
ವರದಿ:ಬಂಗಾರಪ್ಪ ಸಿ ಹನೂರು.
ಹನೂರು :ವರಿಷ್ಠರ ಆದೇಶದಂತೆಜನವರಿ 21 ರಿಂದ 29 ವರೆಗೆ ಬಿಜೆಪಿ ಪಕ್ಷದ ವತಿಯಿಂದ ವಿಜಯ ಸಂಕಲ್ಪ ಅಭಿಯಾನ ವನ್ನು ಹಮ್ಮಿಕೊಂಡಿದ್ದು ಅಭಿಯಾನದ ವಿಷಯವಾಗಿ ಈ ದಿನ ಪಾಳ್ಯ ಮಹಾಶಕ್ತಿ ಕೇಂದ್ರ ದಲ್ಲಿ ಪೂರ್ವಭಾವಿ ಸಭೆಯನ್ನು ನಡೆಸಲಾಯಿತು ಮತ್ತು ಯಶಸ್ವಿಯಾಗಿ ನಿರ್ವಹಿಸಿದ್ದೆವಿ ಎಂದು ಚಾಮರಾಜನಗರ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಡಾ. ಎಸ್. ದತ್ತೇಶ್ ಕುಮಾರ್ ತಿಳಿಸಿದರು.
ನಂತರ ಪಾಳ್ಯ ಶಕ್ತಿ ಕೇಂದ್ರದಲ್ಲಿ ಮಾತನಾಡಿದ ಅವರು ರಾಜ್ಯಾದ್ಯಂತ ಜನವರಿ 21 ರಿಂದ 29ರ ವರೆಗೆ ನಡೆಯುತ್ತಿರುವ ವಿಜಯ ಸಂಕಲ್ಪ ಅಭಿಯಾನಕ್ಕೆ ಇಂದು ಹನೂರು ಮಂಡಲದ ಪಾಳ್ಯ ಗ್ರಾಮದ ಬೂತ್ ಗಳಲ್ಲಿ ಮನೆಮನೆಗೆ ಕರಪತ್ರ ಹಂಚುವ ಮೂಲಕ ವಿಜಯ ಸಂಕಲ್ಪ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ನಾವೆಲ್ಲರೂ 8000090009 ಕೆ ಕರೆ ಮಾಡಿ ಬಿಜೆಪಿ ಸದಸ್ಯರಾಗೋಣ ರಾಷ್ಟ್ರ ನಿರ್ಮಾಣದಲ್ಲಿ ನಾವೆಲ್ಲರೂ ಸಹಭಾಗಿಯಾಗಿ ಹೋಗೊಣ ಎಂದರು.ಇದೇ ಸಂದರ್ಭದಲ್ಲಿ ವಿಜಯ ಸಂಕಲ್ಪ ಅಭಿಯಾನದ ಸಹ ಸಂಚಾಲಕರಾದ ಮೋಹನ್, ಪಾಳ್ಯ ಶಕ್ತಿ ಕೇಂದ್ರದ ಅಧ್ಯಕ್ಷರಾದ ಮಹೇಶ್, ಪಕ್ಷದ ಮುಖಂಡರುಗಳಾದ ಶಿವಕುಮಾರ್, ಶಿವಮೂರ್ತಿ , ಸಿದ್ದರಾಜು ನಾಯಕ, ಸೀಗ ನಾಯಕ, ಶಿವಕುಮಾರ್, ಜಯ ಸೀಗ ನಾಯಕ, ಹುಚ್ಚಣ್ಣ, ಸುರೇಶ್, ಮಂಜು, ರಘು ಬೂತ್ ಅಧ್ಯಕ್ಷರುಗಳು ,ಗ್ರಾಮ ಪಂಚಾಯತಿ ಸದಸ್ಯರುಗಳು ಹಾಗೂ ಪಕ್ಷದ ಮುಖಂಡರುಗಳು ಪದಾಧಿಕಾರಿಗಳು ಉಪಸ್ಥಿತರಿದ್ದರು