ಕಲ್ಯಾಣಸಿರಿ

ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದ ಸ್ಮರಣಾರ್ಥ , ಅಟಲ್ ಭಾಷಣ ಸ್ಪರ್ಧೆ

ಇಂದು ಗಂಗಾವತಿ ನಗರದ ಶ್ರೀ ಅಮರಜ್ಯೋತಿ ಕಲ್ಯಾಣ ಮಂಟಪ ದಲ್ಲಿ ಭಾರತೀಯ ಜನತಾ ಯುವಮೋರ್ಚ ಕೊಪ್ಪಳ ಜಿಲ್ಲಾ ವತಿಯಿಂದ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದ ಸ್ಮರಣಾರ್ಥ , ಅಟಲ್ ಭಾಷಣ ಸ್ಪರ್ಧೆಯನ್ನ ಆಯೋಜಿಸಲಾಗಿತ್ತು

ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಕಾಲೇಜುಗಳಿಂದ ವಿದ್ಯಾರ್ಥಿಗಳು ಆಗಮಿಸಿ 3 ನಿಮಿಷಗಳ ಅವಧಿಯಲ್ಲಿ ಕೊಟ್ಟಂತಹ ವಿಷಯಗಳಲ್ಲಿ ಮಾತನಾಡಿದರು

ಮೊದಲನೆ ಬಹುಮಾನವಾಗಿ 5000/- ಮುಸ್ಕಾನ,
ಎರಡನೆ ಬಹುಮಾನವಾಗಿ 3000/- ಬಸಯ್ಯ
ಮೂರನೆ ಬಹುಮಾನ 2000/- ಪವಿತ್ರ ಎಮ್
ಪಡೆದುಕೊಂಡರು

ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಜನಪ್ರಿಯ ಶಾಸಕರಾದ ಶ್ರೀ ಪರಣ್ಣ ಮುನವಳ್ಳಿ ಅವರು , ಸಂಸದರಾದ ಶ್ರೀ ಸಂಗಣ್ಣ ಕರಡಿ ಅವರು ಹಾಗೂ ಮುಖಂಡರು ಭಾರತಾಂಬೆ ಗೆ ಪುಷ್ಪಗಳನ್ನ ಸಲ್ಲಿಸುವ ಮೂಲಕ ಕಾರ್ಯಕ್ರಮ ಉದ್ಗಾಟಿಸಿದರು.

ಈ ಕಾರ್ಯಕ್ರಮದಲ್ಲಿ ಮಾಜಿ ಕಾಢಾ ಅಧ್ಯಕ್ಷರಾದ ಗಿರೇಗೌಡ ಹೊಸಕೇರಾ, ತಿಪ್ಪೇರುದ್ರಸ್ವಾಮಿಗಳು, ಪ್ರಧಾನ ಕಾರ್ಯದರ್ಶಿಗಳಾದ ನರಸಿಂಗ್ ರಾವ್ ಕುಲಕರ್ಣಿ, ಚಂದ್ರಶೇಖರ ಕವಲೂರು, ಗ್ರಾಮೀಣ ಮಂಡಲ ಅಧ್ಯಕ್ಷರಾದ ಚೆನ್ನಪ್ಪ ಮಳಗಿ, ಯುವಮೋರ್ಚ ಕೊಪ್ಪಳ ಜಿಲ್ಲಾ ಪ್ರಭಾರಿಗಳಾದ ಅಮರೇಶ್ ರೈತನಗರ, ಜಿಲ್ಲಾಧ್ಯಕ್ಷರಾದ ಶ್ರೀ ಶಿವಕುಮಾರ್ ಅರಿಕೇರಿ, ಉಪಾಧ್ಯಕ್ಷರಾದ ಶಿವಯ್ಯ ಹಿರೇಮಠ, ಪ್ರಧಾನಕಾರ್ಯದರ್ಶಿ ರವಿಚಂದ್ರ ಪಾಟೀಲ್, ಅರ್ಜುನ್ ರಾಯ್ಕರ್, ದೊಡ್ಡಬಸವ ಸುಂಕದ್, ಕಾರ್ಯದರ್ಶಿಗಳಾದ ಪುಟ್ಟರಾಜ ಚೆಕ್ಕಿ, ರವಿ ದ್ಯಾಮಗೌಡರ್, ದೀಪಕ್, ಯುವಮೋರ್ಚ ನಗರ ಮಂಡಲ ಅಧ್ಯಕ್ಷರಾದ ವೆಂಕಟೇಶ್ ಕೆ, ಪ್ರಧಾನಕಾರ್ಯದರ್ಶಿ ಯೊಗೇಶ್ ಹಾಲಳ್ಳಿ ಹಾಗೂ ಪಕ್ಷದ ಪಧಾದಿಕಾರಿಗಳು ಕಾಲೇಜು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Kalyanasiri News
ಎಚ್ ಮಲ್ಲಿಕಾರ್ಜುನ
Editor and Owner Of Kalyansiri.in Kannada Digital News Portal

Leave a Reply

ನಕಲು ಬಲ ರಕ್ಷಿಸಲಾಗಿದೆ