ಕಲ್ಯಾಣಸಿರಿ

ಗಂಗಾವತಿ ಬಿಜೆಪಿ ಕಛೆರಿಯಲ್ಲಿ ಜನೆವರಿ 26 ರ 74 ನೇ ವರ್ಷದ ಗಣರಾಜ್ಯೋತ್ಸವ

ಗಂಗಾವತಿ ಬಿಜೆಪಿ ಕಛೆರಿಯಲ್ಲಿ ಜನೆವರಿ 26 ರ 74 ನೇ ವರ್ಷದ ಗಣರಾಜ್ಯೋತ್ಸವನ್ನಜನಪ್ರಿಯ ಶಾಸಕರಾದ ಶ್ರೀ ಪರಣ್ಣ ಮುನವಳ್ಳಿ ಅವರು ಹಾಗೂ ನಗರ ಮಂಡಲ ಅಧ್ಯಕ್ಷರಾದ ಕಾಶಿನಾಥ ಚಿತ್ರಗಾರ್ ಅವರು ಹಾಗೂ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾದ ರಾಘವೇಂದ್ರ ಶೆಟ್ಟಿ ಅವರು

ಭಾರತದ ಪಿತಾಮಹ ಮಹಾತ್ಮಾ ಗಾಂಧಿಜಿ ಹಾಗೂ ಸಂವಿಧಾನ ಶಿಲ್ಪಿ ಡಾ.ಬಾಬಾ ಸಹೇಬ್ ಅಂಬೇಡ್ಕರ್ ಅವರ ಭಾವಚಿತ್ರಗಳಿಗೆ ಪುಷ್ಪಗಳನ್ನ ಸಲ್ಲಿಸಿ

ಭಾರತದ ತ್ರಿವರ್ಣ ಧ್ವಜವನ್ನ ಹಾರಿಸುವ ಮೂಲಕ ಗಣರಾಜ್ಯೋತ್ಸವವನ್ನ ಆಚರಿಸಿ, ಸಂವಿಧಾನ ರಚೆನೆಯ ಕುರಿತು ಮಾತನಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನರಸಿಂಗ್ ರಾವ್ ಕುಲಕರ್ಣಿ, ಅಕ್ರಮ ಸಕ್ರಮ ಸಮಿತಿ ಸದಸ್ಯರಾದ ಸಿದ್ದಲಿಂಗಯ್ಯ ಸ್ವಾಮಿ ಗಡ್ಡಿಮಠ, ಮಾಜಿ ನಗರ ಸಭೆ ಸದಸ್ಯರಾದ ಹನುಮಂತಪ್ಪ ನಾಯಕ, ಚಂದ್ರಶೇಖರ, ನಗರ ಮಂಡಲ ಪ್ರಧಾನ ಕಾರ್ಯದರ್ಶಿ ಸಂಗಯ್ಯ ಸ್ವಾಮಿ ಸಂಶಿಮಠ, ಶ್ರೀನಿವಾಸ ಧೂಳ, ನಗರ ಯೋಜನ ಪ್ರಾಧಿಕಾರದ ಸದಸ್ಯರಾದ ಅರ್ಜುನ್ ರಾಯ್ಕರ್ ,ಶಿವಪ್ಪ ಪೂಜಾರಿ, ಮಹಿಳಾ ಮಂಡಲ ಅಧ್ಯಕ್ಷರಾದ ರೇಖಾ ಟಿ.ರಾಯಭಾಗಿ, ಗ್ರಾಮಿಣ ಮಂಡಲ ಎಸ್ಟಿ ಮೋರ್ಚ ಅಧ್ಯಕ್ಷರಾದ ಹುಲಿಗೆಮ್ಮ ನಾಯಕ, ಹಾಗೂ ಪಕ್ಷದ ಸರ್ವಸದಸ್ಯರು, ಮುಖಂಡರು ಹಿರಿಯರು , ಕಾರ್ಯಕರ್ತ ಬಂದುಗಳು ಉಪಸ್ಥಿತರಿದ್ದರು

ಎಚ್ ಮಲ್ಲಿಕಾರ್ಜುನ
Editor and Owner Of Kalyansiri.in Kannada Digital News Portal

Leave a Reply

ನಕಲು ಬಲ ರಕ್ಷಿಸಲಾಗಿದೆ