
ಗಂಗಾವತಿ ವಿಧಾನಸಭಾ ಕ್ಷೇತ್ರದಒಣಬಳ್ಳಾರಿಯಲ್ಲಿ ನೂತನವಾಗಿ ಒಣ ಬಳ್ಳಾರಿ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀ ಅಂಬಮ್ಮ ಶ್ರೀಕಾಂತ ಹುಲಸನಟ್ಟಿ ಅವರ ವಿಜಯೋತ್ಸವದಲ್ಲಿ
ಜನಪ್ರಿಯ ಶಾಸಕರಾದ ಶ್ರೀ ಪರಣ್ಣ ಮುನವಳ್ಳಿಯವರು ಭಾಗವಹಿಸಿ ಶುಭಾಶಯ ಕೋರುವ ಮೂಲಕ ಪಕ್ಷಕ್ಕೆ ಬರಮಾಡಿಕೊಂಡರು
ನಂತರ ವಿಜಯ ಸಂಕಲ್ಪ ಅಭಿಯಾನದ ಕುರಿತು ಮಾಹಿತಿ ನೀಡಿ, ಬಿಜೆಪಿ ನಮ್ಮ ರಾಷ್ಟ್ರೀಯ ಪಕ್ಷ , ದೇಶದ ಸರ್ವತೋಮುಖ ಅಭಿವೃದ್ಧಿ ಬಿಜೆಪಿ ಸರ್ಕಾರ ದಿಂದ ಮಾತ್ರ ಸಾಧ್ಯ ಕಾರಣ ಯಾವ ಆಶೆ ಅಮಿಷಗಳಿಗೆ ಒಳಗಾಗದೆ ತಾವುಗಳು ಪಕ್ಷ ನಿಷ್ಠೆ ಮೆರೆದು ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನ ಗೆಲ್ಲಿಸ ಬೇಕೆಂದು ಮಾತನಾಡಿದರು
ಈ ಸಂದರ್ಭದಲ್ಲಿ ಗಂಗಾವತಿ ಗ್ರಾಮೀಣ ಮಂಡಲ ಅಧ್ಯಕ್ಷರಾದ ಚನ್ನಪ್ಪ ಮಳಗಿ, ಮಂಡಲ ಪ್ರಧಾನ ಕಾರ್ಯದರ್ಶಿ ವಿರೂಪಾಕ್ಷಪ್ಪ ದನಕನದೊಡ್ಡಿ, ಸಿದ್ದಲಿಂಗಯ್ಯ ಸ್ವಾಮಿ ಗಡ್ಡಿಮಠ, ಚನ್ನನಗೌಡ ಒಣಬಳ್ಳಾರಿ, ಶ್ರೀಕಾಂತ ಉಲಸನಟ್ಟಿ, ಯುವ ಮೋರ್ಚ ಪ್ರಧಾನ ಕಾರ್ಯದರ್ಶಿ ಹುಲಗಪ್ಪ ಭಜಂತ್ರಿ, ಮುಖಂಡರಾದ ಅಪ್ಪಣ್ಣ ಡೊಳ್ಳಿನ್ , ಯಮನೂರಪ್ಪ, ಹನುಮೇಶ್, ಹಾಗೂ ಮೆತಗಲ್, ಅರಸಿನಕೇರಿ, ಜಿನ್ನಾಪುರ ಮತ್ತು ಜಿನ್ನಾಪುರ ತಾಂಡ, ಬಿಜೆಪಿ ಪಕ್ಷದ ಎಲ್ಲಾ ಮುಖಂಡರು, ಗ್ರಾಮ ಪಂಚಾಯತಿ ಸರ್ವಸದಸ್ಯರು, ಊರಿನ ಗುರು ಹಿರಿಯರು ಉಪಸ್ಥಿತರಿದ್ದರು.