ಕಲ್ಯಾಣಸಿರಿ

ಸ.ಶರಣಪ್ಪ ಪಾಟೀಲ್ ವಿದ್ಯಾರ್ಥಿ ಇದ್ದಾಗಲೆ ವಿದ್ಯಾರ್ಥಿಗಳ ಪರ ಹೋರಾಟ ಮನೋಭಾವನೆ ಬೆಳೆಸಿಕೊಂಡವರು

ಯಲಬುರ್ಗಾ:. ಸ.ಶರಣಪ್ಪ ಪಾಟೀಲ್ ಅವರು ಹೈಸ್ಕೂಲ್ ಶಿಕ್ಷಣ ಪಡೆಯುವ ಸಂದರ್ಭದಲ್ಲಿಯೇ ವಿದ್ಯಾರ್ಥಿಗಳ ಪರ ಹೋರಾಟ ಮನೋಭಾವನೆ ಬೆಳೆಸಿಕೊಂಡು ಬಳಿಕ ಪತ್ರಿಕಾ ರಂಗಕ್ಕೆ ಬಂದು ಪ್ರಭಾವ ವರದಿಗಳ ಮೂಲಕ ಸಾಧನೆ ಮಾಡಿ ತಮ್ಮ ಸ್ವಂತ ಪತ್ರಿಕೆ ಹಾಯ್ ಕೊಪ್ಪಳ ಪಾಕ್ಷಿಕ ಪತ್ರಿಕೆ ತೆರೆದು ಜನತೆಗೆ ಸುದ್ದಿಗಳ ತಲುಪಿಸುವ ಕಾರ್ಯದಲ್ಲಿ ತೊಡಗಿರುವ ಕಾರ್ಯ ಶ್ಲಾಘನೀಯ ಎಂದು ಕರ್ನಾಟಕ ಪತ್ರಕರ್ತರ ಸಂಘದ ಯಲಬುರ್ಗಾ ತಾಲೂಕ ಅಧ್ಯಕ್ಷ ಖಾಜಾವಲಿ ಜರಕುಂಟಿ ಹೇಳಿದರು. ಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜ್ ನಲ್ಲಿ ಮಂಗಳವಾರ ಸ.ಶರಣಪ್ಪ ಪಾಟೀಲ್ ಸಂಪಾದಕತ್ವದ ಹಾಯ್ ಕೊಪ್ಪಳ ಪತ್ರಿಕೆ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಮೊದಲು ರಾಜ್ಯಮಟ್ಟದ ಮತ್ತು ಪ್ರಾದೇಶಿಕ ಪತ್ರಿಕೆಗಳಲ್ಲಿ 5ವರ್ಷ ಸೇವೆ ಸಲ್ಲಿಸಿ ಬಳಿಕ ತಮ್ಮ ಸ್ವಂತ ಪತ್ರಿಕೆ ತೆರೆದರು ಅವರ ವರದಿಗಳು ಇಂದಿಗೂ ಪ್ರಭಾವ ಬೀರುತ್ತಿದ್ದು ಇನ್ನೂ ಹೆಚ್ಚು ಅವರ ಪತ್ರಿಕೆ ಬೆಳೆಯುವಂತಾಗಲಿ ಎಂದರು. ಬಳಿಕ ಸಂಪಾದಕ ಸ.ಶರಣಪ್ಪ ಪಾಟೀಲ್ ಮಾತನಾಡಿ ಮೊದಲು ನೆರಳು ಪತ್ರಿಕೆ ವರದಿಗಾರನಾಗಿ ಸೇವೆ ಸಲ್ಲಿಸುತ್ತಾ ಜನಪ್ರತಿನಿಧಿಗಳ ಕುರಿತು ವರದಿ ಬಿತ್ತರಿಸುತ್ತಾ ಬಂದಿದ್ದು ಇಂದಿಗೂ ಜನ ಹಾಯ್ ಕೊಪ್ಪಳ ಪತ್ರಿಕೆಯನ್ನು ಕೊಂಡು ಓದುತ್ತಾರೆ ಎಂದರು. ಬಳಿಕ ಸರಕಾರಿ ಪ್ರಥಮ ದರ್ಜೆ ಕಾಲೇಜ್ ಪ್ರಾಂಶುಪಾಲ ಡಾ.ಶಿವರಾಜ್ ಗುರಿಕಾರ ಸ.ಶರಣಪ್ಪ ಪಾಟೀಲ್ ಅವರಿಗೆ ಸನ್ಮಾನಿಸಿದರು. ಮುಖಂಡರಾದ ಸಿಎಚ್ ಪೊಲೀಸ್ ಪಾಟೀಲ್, ಸಂಗಪ್ಪ ಬಂಡಿ ಸೇರಿ ಇತರರಿದ್ದರು.

Kalyanasiri News
ಎಚ್ ಮಲ್ಲಿಕಾರ್ಜುನ
Editor and Owner Of Kalyansiri.in Kannada Digital News Portal

Leave a Reply

ನಕಲು ಬಲ ರಕ್ಷಿಸಲಾಗಿದೆ