ಕಲ್ಯಾಣಸಿರಿತಾಜಾ ಸುದ್ದಿ

ಸಂಚಾರಿ ಪೊಲೀಸ್ ಇಲಾಖೆಯಿಂದ ಆಟೋ ಚಾಲಕರಿಗೆ ಸಂಚಾರ ನಿಯಮದ ಕುರಿತು ಮಾಹಿತಿ

ಗಂಗಾವತಿ,23-ನಗರ ಸಂಚಾರಿ ಪೊಲೀಸ್ ಠಾಣೆ ವತಿಯಿಂದ ಶನಿವಾರದಂದು ಆಟೋ ಚಾಲಕರಿಗೆ ಸಭೆ ಕರೆಯುವುದರ ಮೂಲಕವಾಗಿ ಸಂಚಾರಿ ನಿಯಮ ಪಾಲನೆ ಬಗ್ಗೆ ಮಾಹಿತಿ ನೀಡಲಾಯಿತು ಈ ಸಂದರ್ಭದಲ್ಲಿ ಸಂಚಾರಿ ಠಾಣೆಯ ಅಧಿಕಾರಿಯಾಗಿರುವಂತಹ ಸುವಾರ್ತ ಅವರು ಆಟೋ ಚಾಲಕರಿಗೆ ಸಂಚಾರಿ ನಿಯಮದ ಬಗ್ಗೆ ಮಾಹಿತಿ ನೀಡಿ ಆಟೋ ಚಾಲಕರು ಜಾಗೃತಿಯಿಂದ ಆಟೋ ಚಾಲನೆ ಮಾಡಬೇಕು ಮತ್ತು ಶಾಲಾ ಮಕ್ಕಳನ್ನು ಕರೆದೊಯ್ಯುವಾಗ ಶಾಲಾ ಮಕ್ಕಳನ್ನು ಸುರಕ್ಷಿತವಾಗಿ ಶಾಲೆಗೆ ತಲುಪಿಸುವ ನಿಟ್ಟಿನಲ್ಲಿ ಶಾಲಾ ಮಕ್ಕಳನ್ನು ಸರ್ಕಾರ ನಿಗದಿ ಮಾಡಿದ ಪ್ರಕಾರವಾಗಿ ಮಕ್ಕಳಗಣತಿಯನ್ನು ಗಮನದಲ್ಲಿಟ್ಟುಕೊಂಡು ಒಡಿಸುವುದು ನಿಗದಿ ಸಂಖ್ಯೆಆಟೋದಲ್ಲಿ ಕೊಡಿಸಬೇಕು ಹೆಚ್ಚಿನ ಮಕ್ಕಳನ್ನು ಆಟೋದಲ್ಲಿಕೂಡಿಸುವುದು ಕಾನೂನು ವಿರುದ್ಧವಾಗಿದೆ ಮತ್ತು ನಿಮ್ಮ ಆಟೋಗೆ ಸರಿಯಾದ ನಂಬರ್ ನಾಮಪರಕ ಅಳವಡಿಸಬೇಕು ಚಾಲಕರ ಸಮವಸ್ತ್ರ ಕಡ್ಡವಾಗಿ ಧರಿಸಬೇಕು ಸರ್ಕಾರದ ನಿಯಮಾವಳಿ ಪ್ರಕಾರ 18 ವರ್ಷದ ಮೇಲುಪಟ್ಟ ಯುವಕರಿಗೆ ಮಾತ್ರ ಚಾಲನೆಗೆ ಅವಕಾಶ ಕೊಡಬೇಕು ಮತ್ತು ಚಾಲನೆ ಪರವಾಣಗಿ ಹೊಂದಿರುವುದು ಕಡ್ಡಾಯ ಎಂದು ಈ ಸಂದರ್ಭದಲ್ಲಿ ಅಧಿಕಾರಿಗಳು ಮಾಹಿತಿ ನೀಡಿದರು ,ಇದೇ ಸಂದರ್ಭದಲ್ಲಿ ಗಂಗಾವತಿ ನಗರ ಠಾಣೆಯ ಪಿ ಐ ವೆಂಕಟ್ ಸ್ವಾಮಿ ಅವರುಈ ಕುರಿತು ಮಾತನಾಡಿ ರಾತ್ರಿಯ ಸಮಯದಲ್ಲಿ ಕಾರ್ಯನಿರ್ವಹಿಸುತ್ತಿರುವಂತಹ ಆಟೋ ಚಾಲಕರು ಪ್ಯಾಸೆಂಜರ್ ಜೊತೆಯಲ್ಲಿ ಸೌಜನ್ಯವಾಗಿ ನಡೆದುಕೊಳ್ಳಬೇಕು ಮತ್ತು ಅನುಮಾನಾಸ್ಪದವಾಗಿ ಯಾರಾದರೂ ಕಂಡುಬಂದಲ್ಲಿ ಪೊಲೀಸ್ ಇಲಾಖೆಗೆ ಮಾಹಿತಿ ನೀಡಬೇಕು, ಯಾವುದೇ ಕಾರಣಕ್ಕೂ ಮಧ್ಯಪಾನ ಸೇವಿಸಿ ಚಾಲನೆ ಮಾಡಬಾರದು ಎಂದು ತಿಳಿಸಿದರು ಈ ಸಂದರ್ಭದಲ್ಲಿ ಪಿಎಸ್ಐ ಅಜಿಜ್ ಇಲಾಖೆಯ ಸಿಬ್ಬಂದಿಗಳು ಸೇರಿದಂತೆ ಆಟೋ ಚಾಲಕರ ಸಂಘದ ಸದಸ್ಯರು ಮತ್ತು ವಿವಿಧ ವೃತ್ತಗಳ ಆಟೋ ಚಾಲಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು

Kalyanasiri News
ಎಚ್ ಮಲ್ಲಿಕಾರ್ಜುನ
Editor and Owner Of Kalyansiri.in Kannada Digital News Portal

Leave a Reply

ನಕಲು ಬಲ ರಕ್ಷಿಸಲಾಗಿದೆ