ಕಲ್ಯಾಣಸಿರಿ

74ನೇ ಗಣರಾಜ್ಯೋತ್ಸವ 

ಲೇಖಕರು – ಸಂಗಮೇಶ ಎನ್ ಜವಾದಿ. 

ಭಾರತವು ಆಗಸ್ಟ್ 15,1947ರಂದು ಸ್ವತಂತ್ರವಾದ ನಂತರ ಆಗಸ್ಟ್ 29ರಂದು ಡಾ. ಅಂಬೇಡ್ಕರ್ ರವರ ನೇತೃತ್ವದಲ್ಲಿ ಎರಡು ಸಮಿತಿಯ ರಚನೆ ಮಾಡಲಾಯಿತು.ಅದರಂತೆ ಆ ಸಮಿತಿಗಳು ಸಂವಿಧಾನದ ಕರಡು ಪ್ರತಿಯನ್ನು ತಯಾರಿಸಿ ನವೆಂಬರ್ 4, 1947ರಂದು ಶಾಸನ ಸಭೆಯಲ್ಲಿ ಮಂಡಿಸಿದರು.ಹೀಗೆ ಮಂಡಿಸಿದ ಸಂವಿಧಾನದ ಕರಡು ಪ್ರತಿಯನ್ನು

ನವೆಂಬರ್ 26,1949 ರಂದು ಅಂಗೀಕರಿಸಲ್ಪಟ್ಟು, ಅನೇಕ ಪರಿಶೀಲನೆ ಮತ್ತು ತಿದ್ದುಪಡಿಗಳ ನಂತರ ಜನವರಿ 26,1950ರಂದು ಭಾರತದ ಸಂವಿಧಾನ ಜಾರಿಗೆ ತರಲಾಯಿತು.(ಇದೇ ಕಾರಣಕ್ಕಾಗಿಯೇ ಸ್ವಾತಂತ್ರ್ಯಾ ನಂತರ ಭಾರತದ ಸಂವಿಧಾನವನ್ನು ಈ ದಿನದಂದೇ ಜಾರಿಗೆ ತರಲಾಯಿತು.)ಹಾಗಾಗಿ

ಜನವರಿ 26, 1950 ರಂದು ಐತಿಹಾಸಿಕಗಣರಾಜ್ಯ ದಿನವೆಂದು ಘೋಷಿಸಲಾಯಿತು, ಅಂದಿನಿಂದ ಪ್ರತಿ ವರ್ಷ ಗಣರಾಜ್ಯೋತ್ಸವ ದಿನ ರಾಷ್ಟ್ರದೆಲ್ಲೆಡೆ ದೊಡ್ಡ ಹೆಮ್ಮೆ ಮತ್ತು ಸಂತೋಷ,ಸಡಗರದಿಂದ ಆಚರಣೆ ಮಾಡಲಾಗುತ್ತಿದೆ.

ಹಾಗಾಗಿ ಪ್ರಾಥಮಿಕ,ಪ್ರೌಢ ಶಾಲಾ ಮತ್ತು ಕಾಲೇಜುಗಳು ಸೇರಿದಂತೆ ವಿವಿಧಸಂಘ – ಸಂಸ್ಥೆಗಳು, ಖಾಸಗಿ ಮತ್ತು ಸರ್ಕಾರಿ ಸಂಸ್ಥೆಗಳು ವೈಭವದಿಂದ ಗಣರಾಜ್ಯೋತ್ಸವ ಆಚರಣೆ ಮಾಡುತ್ತಾರೆ.ಇದರ ಪ್ರಯುಕ್ತ ಹಲವು ಸಾಂಸ್ಕೃತಿಕ, ಸಮಾಜಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದುಂಟು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕ ಗಣ್ಯರನ್ನು ಸನ್ಮಾನಿಸುವ ಕಾರ್ಯ ಸಹ ಸಾಗುತ್ತದೆ. ಇದಲ್ಲದೆ ನವದೆಹಲಿಯಲ್ಲಿ ಭಾರತ ಸಶಸ್ತ್ರ ಪಡೆಗಳ ಪ್ರಭಾತಭೇರಿ ಅತ್ಯಂತ ವೈಭವದಿಂದ ನಡೆಯುತ್ತದೆ ಬಂಧುಗಳೆ.

ಗಣರಾಜ್ಯೋತ್ಸವದ ಮಹತ್ವ:

ಭಾರತಕ್ಕೆ ಸ್ವಾತಂತ್ಯ ಲಭಿಸಿದ ಬಳಿಕ ಪೂರ್ಣ ಪ್ರಮಾಣದ ಪ್ರಜಾಪ್ರಭುತ್ವ ಜಾರಿಗೆ ಬಂದ ಬಳಿಕವೂ ಭಾರತದ ಆಡಳಿತ ವ್ಯವಸ್ಥೆ ಒಂದು ನೀತಿಗೆ ಒಳಪಟ್ಟಿರಲಿಲ್ಲ. ಅಂದಿನ ಅತಿದೊಡ್ಡರಾಜಕೀಯ ನಾಯಕರಾದ ಮಹಾತ್ಮಾ ಗಾಂಧಿ, ನೆಹರೂ, ಸುಭಾಶ್ ಚಂದ್ರ ಬೋಸ್, ರಾಜಾಜಿ, ಪಟೇಲ್, ಶಾಸ್ತ್ರೀ ಜೀ,  ಮೊದಲಾದವರ ಮುಂದಾಳತ್ವದಲ್ಲಿ ಲಾಹೋರಿನ ರಾವಿನದಿಯ ತೀರದಲ್ಲಿ ಜನವರಿ ಇಪ್ಪತ್ತಾರರಂದೇ ಸುಮಾರು ಇಪ್ಪತ್ತು ವರ್ಷಗಳ ಹಿಂದೆಯೇ ಸ್ವರಾಜ್ಯ ನಮ್ಮ ಜನ್ಮಸಿದ್ಧ ಹಕ್ಕು ಎಂದು ಪ್ರತಿಪಾದಿಸಲಾಗಿತ್ತು. ಆ ದಿನವೇ ಮಹಾತ್ಮಾಗಾಂಧೀಜಿಯವರು ತಮ್ಮ ದಂಡಿ ಯಾತ್ರೆಯನ್ನೂ ಆರಂಭಿಸಿದ್ದರು. ಹಾಗಾಗಿ 1950 ರ ಜನವರಿ 26 ಕ್ಕೂ ಮೊದಲೇ ಸಂವಿಧಾನ ಸಿದ್ಧವಾಗಿದ್ದರೂ ಸುಮಾರು 2 ತಿಂಗಳ ನಂತರ ಜನವರಿ ಇಪ್ಪತ್ತಾರಂದೇ ಮಂಡಿಸಲಾಯಿತು. ನಿಜವಾಗಿ ಹೇಳಬೇಕೆಂದರೆ ಭಾರತದ ಮೊದಲ ಸ್ವಾತಂತ್ರ್ಯದ ದಿನ ಜನವರಿ ಇಪ್ಪತ್ತಾರೇ ಆಗಿದೆ ಎಂದು ಹೇಳಬಹುದು. ಹಾಗೆ ಸಂವಿಧಾನವು ದೇಶದ ಜನರನ್ನು ಆಳುವ ಸರಕಾರದ ಮೂಲ ರಚನೆಯನ್ನು ನಿರ್ದಿಷ್ಟಪಡಿಸುತ್ತದೆ. ಅದು ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗಗಳನ್ನು ಸರಕಾರದ ಮೂರು ಮುಖ್ಯ ಅಂಗಗಳಾಗಿ ಏರ್ಪಡಿಸುತ್ತದೆ. ಸಂವಿಧಾನವು ಪ್ರತಿ ಅಂಗದ ಅಧಿಕಾರದ ವ್ಯಾಖ್ಯೆಯನ್ನು ನೀಡುವುದಲ್ಲದೆ ಅವುಗಳ ಜವಾಬ್ದಾರಿಯನ್ನೂ ಖಚಿತಗೊಳಿಸುತ್ತದೆ. ವಿಭಿನ್ನ ಅಂಗಗಳ ನಡುವಿನ ಸಂಬಂಧವನ್ನೂ ಜನತೆ ಹಾಗೂ ಸರಕಾರದ ನಡುವಿನ ಸಂಬಂಧವನ್ನೂ ನಿಯಂತ್ರಿಸುತ್ತದೆ. ವಿಶ್ವದಲ್ಲಿಯೇ ಅತ್ಯಂತ ದೊಡ್ಡದಾದ ಸಂವಿಧಾನವಾದ ಭಾರತದ ಸಂವಿಧಾನ ಡಾ.ಬಿ.ಆರ್. ಅಂಬೇಡ್ಕರ್ ರವರ ನೇತೃತ್ವದ ತಂಡ ರಚಿಸಿತ್ತು. ತಂಡದಲ್ಲಿ ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ್, ಗೋಪಾಲಸ್ವಾಮಿ ಅಯ್ಯಂಗಾರ್, ಟಿ.ಟಿ.ಕೃಷ್ಣಮಚಾರಿ, ಡಿ.ಪಿ.ಖೇತಾನ್, ಸರ್ಬೆನೆಗಲ್, ಕನ್ಹಯ್ಯಲಾಲ್ ಮುನ್ಷಿ ಮತ್ತು ಮೊಹಮ್ಮದ್ ಸಾಅದುಲ್ಲಾ ರಿದ್ದರು. 444 ವಿಧಿಗಳನ್ನು 22 ಭಾಗಗಳಲ್ಲಿಯೂ, 10 (ನಂತರ 12) ಅನುಚ್ಛೇದಗಳನ್ನೂ,, 118 ತಿದ್ದುಪಡಿಗಳನ್ನೂಹೊಂದಿರುವ ಈ ಸಂವಿಧಾನದ ಆಂಗ್ಲ ಭಾಷೆಯ ಆವೃತ್ತಿಯು 1,17,369 ಶಬ್ದಗಳನ್ನು ಹೊಂದಿದೆ. ಸಂವಿಧಾನದ ಮೂಲ ಪ್ರತಿ 479 ಪುಟಗಳ, ಕೈಬರಹದಲ್ಲಿ ಬರೆದಿರುವ ಬೃಹತ್ ಗ್ರಂಥವಾಗಿದ್ದು ಅಂದಿನ ಎಲ್ಲಾ ನಾಯಕರು ಈ ಸಂವಿಧಾನದ ಬಗ್ಗೆ ತಮ್ಮ ಒಪ್ಪಿಗೆಯನ್ನು ಸೂಚಿಸಿ ಹಸ್ತಾಕ್ಷರ ನಮೂದಿಸಿದ್ದರು. ಈ ಗ್ರಂಥವನ್ನು ಇಂದಿಗೂ ಸುಸ್ಥಿತಿಯಲ್ಲಿ ಕಾಪಾಡಲಾಗಿದ್ದು ನಮ್ಮ ಪಾರ್ಲಿಮೆಂಟ್ ಭವನದಲ್ಲಿ ಸಂರಕ್ಷಿಸಿಡಲಾಗಿದೆ ಮತ್ತು ಗಣತಂತ್ರ ದಿನಾಚರಣೆಯಲ್ಲಿ ಪ್ರಧಾನ ಮಂತ್ರಿಗಳು ಕಾರ್ಯಕ್ರಮದ ಪ್ರಮುಖ ವ್ಯಕ್ತಿಯಾಗಿದ್ದರೂ ಭಾರತದ ರಾಷ್ಟ್ರಪತಿಗಳು, ದಿನಾಚರಣೆಯ ಅಧ್ಯಕ್ಷರೂ ಆಗಿರುತ್ತಾರೆ. ಅತಿಗಣ್ಯವ್ಯಕ್ತಿಗಳಿರುವ ವೇದಿಕೆಯ ಮುಂದಿನ ರಸ್ತೆಯಲ್ಲಿ ಮೊದಲಿಗೆ ಭಾರತದ ರಕ್ಷಣಾ ವ್ಯವಸ್ಥೆಗಳಾದ ಭೂಸೇನೆ, ನೌಕಾಸೇನೆ ಮತ್ತು ವಾಯುಸೇನೆಯ ಪಡೆಗಳಿಂದ ರಾಷ್ಟ್ರವಂದನೆಯನ್ನು ಸಲ್ಲಿಸಲಾಗುತ್ತದೆ. ಭಾರತದ ರಕ್ಷಣಾ ವ್ಯವಸ್ಥೆಯ ‘Commander in Chief of Indian Armed forces’ ಪದವನ್ನು ಹೊಂದಿರುವ ಭಾರತದ ಅಧ್ಯಕ್ಷರೇ ದೆಹಲಿಯಲ್ಲಿ ರಾಷ್ಟ್ರವಂದನೆಯನ್ನು ಸ್ವೀಕರಿಸುತ್ತಾರೆ. ಪ್ರತಿ ರಾಜ್ಯಗಳಲ್ಲಿ ಆಯಾ ರಾಜ್ಯದ ರಕ್ಷಣಾ ಪಡೆಗಳ ರಾಷ್ಟ್ರವಂದನೆಯನ್ನು ಆಯಾ ರಾಜ್ಯಗಳ ರಾಜ್ಯಪಾಲರು ಸ್ವೀಕರಿಸುತ್ತಾರೆ. ದೆಹಲಿಯಲ್ಲಿಅತಿಗಣ್ಯರ ವೇದಿಕೆಯಲ್ಲಿ ರಾಷ್ಟ್ರನಾಯಕರೊಂದಿಗೆ ಆ ವರ್ಷ ಆಹ್ವಾನಿಸಲ್ಪಟ್ಟ ಯಾವುದಾದರೂ ವಿದೇಶಿ ಗಣ್ಯರು ಅತಿಥಿಗಳಾಗಿ ಉಪಸ್ಥಿತರಿರುತ್ತಾರೆ. ಗಣತಂತ್ರ ದಿನಾಚರಣೆಯ ಉದ್ಘಾಟನೆಯನ್ನು ಪ್ರಧಾನಮಂತ್ರಿಗಳು ನೆರವೇರಿಸುವರು. ನವದೆಹಲಿಯಲ್ಲಿರುವ ಇಂಡಿಯಾ ಗೇಟ್ ಸ್ಮಾರಕ (ಹುತಾತ್ಮರ ನೆನಪಿನ ಸ್ಮಾರಕ) ದಲ್ಲಿ ಅಮರ್ ಜವಾನ್ಜ್ಯೋತಿಯನ್ನು ಸಕಲ ಮಿಲಿಟರಿ ಮರ್ಯಾದೆಗಳೊಂದಿಗೆ ಬೆಳಗಿಸಲಾಗುತ್ತದೆ. ಪ್ರಧಾನ ಮಂತ್ರಿಗಳಿಂದ ಈ ದಿನದ ಮಹತ್ವದ ಬಗ್ಗೆ ಕಿರುಭಾಷಣದ ಬಳಿಕ ಇತರ ಕಾರ್ಯಕ್ರಮಗಳಿಗೆ ಚಾಲನೆ ದೊರಕುತ್ತದೆ. ಪ್ರಥಮ ದಿನಕ್ಕೆ ಪ್ರಧಾನಮಂತ್ರಿಗಳ ಕರ್ತವ್ಯ ಇಲ್ಲಿಗೆ ಮುಗಿಯುತ್ತದೆ. ಗಣರಾಜ್ಯೋತ್ಸವದ ಪ್ರಮುಖ ಅಂಗವಾದ ಪಥಸಂಚಲನ (ಪೆರೇಡ್) ರಾಜ್ ಪಥ್ ನಲ್ಲಿನಡೆಯುತ್ತದೆ. ಈ ರಸ್ತೆಯ ತುಂಬೆಲ್ಲಾ ದೇಶದ ಪ್ರಮುಖ ಸರ್ಕಾರಿ ಮತ್ತು ಐತಿಹಾಸಿಕ ಕಟ್ಟಡಗಳಿವೆ. ರಾಷ್ಟ್ರಪತಿ ಭವನ್ ಮತ್ತು ಇಂಡಿಯಾ ಗೇಟ್ ನಡುವೆ ಈ ಪಥಸಂಚಲನ ಮುಂದುವರೆಯುತ್ತದೆ. 

ಪ್ರತಿವರ್ಷದಂತೆ ಈ ಬಾರಿಯೂ ಜನವರಿ ಇಪ್ಪತ್ತಾರು ಬಂದಿದೆ. ಹೆಚ್ಚಿನವರಿಗೆ ಜನವರಿ ಇಪ್ಪತ್ತಾರು ಎಂದರೆ ಒಂದು ಸರ್ಕಾರಿ ರಜಾದಿನ ನಮ್ಮಲ್ಲಿ ಬಹುತೇಕ ಜನರು ಈ ದಿನಗಳನ್ನು ವಿಶ್ರಾಂತಿಯಲ್ಲಿಯೇ ಕಳೆಯುತ್ತಾರೆ. ಸ್ವಲ್ಪ ದೇಶದ ಬಗ್ಗೆ ಚಿಂತೆ ಇರುವವರು ಮಾತ್ರ ಅವರವರ ಊರಿನ ಗಣತಂತ್ರ ದಿನಾಚರಣೆಯಲ್ಲಿ ಭಾಗವಹಿಸುತ್ತಾರೆ. 

ಭಾರತೀಯ ಸಂವಿಧಾನ – ರಚನಾ ಸಭೆಗಳು:

ಭಾರತೀಯ ನಾಯಕರು ಮತ್ತು ಬ್ರಿಟಿಷ್ ಸಂಪುಟ ನಿಯೋಗದ ಸದಸ್ಯರು ನಡುವೆ ಮಾತುಕತೆಗಳ ಪರಿಣಾಮವಾಗಿ ರಚಿಸಲ್ಪಟ್ಟ ಭಾರತೀಯ ಸಂವಿಧಾನ ರಚನಾ , ಡಿಸೆಂಬರ್ 9 ರಂದು ತನ್ನ ಮೊದಲ ಸಭೆಯಲ್ಲಿ ಹೊಂದಿತ್ತು , ಅಸೆಂಬ್ಲಿಯ 1946 ಉದ್ದೇಶ ಭಾರತ ಸಂವಿಧಾನವನ್ನು ನೀಡುವುದು ಶಾಶ್ವತ ಉದ್ದೇಶ ಹೀಗಾಗಿ ಸಂಪೂರ್ಣವಾಗಿ ಪ್ರಸ್ತಾವಿತ ಸಂವಿಧಾನ ವಿವಿಧ ಅಂಶಗಳನ್ನು ಸಂಶೋಧನೆ ಹಲವಾರು ಸಮಿತಿಗಳಿಗೆ ನೇಮಕ . ಶಿಫಾರಸುಗಳನ್ನು , ಚರ್ಚಿಸಲಾಗಿದೆ ಚರ್ಚೆ ಮತ್ತು ಭಾರತೀಯ ಸಂವಿಧಾನದ ತೀರ್ಮಾನವಾಯಿತು ಅಧಿಕೃತವಾಗಿ ನವೆಂಬರ್ 26 , 1949 ಮೇಲೆ ಮೂರು ವರ್ಷಗಳ ಆರಿಸಿಕೊಳ್ಳಲಾಯಿತು ಮೊದಲು ಅನೇಕ ಬಾರಿ ಪರಿಷ್ಕೃತ ಮಾಡಲಾಯಿತು.

ಸಂವಿಧಾನವು ಜಾರಿಗೆ ಬರುವ,

ಭಾರತ 1947 ರ ಆಗಸ್ಟ್ 15 ರಂದು ಸ್ವತಂತ್ರ ರಾಷ್ಟ್ರವಾದಾಗ ಆದರೂ ಭಾರತದ ಸಂವಿಧಾನ ಅಂತಿಮವಾಗಿ ಜಾರಿಗೆ ಬಂದಾಗ , ಇದು ಜನವರಿ 26, 1950 ರಂದು ಸ್ವಾತಂತ್ರ್ಯ ನಿಜವಾದ ಆತ್ಮ ಅನುಭವಿಸಿತು . ಸಂವಿಧಾನದ ಭಾರತದ ನಾಗರಿಕರಿಗೆ ತಮ್ಮ ಸರ್ಕಾರದ ಆರಿಸುವ ಮೂಲಕ ತಮ್ಮನ್ನು ಆಳುವ ಶಕ್ತಿಯನ್ನು ನೀಡಿತು . ಡಾ.ರಾಜೇಂದ್ರ ಪ್ರಸಾದ್ ಸರ್ಕಾರ ಹೌಸ್ ದರ್ಬಾರ್ ಹಾಲ್ನಲ್ಲಿ ಭಾರತದ ಮೊದಲ ಅಧ್ಯಕ್ಷನಾಗಿ ಸ್ವೀಕರಿಸಿದರು ಮತ್ತು ಈ ಅವರು ರಾಷ್ಟ್ರೀಯ ಧ್ವಜ ಬಿಚ್ಚಿ ಅಲ್ಲಿ ಇರ್ವಿನ್ ಕ್ರೀಡಾಂಗಣಗೆ ಐದು ಮೈಲಿ ಮಾರ್ಗದಲ್ಲಿ ಅಧ್ಯಕ್ಷೀಯ ಡ್ರೈವ್ ನಡೆಯಿತು ಇದಲ್ಲದೆ 

ಭಾರತದ ಶ್ರೇಷ್ಠ ಸಂವಿಧಾನ,ನಮ್ಮ ದೇಶವನ್ನು ಸ್ವತಂತ್ರಗೊಳಿಸುವುದಕ್ಕಾಗಿ ಅನೇಕ ಸ್ವಾತಂತ್ರ್ಯ ಹೋರಾಟಗಾರರು ಪಟ್ಟಿರುವ ಶ್ರಮ, ತ್ಯಾಗ ಹಾಗು ಕಷ್ಟಗಳ ಜ್ಞಾನವನ್ನು ನಾವು ಜನಸಾಮಾನ್ಯರಿಗೆ ತಿಳಿಸಿಕೊಡಬೇಕು. ಅವರು ಸ್ವಾತಂತ್ರ್ಯ ಚಳುವಳಿ ಮತ್ತು ಹೋರಾಟದ ಬಗ್ಗೆ ಆವಶ್ಯಕವಾಗಿ ತಿಳಿದುಕೊಳ್ಳಬೇಕಾಗಿದೆ. ನಮ್ಮ ದೇಶದ ಸ್ವಾತಂತ್ರ್ಯ ಯೋಧರು ಮತ್ತು ಮುಖಂಡರು ಭಾರತವನ್ನು ಬಹಳಷ್ಟು ಪ್ರಯತ್ನ ಹಾಗು ಹೋರಾಟಗಳನ್ನು ಮಾಡಿ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿದ್ದಾರೆ. ನಿಮ್ಮ ಮಕ್ಕಳು ಇದರ ಬಗ್ಗೆ ತಿಳಿದುಕೊಳ್ಳಲು ತುಂಬಾ ಚಿಕ್ಕವರು ಎಂದು ಭಾವಿಸಬೇಡಿ. ಇದನ್ನು ನಮ್ಮ ಮಕ್ಕಳಿಗೆ ಗಣರಾಜ್ಯೋತ್ಸವ ಸಂಧರ್ಭದಲ್ಲಿ ತಿಳಿಸುವ ಪ್ರಯತ್ನ ಮಾಡೋಣ.

ಗಣರಾಜ್ಯ/ ತಂತ್ರ  ಎಂದರೇನು ?   ಮತ್ತು ಗಣರಾಜ್ಯೋತ್ಸವ ದಿನ ಏನನ್ನು ಸೂಚಿಸುತ್ತದೆ ಅಂದರೆ? 

ಗಣರಾಜ್ಯ / ರಿ ಪಬ್ಲಿಕ್– ಎಂದರೆ  ಎಲ್ಲಾ ವಿಷಯಗಳು ಸಾರ್ವಜನಿಕವಾಗಿರುವುದು (ಪಾರದರ್ಶಕವಾಗಿರುವುದು ). ಅಂದರೆ ಒಂದು ಗಣರಾಜ್ಯ ದೇಶದಲ್ಲಿ ಸರ್ಕಾರ ಜನರಿಂದ ರಚನೆಯಾಗಿರುತ್ತದೆ, ಜನರ ಎಲ್ಲಾ ವಿಷಯಗಳನ್ನು ಪರಿಗಣಿಸುವುದರ ಮೂಲಕ ಕಾಳಜಿ ವಹಿಸಲಾಗುತ್ತದೆ. ಗಣರಾಜ್ಯ ರಾಷ್ಟ್ರವನ್ನು ರಾಜನು ಆಳುವುದಿಲ್ಲ.ಆಡಳಿತ ರಾಜನ ಆಳ್ವಿಕೆಗಿಂತ ಉತ್ತಮವಾಗಿರುತ್ತದೆ ಹಾಗೂ ಗಣರಾಜ್ಯೋತ್ಸವ ದಿನದಂದು  ಭಾರತ ಸಂವಿಧಾನದ ರಚನೆಯಾಯಿತು ಮತ್ತು ಗಣರಾಜ್ಯವಾದ ಭಾರತವನ್ನು ರಿಪಬ್ಲಿಕ್ ಕಂಟ್ರಿ ಎಂದು ಘೋಷಿಸಲಾಯಿತು. ಭಾರತವು ಗಣರಾಜ್ಯವಾದದ್ದು ಜನವರಿ 26, 1950 ರಂದು. ಇದರ ಪ್ರಯುಕ್ತ ಈ ದಿನವನ್ನು ಗಣರಾಜ್ಯೋತ್ಸವ  ದಿನವನ್ನಾಗಿ  ಆಚರಿಸಲಾಗುತ್ತದೆ.

1930 ರಲ್ಲಿ ಭಾರತ ಸರ್ಕಾರದ ಕಾಯಿದೆ ಬದಲು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನಿಂದ  ರಚಿಸಲಾದ ಭಾರತದ ಆಡಳಿತ ಕಾಯಿದೆಯ ದಾಖಲೆಯ ಪ್ರತಿಜ್ಞೆಯನ್ನು ತೆಗೆದುಕೊಳ್ಳಲಾಯಿತು. 1950 ರಲ್ಲಿ ಪೂರ್ಣಸ್ವಾರಾಜ್ ಎಂದು  ಘೋಷಿಸಲಾಯಿತು ಹೀಗಾಗಿ 26 ನೇ ಜನವರಿ ರಾಷ್ಟ್ರೀಯ ರಜಾದಿನವಾಗಿ ಘೋಷಿಸಲಾಗಿದೆ.

ಸಂವಿಧಾನ ಎಂದರೇನು? ಮತ್ತು ಸಂವಿಧಾನವನ್ನು ರಚಿಸಿದವರು ಯಾರು ಎಂದರೆ – 

ಸಂವಿಧಾನವೆಂದರೆ ಭಾರತದ ಎಲ್ಲಾ ನಾಗರಿಕರು ಅನುಸರಿಸಬೇಕಾದ ಮೂಲಭೂತ ನಿಯಮ ಮತ್ತು ಹಕ್ಕುಗಳ ಸ್ಥಾಪನೆಗೆ ರಚಿಸಲಾಗಿರುವ ಕಾಯಿದೆ. ಭಾರತವು  ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ ಇಲ್ಲಿ ಕಾನೂನು ಎಲ್ಲರಿಗೂ ಸಮಾನವಾಗಿರುವುದು. &  ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನವನ್ನು ರಚಿಸಿದವರು.

ಭಾರತೀಯ ಸಂವಿಧಾನವು ವಿಶ್ವದ ಅತಿ ಉದ್ದವಾದ ಸಂವಿಧಾನವಾಗಿದ್ದು,  ಇದರಲ್ಲಿ 22 ಭಾಗಗಳಲ್ಲಿ, 12 ವಿವರ ಪಟ್ಟಿ ಮತ್ತು 97 ತಿದ್ದುಪಡಿಗಳಾಗಿ ವಿಂಗಡಿಸಲಾಗಿರುವ  448 ಲೇಖನಗಳನ್ನು ಒಳಗೊಂಡಿದೆ.

ಸಂಸತ್ತಿನ ಗ್ರಂಥಾಲಯದಲ್ಲಿ ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ  ಕೈ ಬರಹದಲ್ಲಿರುವ ಕ್ಯಾಲಿಗ್ರಫೆಡ್ ಪ್ರತಿಗಳನ್ನು ಸಂರಕ್ಷಿಸಲಾಗಿದೆ.ಅವುಗಳನ್ನು ಹೀಲಿಯಂ ತುಂಬಿರುವ ಪೆಟ್ಟಿಗೆಯಲ್ಲಿ  ಇರಿಸಲಾಗಿದೆ.

ಭಾರತದಲ್ಲಿ  ಯಾವುದೇ ರಾಜರ ಆಳ್ವಿಕೆ ಇಲ್ಲ. ಜನರಿಗೆ ಚುನಾವಣೆಯಿಂದ ಅವರ ನಾಯಕರನ್ನು ಆಯ್ಕೆ ಮಾಡುವ ಹಕ್ಕಿದೆ.

ಭಾರತದ ವಿವಿಧ ಸಂಸ್ಕೃತಿಯ ಪ್ರದರ್ಶನ:

ಗಣರಾಜ್ಯೋತ್ಸವದಿನದಂದು ದೆಹಲಿಯ ರಾಜ್ ಪಥ್ ನಲ್ಲಿ ಜಗತ್ಪ್ರಸಿದ್ಧ ರಾಷ್ಟ್ರೀಯ ಪರೇಡ್ ನಡೆಯುತ್ತದೆ.

ಸೈನ್ಯ, ವಾಯುಪಡೆ ಮತ್ತು ನೌಕಾಪಡೆ ನಮ್ಮ ಭಾರತ ದೇಶದ ಸಾಮರ್ಥ್ಯವನ್ನು ತೋರಿಸುತ್ತಾರೆ.

ವೈವಿಧ್ಯತೆಯಲ್ಲಿ ಏಕತೆಯನ್ನು ಪ್ರದರ್ಶಿಸಲಾಗುವುದು. ಪ್ರಪಂಚಕ್ಕೆ  ವಿವಿಧ ಸಾಂಸ್ಕೃತಿಕ ಚಟುವಟಿಕೆಗಳು ಮತ್ತು ಎಲ್ಲಾ ರಾಜ್ಯಗಳ ಟ್ಯಾಬ್ಲಾಯ್ಡ್ಗಳ ಮೂಲಕ ತೋರಿಸಲಾಗುವುದು.ಇನ್ನು ದೆಹಲಿಯ ರಾಜಪಥ ನಲ್ಲಿ ನಮ್ಮ ಸಶಸ್ತ್ರ ಪಡೆಗಳಾದ ಆರ್ಮಿ, ಏರ್ ಫೋರ್ಸ್ ಮತ್ತು ನೌಕಾಪಡೆ ಪರೇಡ್ ನೋಡಲು ಆಕರ್ಷಕವಾಗಿರುತ್ತದೆ.ಇದೆ ಸಂದರ್ಭದಲ್ಲಿಇತರ ದೇಶಗಳಿಂದ ಆಹ್ವಾನಿತರಾದ ಅತಿಥಿಗಳಿಗೆ ಗೌರವ ಸಲ್ಲಿಸಲಾಗುತ್ತದೆ.ಇದಲ್ಲದೇ ಗಣರಾಜ್ಯೋತ್ಸವದಂದು ನೀಡಲಾಗುವ  ಪ್ರಶಸ್ತಿಗಳು ಹೀಗಿವೆ :- 

ಗಣರಾಜ್ಯೋತ್ಸವದಂದು ದೇಶದ ಹುತಾತ್ಮರು ಮತ್ತು ಕೆಚ್ಚೆದೆಯ ನಾಗರಿಕರಿಗೆ ಪ್ರಶಸ್ತಿಗಳನ್ನು ವಿತರಿಸಲಾಗುತ್ತದೆ. ಮಕ್ಕಳಿಗೆ ರಾಷ್ಟ್ರೀಯ ಶೌರ್ಯ ಪ್ರಶಸ್ತಿಯನ್ನು ನೀಡಲಾಗುವುದು.ಮೊದಲನೆಯ ಅತ್ಯುನ್ನತ ಕ್ರಮದಲ್ಲಿ ನಾಗರಿಕರಿಗೆ ಭಾರತ ರತ್ನವನ್ನು ಅಸಾಧಾರಣ ಸೇವೆ ಅಥವಾ ಪ್ರದರ್ಶನಕ್ಕಾಗಿ ನೀಡಲಾಗುತ್ತದೆ,ಎರಡನೆಯ ಅತ್ಯುನ್ನತ ಕ್ರಮದಲ್ಲಿ ಪದ್ಮ ವಿಭೂಷಣವನ್ನು ಅಸಾಧಾರಣ ಸೇವೆಗಾಗಿ ನಾಗರಿಕರಿಗೆ ನೀಡಲಾಗುತ್ತದೆ.ಮೂರನೇ ಉನ್ನತ ಕ್ರಮಾಂಕದ ಪದ್ಮಭೂಷಣವನ್ನು ವಿಶೇಷ ಸೇವೆಗಾಗಿ ನಾಗರಿಕರಿಗೆ ನೀಡಲಾಗುತ್ತದೆ.ನಾಲ್ಕನೇ ಕ್ರಮಾಂಕದ ಪದ್ಮಶ್ರೀ ಪ್ರಶಸ್ತಿ  ಪ್ರಜೆಗಳಿಗೆ ವಿಶೇಷ ಸೇವೆಗಾಗಿ ನೀಡಲಾಗುತ್ತದೆ.ಅಶೋಕ್ ಚಕ್ರ ಮತ್ತು ಕೀರ್ತಿ ಚಕ್ರ ಪ್ರಶಸ್ತಿ ಯನ್ನು  ಯುದ್ಧ ಅಥವಾ ವಿಪತ್ತಿನಲ್ಲಿ ರಾಷ್ಟ್ರಕ್ಕೆ ಸೇವೆ ಹಾಗು ಗೌರವ ಸಲ್ಲಿಸಿರುವ  ಹುತಾತ್ಮರ ಕುಟುಂಬಗಳಿಗೆ ನೀಡಲಾಗುತ್ತದೆ.

ಒಟ್ಟಿನಲ್ಲಿ ಹೇಳುವುದಾದರೆ:

ಜಾಗತಿಕ ಮಟ್ಟದಲ್ಲಿ ಭಾರತ ಬೆಳೆಯುತ್ತೀದೆ. ಈ ದಿಸೆಯಲ್ಲಿ ನಾವುಗಳು ದೇಶದ ಒಳ್ಳಿತಿಗಾಗಿ ಉತ್ತಮ ಅಭಿವೃದ್ಧಿ ಪರ ಕೆಲಸಗಳು ಮಾಡಬೇಕು.ಅಂತರರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಸ್ನೇಹ ಹಾಗೂ ಸೌಹಾರ್ದತೆ ಕಾಪಾಡಿಕೊಂಡು ಬರುವುದು ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಇಂತಹ ಪವಿತ್ರ ದಿನದಂದು ಈ ಐತಿಹಾಸಿಕ ಸುಸಂದರ್ಭದ ಮಾಹಾ ನೆನಪಿಗಾಗಿ ನಾವೆಲ್ಲರೂ ದೇಶದ ರಕ್ಷಣೆಗಾಗಿ ಹಾಗೂ ಸಾಮಾಜಿಕ ಅಭಿವೃದ್ಧಿಗಾಗಿ ಟೊಂಕ ಕಟ್ಟಿ ನಿಂತು ಕೆಲಸ ಮಾಡಬೇಕಾಗಿದೆ. ಪ್ರತಿ ಪ್ರಜೆಗಳ ನೋವುಗಳ – ಕಷ್ಟಕ್ಕೆ ಸ್ಪಂದಿಸುವ ಮೂಲಕ ಅವರ ಜೀವನದ ಅಭಿವೃದ್ಧಿ ಹಿತದೃಷ್ಟಿಯಿಂದ ಹೊಸ ಕ್ರಿಯಾತ್ಮಕ ಯೋಜನೆಗಳು ಒದಗಿಸಲು ಸರ್ಕಾರ ಮುಂದಾಗು ಮೂಲಕ ಅನುಷ್ಠಾನಕ್ಕೆ ತರಬೇಕಾಗಿದೆ. ಇಂತಹ ವೈಚಾರಿಕ ಬೆಳಕಿನೆಡೆಗೆ ನಾವು ಸಾಗಿ ದೇಶವನ್ನು ಉನ್ನತಿ ಕಡೆಗೆ ಕೊಂಡೊಯ್ಯುವ ಮೊಲಕ ಜಾಗತಿಕ ಮಟ್ಟದಲ್ಲಿ ಭಾರತದ ಬಗೆ ಹೆಮ್ಮೆಯ ಮತ್ತು ಶ್ರೇಷ್ಠತೇಯ ಭಾವನೆ ಮೂಡಿಸುವಲ್ಲಿ ನಾವೆಲ್ಲರೂ ಪ್ರಯತ್ನೀಸಬೇಕಾಗಿದೆ.

ಭವ್ಯ ಭಾರತ ಸಂವಿಧಾನದ ಅನ್ವಯ ಸರ್ವರಲ್ಲಿಯೋ ಸಮಾನತೇಯ ಬೀಜವನ್ನು ಬಿತ್ತುವ ಕೆಲಸವನ್ನು ಮಾಡುವುದು ಸೇರಿದಂತೆ ಈ ಸುದಿನದ ಸಂದರ್ಭ ದೇಶಕ್ಕಾಗಿ ಒಳ್ಳೇಯದನ್ನು ಮಾಡುವ ಮನಸ್ಸುಗಳು ಮುಂದೆ ಬರುವುದು ಅತಿ ಅವಶ್ಯಕತೆ ಇದೆ.ಸುಂದರ ಸಂಕಲ್ಪ, ಸದೃಢ ರಾಷ್ಟ್ರ ನಿರ್ಮಾಣಕ್ಕೆ ನಾವೆಲ್ಲರೂ  ಮುಂದಾಗುವ ಮೂಲಕ ಭವ್ಯ ಭಾರತದ ಶ್ರೇಷ್ಠತೆಯ ಹಿರಿಮೆಗೆ ಸಾಕ್ಷಿಯಾಗೋಣ ಹಾಗೂ ದೇಶದ ಗೌರವವನ್ನು ಎತ್ತಿ ಹಿಡಿಯೋಣ.

ಲೇಖಕರು: ಸಂಗಮೇಶ ಎನ್. ಜವಾದಿ.

ಸಾಹಿತಿ, ಪತ್ರಕರ್ತ.

ಜಿಲ್ಲಾಧ್ಯಕ್ಷರು : ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು ಬೀದರ ಜಿಲ್ಲೆ.

Kalyanasiri News
ಎಚ್ ಮಲ್ಲಿಕಾರ್ಜುನ
Editor and Owner Of Kalyansiri.in Kannada Digital News Portal

Leave a Reply

ನಕಲು ಬಲ ರಕ್ಷಿಸಲಾಗಿದೆ