ಕಲ್ಯಾಣಸಿರಿ

ನಂದವಾಡಿಗಿ ಶೆಲೆಯಲ್ಲಿ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ

ನಂದವಾಡಗಿ : ಸ ಹೆ ಮ ಹಿ ಪ್ರಾ ಶಾಲೆ ದಿನಾಂಕ 24/01/2023 ರಂದು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನು ಆಚರಿಸಲಾಯಿತು.

ಈ ವೇಳೆಯಲ್ಲಿ ಕಾರ್ಯಕ್ರಮದ ಮುಖ್ಯ ಅತಿಥಿ ಸ್ಥಾನವನ್ನು ವಹಿಸಿಕೊಂಡು ಶ್ರೀಮತಿ ಜ್ಯೋತಿರವರು ಇಂದಿನ ಕಾಲದಲ್ಲಿ ಹೆಣ್ಣಿನ ಪಾತ್ರ, ಮಹತ್ವ ಬಗ್ಗೆ ಮಾತನಾಡಿದರು. ಶ್ರೀಮತಿ ಜಿ ಆರ್ ನದಾಫ್ ಹೆಣ್ಣು ದೇಶದ ಕಣ್ಣು ಎಂದು ವಿವರಿಸಿದರು.

ಗುರುಗಳಾದ ಶ್ರೀ ಬಸವರಾಜ ಬಲಕುಂದಿ ಹಾಗೂ ಡಾ. ವಿಶ್ವನಾಥ ತೋಟಿ ರವರು ಹೆಣ್ಣು ದೇಶದ ಶಕ್ತಿ, ಆಕೆಯನ್ನು ಗೌರವ ಭಾವನೆಯೊಂದಿಗೆ ನೋಡಬೇಕು. ಹೆಣ್ಣಿನ ರಕ್ಷಣೆ, ಸುರಕ್ಷಾ ಕ್ರಮಗಳನ್ನು ಹಾಗೂ ಶಿಕ್ಷಣದ ಬಗ್ಗೆ, ಸಮಾನತೆ ವಿಚಾರಗಳನ್ನು ಹಂಚಿಕೊಂಡರು.

ಕಾರ್ಯಕ್ರಮದಲ್ಲಿ NGO ಸದಸ್ಯರಾದ ಕುಮಾರಿ ಪವಿತ್ರಾ ಹಡಪದ ಅತಿಥಿ ಸ್ಥಾನ ವಹಿಸಿ, ಹೆಣ್ಣಿನ ರಕ್ಷಣೆ ಮತ್ತು ಸುರಕ್ಷಾ ಕಾನೂನು ನಿಯಮಗಳನ್ನು ತಿಳಿಸಿದರು.

ಎಲ್ಲಾ ಹೆಣ್ಣು ಮಕ್ಕಳು ಕಾರ್ಯಕ್ರಮದಲ್ಲಿ ಸಂತೋಷದಿಂದ ಭಾಗವಹಿಸಿ ಹಲವಾರು ವಿಚಾರಗಳನ್ನು ತಿಳಿದುಕೊಂಡು ಹೆಣ್ಣು ಮಕ್ಕಳ ದಿನವನ್ನು ಯಶಸ್ವಿಗೊಳಿಸಿದರು.

ಇದೇ ಸಂದರ್ಭದಲ್ಲಿ ಶಾಲಾ ಮುಖ್ಯಗುರು ಶ್ರೀ ಪ್ರಭಯ್ಯ ಲೂತಿಮಠ, ಸಹ ಶಿಕ್ಷಕರಾದ ಎಸ್ ವಿ ಬಳುಲದ, ಶಿಕ್ಷಕಿಯರಾದ ಶ್ರೀಮತಿ ಜ್ಯೋತಿ, ಜಿ ಆರ್ ನದಾಫ್, ವಿ ಬಿ ಕುಂಬಾರ, ಗುರುಗಳಾದ ಬಸವರಾಜ ಬಲಕುಂದಿ, ವಿಶ್ವನಾಥ ತೋಟಿ ಹಾಗೂ ಶಾಲಾ ಮಂತ್ರಿ ಮಂಡಲ, ಪ್ರೇರಣಾ ಕ್ಲಬ್ ಅಧ್ಯಕ್ಷರು, ಸದಸ್ಯರು,ವಿದ್ಯಾರ್ಥಿನಿಯರು ಹಾಜರಿದ್ದರು.

ಕಾರ್ಯಕ್ರಮದಲ್ಲಿ ಕುಮಾರಿ ಐಶ್ವರ್ಯ ಬಳುಲದ ನಿರೂಪಿಸಿದರು, ವಿದ್ಯಾಶ್ರೀ ಚಿನ್ನಾಪುರ ಸ್ವಾಗತಿಸಿದರು, ಪ್ರೇರಣಾ ಕ್ಲಬ್ ಅಧ್ಯಕ್ಷರಾದ ಗಂಗಮ್ಮ ಗುರಿಕಾರ ವಂದಿಸಿದರು.

Kalyanasiri News
ಎಚ್ ಮಲ್ಲಿಕಾರ್ಜುನ
Editor and Owner Of Kalyansiri.in Kannada Digital News Portal

Leave a Reply

ನಕಲು ಬಲ ರಕ್ಷಿಸಲಾಗಿದೆ