ಕಲ್ಯಾಣಸಿರಿ

ಬೈಕ್-ಗೂಡ್ಸ್ ಟೆಂಪೋ ಮುಖಾಮುಖಿ ಡಿಕ್ಕಿ: ಪಿಡಿಓ ಆಸ್ಪತ್ರೆಗೆ ದಾಖಲು


ವರದಿ:ಬಂಗಾರಪ್ಪ ಸಿ ಹನೂರು .
ಹನೂರು :ಕರ್ತವ್ಯಕ್ಕಾಗಿ ಹಾಜರಾಗುತ್ತಿದ್ದ ಸಮಯದಲ್ಲಿ ಗೂಡ್ಸ್ ಟೆಂಪೋ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮವಾಗಿ ಬೈಕ್ ಸವಾರನಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಇವರನ್ನು ಹನೂರು ತಾಲ್ಲೂಕು ಪಂಚಾಯತಿಯ ದಿನ್ನಳ್ಳಿ ಗ್ರಾಮ ಪಂಚಾಯಿತಿಗೆ ಸೇರಿದ ಪಿಡಿಓ ಸೋಮಶೇಖರ್ ಎಂದು ಗುರುತ್ತಿಸಲಾಗಿದೆ.
ದಿನ್ನಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಗಣ ರಾಜ್ಯೋತ್ಸವ ಕಾರ್ಯಕ್ರಮ ಮುಗಿಸಿ ಚಾಮರಾಜನಗರದಲ್ಲಿ ನಡೆಯುವ ಅಧಿಕಾರಿಗಳ ಸಭೆಗೆ ತೆರಳಲು ಬೈಕ್‍ನಲ್ಲಿ ಹನೂರಿಗೆ ವಾಪಸ್ಸಾಗುತ್ತಿದ್ದ ಸಂದರ್ಭದಲ್ಲಿ
ಎದುರುಗಡೆಯಿಂದ ಬಂದ ಕೋಳಿ ಸಾಗಾಣಿಕೆ ಗೂಡ್ಸ್ ಟೆಂಪೋ ಬೈಕ್‍ಗೆ ಡಿಕ್ಕಿ ಹೊಡೆಯಿತು ಎನ್ನಲಾಗಿದೆ.
ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿರುವ ಸೋಮಶೇಖರ್ ಅವರನ್ನು ರಾಮಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಕಾಮಗೆರೆ ಹೋಲಿ ಕ್ರಾಸ್ ಆಸ್ಪತ್ರೆಗೆ ಕಳಿಸಲಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು

ಎಚ್ ಮಲ್ಲಿಕಾರ್ಜುನ
Editor and Owner Of Kalyansiri.in Kannada Digital News Portal

Leave a Reply

ನಕಲು ಬಲ ರಕ್ಷಿಸಲಾಗಿದೆ