭಾಗವಹಿಸಿದ್ದರು

ಎಚ್ ಮಲ್ಲಿಕಾರ್ಜುನ
Editor and Owner Of Kalyansiri.in Kannada Digital News Portal

Leave a Reply

ನಕಲು ಬಲ ರಕ್ಷಿಸಲಾಗಿದೆ