
ಇಂದು ಕೊಪ್ಪಳ ತಾಲೂಕಿನ ಗಂಗಾವತಿ ವಿಧಾನಸಭಾ ಕ್ಷೇತ್ರದ ವನಬಳ್ಳಾರಿ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಮೆತಗಲ್ ಗ್ರಾಮದಲ್ಲಿ
ಶ್ರೀ ಧರ್ಮಸ್ಥಳ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಕೆರೆ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು
ಜನಪ್ರಿಯ ಶಾಸಕರಾದ ಶ್ರೀ ಪರಣ್ಣ ಮುನವಳ್ಳಿ ಅವರು ಗ್ರಾಮೀಣ ಮಂಡಲ ಅಧ್ಯಕ್ಷರಾದ ಚೆನ್ನಪ್ಪ ಮಳಗಿ ಅವರೊಂದಿಗೆ ಕೆರೆ ವಿಕ್ಷಣೆ ಮಾಡಿ
ಸಂಸ್ಥೆ ಯವರು ಕಾಮಗಾರಿಗೆ ವೈಯಕ್ತಿಕ ಧನಸಹಾಯ ಕೋರಲಾಗಿ, ಶಾಸಕರು ಧನಾತ್ಮಕವಾಗಿ ಸ್ಪಂದಿಸಿ ಸಹಾಯ ಮಾಡುವುದಾಗಿ ಭರವೆ ನೀಡಿದರು
ಈ ಸಂಧರ್ಭದಲ್ಲಿ ಹಾಗೂ ಗ್ರಾಮೀಣ ಮಂಡಲ ಪ್ರಧಾನ ಕಾರ್ಯದರ್ಶಿ ವಿರುಪಾಕ್ಷಿ ದನಕನದೊಡ್ಡಿ ಗ್ರಾ ಪಂ ಸದಸ್ಯರಾದ ಮಾಲಾಬಾಯಿ ನಾಗರಾಜ ನಾಯಕ, ಬಸಯ್ಯ ವಾಲಿಕಾರ್, ಸಂಗನ ಬಸಯ್ಯ ದಳಪತಿ, ಗುರಪ್ಪಮೂಲಿಮನಿ, ರುದ್ರಯ್ಯ, ಕಾಂತೆಪ್ಪ, ಗವಿಸಿದ್ದಯ್ಯ ಹಾಗೂ ವನಬಳ್ಳಾರಿ ಗ್ರಾಮ ಪಂಚಾಯತಿ ಸರ್ವಸದಸ್ಯರು, ಊರಿನ ಮುಖಂಡರು, ಯುವಕರು, ಉಪಸ್ಥಿತರಿದ್ದರು.