
ಗಂಗಾವತಿ:ಕನ್ನಡ ಸಾಹಿತ್ಯ ಪರಿಷತ್ತಿನ ಗಂಗಾವತಿ ತಾಲ್ಲೂಕು ಘಟಕದ 8ನೇ ಸಮ್ಮೇಳನವನ್ನು ಮುಂದಿನ ಫೆಬ್ರವರಿ ತಿಂಗಳ ಅಂತ್ಯದಲ್ಲಿ ಆಯೋಜಿಸುವ ಬಗ್ಗೆ ಕಸಾಪದ ತಾಲ್ಲೂಕು ಅಧ್ಯಕ್ಷ ಶ್ರೀನಿವಾಸ ಅಂಗಡಿ ನೇತೃತ್ವದಲ್ಲಿ ಸಭೆ ಸೇರಿದ್ದ ಕಾರ್ಯಕಾರಿ ಮಂಡಳಿಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ತಾಲ್ಲೂಕು ಪಂಚಾಯಿತಿ ಆವರಣದಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ನಡೆದ ಕಾರ್ಯಕಾರಿ ಸಭೆಯಲ್ಲಿ ಈ ಬಗ್ಗೆ ಚರ್ಚ ನಡೆಸಲಾಯಿತು. ಫೆಬ್ರವರಿ 25,26 ಅಥವಾ 26,27ರಂದು ಸಮ್ಮೇಳನ ಆಯೋಜಿಸುವ ಬಗ್ಗೆ ಚರ್ಚಿಸಲಾಯಿತು.
ಮಾರ್ಚ ತಿಂಗಳ ಬಳಿಕ ರಾಜ್ಯ ವಿಧಾನಸಭೆಗೆ ಚುನಾವಣೆ ಘೊಷಣೆಯಾಗಿ ನೀತಿ ಸಂಹಿತೆ ಜಾರಿಯಾದರೆ ಸಮ್ಮೇಳನ ಆಯೋಜಿಸುವುದು ಕಷ್ಟ. ಅಲ್ಲದೇ ಮಾರ್ಚ್ ತಿಂಗಳ ಬಳಿಕ ಮಕ್ಕಳ ವಾರ್ಷಿಕ ಪರೀಕ್ಷೆಗಳು ಆರಂಭವಾಗಲಿವೆ. ಹೀಗಾಗಿ ಅತ್ತ ಮಕ್ಕಳಿಗೂ ಇತ್ತ ಶಿಕ್ಷಕರಿಗೂ ಸಮಸ್ಯೆಯಾಗಲಿದೆ ಎಂಬ ಅಂಶ ಚರ್ಚೆ ಯಾಯಿತು.
ಬಳಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶ್ರೀನಿವಾಸ ಅಂಗಡಿ, ಎಲ್ಲಾ ವಿಷಯಗಳನ್ನು ಗಮನದಲ್ಲಿರಿಸಿಕೊಂಡು ಸೂಕ್ತ ಎನಿಸುವ ಮತ್ತು ಯಾರಿಗೂ ತೊಂದರೆಯಾಗದಂತೆ ಸಮ್ಮೇಳನಕ್ಕೆ ದಿನಾಂಕ ನಿಗಧಿ ಮಾಡಲಾಗುವುದು. ಫೆಬ್ರವರಿ ಮಾಸಾಂತ್ಯಕ್ಕೆ ತಪ್ಪಿದ್ದಲ್ಲಿ ಮಾರ್ಚ್ ಮೊದಲ ವಾರದಲ್ಲಿ ಆಯೋಜನೆ ಮಾಡಲಾಗುವುದು.
ದಿನಾಂಕ ನಿಗಧಿ ಬಗ್ಗೆ ಕಸಾಪದ ಕಾರ್ಯಕಾರಿ ಮಂಡಳಿಯ ಪದಾಧಿಕಾರಿಗಳು ಶೀಘ್ರದಲ್ಲಿಯೆ ಮತ್ತೆ ಸಭೆ ಆಯೋಜಿಸಿ ನಿರ್ಣಯ ಕೈಗೊಳ್ಳಲಿದ್ದಾರೆ. ಎರಡು ದಿನಗಳ ಕಾಲ ಸಮ್ಮೇಳನ ಆಯೋಜಿಸುವ ಬಗ್ಗೆ ನಿರ್ಣಯ ಕೈಗೊಳ್ಳಲಾಗಿದೆ ಎಂದರು.
ಸಮ್ಮೇಳನ ಅಧ್ಯಕ್ಷರಾಯ್ಕೆಯ ಬಗ್ಗೆ ನಡೆದ ಚಚರ್ೆಯಲ್ಲಿ ಸಾಮಾಜಿಕ ನ್ಯಾಯ, ಸಾಹಿತ್ಯಕ ವಲಯದಲ್ಲಿನ ಸೇವೆ, ವಯೋಮಿತಿ ಮೀರುತ್ತಿರುವ, ಮಹಿಳೆರಿಗೆ ಆದ್ಯತೆ ನೀಡುವ ಬಗ್ಗೆ ಚರ್ಚೆ ನಡೆಯಿತು. ಅಲ್ಲದೇ ಸಮ್ಮೇಳನ ಚಟುವಟಿಕೆ ನಿರಂತವಾಗಿ ನಡೆಯುವ ಸಂಬಂಧ ಶೀಘ್ರ ಕಚೇರಿ ಸ್ಥಾಪಿಸುವ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು.
ಕಸಾಪ ಗಂಗಾವತಿ ತಾಲ್ಲೂಕು ಘಟಕದ ಕಾರ್ಯದಶರ್ಿ ಶಿವಾನಂದ ತಿಮ್ಮಾಪುರ, ರುದ್ರೇಶ ಮಡಿವಾಳರ, ಕೋಶಾಧ್ಯಕ್ಷ ಚಂದ್ರಶೇಖರ ಅಕ್ಕಿ, ಪದಾಧಿಕಾರಿಗಳಾದ ಶ್ರೀನಿವಾಸ ಎಂ.ಜೆ, ಮಂಜುನಾಥ ಮಸ್ಕಿ, ಮಾರುತಿ ಐಲಿ, ವಿರುಪಾಕ್ಷಪ್ಪ ಸಿರವಾರ, ಟಿ. ಶಿವಕಾಂತ, ಮೈಲಾರಪ್ಪ ಬೂದಿಹಾಳ, ಶರಣಪ್ಪ ತಳ್ಳಿ ಇದ್ದರು.