ಕಲ್ಯಾಣಸಿರಿ

ಸರಳತೆಯಿಂದ ಜರುಗಿದ ಮಾರ್ಕಂಡೇಶ್ವರ ಜಯಂತಿ..

ಗಂಗಾವತಿ: ಗಂಗಾವತಿ ನಗರದ ರಾಯಚೂರು ರಸ್ತೆಯಲ್ಲಿರುವ ಶ್ರೀ ಮಾರ್ಕಂಡೇಶ್ವರ ವೃತ್ತದಲ್ಲಿ ಶ್ರೀಪದ್ಮಶಾಲಿ ಸಮಾಜದ ಬಾಂಧವರು ಶ್ರೀ ಭಕ್ತ ಮಾರ್ಕಂಡಯ್ಯನ ಜಯಂತಿಯನ್ನು ಅತ್ಯಂತ ಸರಳತೆಯಿಂದ ಸಂಭ್ರಮದಿಂದ ಆಚರಿಸಲಾಯಿತು.

ಶ್ರೀ ಮಾರ್ಕಂಡೇಶ್ವರ ಭಾವಚಿತ್ರಕ್ಕೆ ಪುಷ್ಪ ಮಾಲೆ ಹಾಕುವುದರ ಮೂಲಕ ಪದ್ಮಶಾಲಿ ಸಮಾಜದ ಜಿಲ್ಲಾಧ್ಯಕ್ಷರಾದ ಕೊಂಕತಿ ಕಾಳಪ್ಪನವರು ಜಯಂತಿಗೆ ಚಾಲನೆಯನ್ನು ನೀಡಿದರು. ನಂತರ ಮಾತನಾಡಿದ ಅವರು ಬ್ರಹ್ಮ ಮಾನಸ ಸುಪುತ್ರರಾದ ಭ್ರುಗು ಮಹಾಋಷಿ ಸಂತತಿಯಲ್ಲಿ ಜನಿಸಿದ್ದ, ಭ್ರುಕಂಡು ಮಹಾ ಮುನಿ ಋಷಿಗಳಿಗೆ ಬಹಳ ವರ್ಷಗಳ ಕಾಲ ಮಕ್ಕಳಿರಲಿಲ್ಲ, ಮುನಿಗಳು ಮಕ್ಕಳಿಗಾಗಿ ಪರಶಿವನ ಹತ್ತಿರ ಗೋರ ತಪಸ್ಸು ಮಾಡುತ್ತಾರೆ, ತಪಸ್ಸನ್ನು ಮೆಚ್ಚಿ ಪರಶಿವ ಪ್ರತ್ಯಕ್ಷರಾಗಿ ಮುನಿ ಋಷಿಗಳಿಗೆ ಪರಮಜ್ಞಾನಿ ಅಲ್ಪ ಆಯುಷ್ಯ ಮಗ ಬೇಕೂ, ಅಥವಾ ದಡ್ಡ ದೀರ್ಘಾಯುಷ್ಯ ಮಗ ಬೇಕೂ ಎಂದು ಕೇಳುತ್ತಾರೆ, ಆದರೆ ಋಷಿ ಮುನಿಗಳು ಅಲ್ಪ ಆಯುಷ್ಯ ಇದ್ದರೂ ಜ್ಞಾನಿ ಆಗಿರಬೇಕೆಂದು ಶಿವನಲ್ಲಿ ಬೇಡಿಕೊಳ್ಳುತ್ತಾರೆ, ಅದರಂತೆ ಮಾರ್ಕಂಡೇಶ್ವರ ಅಲ್ಪ ಆಯುಷ್ಯದೊಂದಿಗೆ ಜನಿಸುತ್ತಾರೆ, ಶಿವನ ಪರಮ ಭಕ್ತರಾದ ಮಾರ್ಕಂಡೇಯನ ಆಯುಷ್ಯ ಮುಗಿದ ಮೇಲೆ, ಒಂದು ದಿನ ಬೆಟ್ಟದ ಮೇಲೆ ಶಿವನ ಪೂಜೆ ಮಾಡುವಾಗ ಮಾರ್ಕಂಡೇಯನ ಪ್ರಾಣವನ್ನು ಕೊಂಡೊಯ್ಯಲು ಯಮಧರ್ಮರಾಯನು ಬಂದು ಮಾರ್ಕಂಡೇಯನ ಕೊರಳಿಗೆ ತನ್ನ ಪಾಶವನ್ನು ಹಾಕಿದಾಗ, ಮಾರ್ಕಂಡೇಶ್ವರ ಶಿವನನ್ನು ಶಿವಲಿಂಗವನ್ನು ತಬ್ಬಿ ಇಡಿಯುತ್ತಾರೆ, ಆವಾಗ ಸಾಕ್ಷಾತ್ ಶಿವನು ಪ್ರತ್ಯಕ್ಷನಾಗಿ ಮಾರ್ಕಂಡೇಯನಿಗೆ ಚಿರಂಜೀವಿಯಾಗಿ ಇರುವ ವರವನ್ನು ನೀಡುತ್ತಾನೆ, ಅಂತಹ ಪರಮಭಕ್ತ ಮಾರ್ಕಂಡೇಯನ ಕುಲದಲ್ಲಿ ಜನಿಸಿದ ನಾವುಗಳು ದಿನನಿತ್ಯ ಕಾಯಕವೇ ಕೈಲಾಸ ಎಂಬಂತೆ, ನಮ್ಮ ನಮ್ಮ ಕುಲ ವೃತ್ತಿಗಳೊಂದಿಗೆ ಹಲವಾರು ಉದ್ಯೋಗಗಳಲ್ಲಿ ಯುವಕರು ಮುಂದೆ ಬರಬೇಕು, ಸಮಾಜದಲ್ಲಿ ಎಲ್ಲರೂ ಸಮಾನತೆಯಿಂದ ಬದುಕಬೇಕು, ಸಮಾಜವನ್ನು ಮುಂದಕ್ಕೆ ಕೊಂಡೊಯ್ಯಲು ಶಿಕ್ಷಣ ಇಂದು ಅತ್ಯಗತ್ಯವಾಗಿದೆ, ಪ್ರತಿ ಕುಟುಂಬದಲ್ಲಿ ಸಹ ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಿ ಮಕ್ಕಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕೆಂದು ಸಮಾಜಕ್ಕೆ ಪದ್ಮಶಾಲಿ ಸಮಾಜದ ಕೊಂಕತಿ ಕಾಳಪ್ಪನವರು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಷಣ್ಮುಖಪ್ಪ ಚೆಲವೇರಿ, ನಾಗಮ್ಮನಯ್ಯ ಅವ್ವರಾ, ಸಂಜೀವ ಕುಮಾರ್ ನೇಕಾರ್, ಪರಶುರಾಮ ಕೊಂಕತಿ, ಗೋಪಾಲ ಜಕ್ಕ, ನಾರಾಯಣ ವಗ್ಗ, ಕಣಿವೆಯಪ್ಪ ಕೊಂಕತಿ, ಲಕ್ಷ್ಮಣ ಬಡಗಲ್ಲು, ರಾಮಕೃಷ್ಣಪ್ಪ ಚಿಲವೇರಿ, ಅಶೋಕ ಚಿಲಕ, ವಿಠಲ ಗಾಜಲು ಸೇರಿದಂತೆ ಸಮಾಜ ಬಾಂಧವರು ಉಪಸ್ಥಿತರಿದ್ದರು.

Kalyanasiri News
ಎಚ್ ಮಲ್ಲಿಕಾರ್ಜುನ
Editor and Owner Of Kalyansiri.in Kannada Digital News Portal

Leave a Reply

ನಕಲು ಬಲ ರಕ್ಷಿಸಲಾಗಿದೆ