ಕಲ್ಯಾಣಸಿರಿ

ಧರ್ಮ ವ್ಯಕ್ತಿ ಒಬ್ಬನ ವೈಯಕ್ತಿಕ ನಂಬಿಕೆ ಆಗಬೇಕು, ಶಿಕ್ಷಣ,ರಾಜಕೀಯ, ಸಾಮಾಜಿಕ ಜೀವನದಿಂದ ದೂರವಿರಬೇಕು. ನೇತಾಜಿ ಸುಭಾಷ್ ಚಂದ್ರ ಬೋಸ್.

 

ನೇತಾಜಿ ಸುಭಾಷ್ ಚಂದ್ರ ಬೋಸ್ ರವರ  125ನೇ ಜನ್ಮ ವಾರ್ಷಿಕ ಅಂಗವಾಗಿ ಕೊಪ್ಪಳ ತಾಲೂಕಿನ ವಿವಿಧಡೆ ಎಐಡಿವೈಓ ಸಂಘಟನೆ ನೇತೃತ್ವದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.


ಕೊಪ್ಪಳ ನಗರದ ಜಿಲ್ಲಾ ಕ್ರೀಡಾಂಗಣ, ಇಂದಿರಾ ಕ್ಯಾಂಟೀನ್ ಮುಂದೆ  , ಲೇಬರ್ ಸರ್ಕಲ್, ಗಡಿಯಾರ ಕಂಬ,ಎಸ್ ಕೆ ಎಲ್ ಇ ಐಟಿ ಐ ಕಾಲೇಜು, ಹಾಗೂ ಬಿಸ್ರಳ್ಳಿ ಗ್ರಾಮ, ಗಿಣಿಗೇರಿ ಗ್ರಾಮದ ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲೆ, ಕೊನೆಯದಾಗಿ ಸಮಾರೋಪ ಕಾರ್ಯಕ್ರಮವನ್ನು ಶ್ರೀ ಗುರು ಐಟಿಐ ಕಾಲೇಜ್ನಲ್ಲಿ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮವನ್ನು ಉದ್ದೇಶಿಸಿ  ಎಐಡಿವೈಓ ಜಿಲ್ಲಾ ಕಾರ್ಯದರ್ಶಿ ಶರಣು ಪಾಟೀಲ್ ಮಾತನಾಡುತ್ತ ನೇತಾಜಿ ಸುಭಾಷ್ ಚಂದ್ರ ಬೋಸ್ ವಿಚಾರಗಳನ್ನು  ಇವತ್ತಿನ ಆಳುವ ವರ್ಗಕ್ಕೆ ಬೇಕಾಗಿಲ್ಲ. ಅವರ ರಾಜಿ ರಹಿತ ಜೀವನ ಹೋರಾಟದ ಸಂಘರ್ಷವನ್ನು ಇತಿಹಾಸದುದ್ದಕ್ಕೂ ಮುಚ್ಚಿಡಲಾಗುತ್ತಿದೆ. ಎಲ್ಲಿಯವರೆಗೆ  ಶೋಷಣೆ,ಅನ್ಯಾಯ,ಅಸಮಾನತೆ, ಬಡವ ಶ್ರೀಮಂತ ಎನ್ನುವ ತಾರತಮ್ಯ, ಜಾತಿ ಧರ್ಮದ ಕಲಹ ಸಮಸ್ಯೆಗಳ ವಿರುದ್ಧ ಹೋರಾಟ ಮಾಡಲು ನೇತಾಜಿಯವರು  ಸದಾ ಸ್ಪೂರ್ತಿಯಾಗಿರುತ್ತಾರೆ. ಇಂಥ ಸಮಸ್ಯೆಗಳು ಇರಬಾರದೆಂದು ಅವರು ಅವತ್ತೇ ಹಲವಾರು ವಿಚಾರಗಳನ್ನು ಹೇಳಿದ್ದರು. ಕೇವಲ ಬ್ರಿಟಿಷ್ ಬಿಳಿಯರ ಶೋಷಣೆ ಹೋಗಿ ಕರಿಯರ ಶೋಷಣೆ ಶುರುವಾಗುತ್ತೆ.ಶೋಷಣೆ ಇಲ್ಲದ ಸಮಾಜವೆ ನಮ್ಮ ಅಂತಿಮ ಗುರಿ ಎಂಬುದು ನೇತಾಜಿ ಅವರ ನಿಲುವಾಗಿತ್ತು. ಅಂತ ಕ್ರಾಂತಿಕಾರಿ ಹೋರಾಟಕ್ಕೆ ಜನ ಸನ್ನದ್ಧರಾಗಬೇಕೆಂದು ದೇಶದ ಜನಗಳಿಗೆ ಕರೆ ನೀಡಿದ್ದರು. ಅದಕ್ಕಾಗಿ ಅವರು ನೀವು ರಕ್ತ ಕೊಡಿ ನಿಮಗೆ ಸ್ವಾತಂತ್ರ್ಯ ಕೊಡುತ್ತೇನೆ ಎಂಬ ಘೋಷವಾಕ್ಯ ಮೊಳಗಿಸಿದ್ದರು.ಎಂದು ನೇತಾಜಿ ಕುರಿತು ಹೇಳಿದರು.ಜಿಲ್ಲಾ ಅಧ್ಯಕ್ಷ ರಮೇಶ್ ವಂಕಲಕುಂಟಿ,ರಾಜ್ಯ ಸಮಿತಿ ಸದಸ್ಯರಾದ ಶರಣು ಗಡ್ಡಿ, ದೇವರಾಜ್ ಹೊಸಮನಿ, ಮೌನೇಶ್, ಮಂಗಳೇಶ ರಾಠೋಡ್, ಕಿರಣ್ ತಳಕಲ್, ಮಂಜುನಾಥ್, ಪಕೀರೇಶ್, ಕುಮಾರ್, ನಾಗಪ್ಪ, ಭಾರಮಪ್ಪ,
ಸ್ಫೂರ್ತಿದಾಯಕವಾಗಿ ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಯುವಕರು ,ಸಾಮಾನ್ಯ ಜನರು, ಕಟ್ಟಡ ಕಾರ್ಮಿಕರು, ಆಸಕ್ತಿಯಿಂದ ಭಾಗವಹಿಸಿದ್ದರು.

Kalyanasiri News
ಎಚ್ ಮಲ್ಲಿಕಾರ್ಜುನ
Editor and Owner Of Kalyansiri.in Kannada Digital News Portal

Leave a Reply

ನಕಲು ಬಲ ರಕ್ಷಿಸಲಾಗಿದೆ