ಕಲ್ಯಾಣಸಿರಿ

ಜೋಳದ ಗದ್ದೆಯಲ್ಲಿ ಕಾಡಾನೆಗಳ ದಾಂಧಲೆ : ಬೆಳೆ ನಾಶ, ಕಂಗಾಲಾದ ರೈತರು


ವರದಿ :ಬಂಗಾರಪ್ಪ ಸಿ ಹನೂರು
ಹನೂರು :ಕ್ಷೇತ್ರ ವ್ಯಾಪ್ತಿಯ ಹಲವು ಪ್ರದೇಶಗಳಲ್ಲಿ ಈಗಾಗಲೇ ಆನೆಗಳ ಹಾವಳಿಯನ್ನು ತಡೆಗಟ್ಟುವಲ್ಲಿ ಅರಣ್ಯ ಇಲಾಖೆಯ ವಿಪಲವಾಗಿದೆ ಎಂದು ಗ್ರಾಮಸ್ತರು ತಿಳಿಸಿದರು .
ಹನೂರು ಸಮೀಪದ
ನಾಲ್ಕು ಎಕರೆ ಜೋಳ ಬೆಳೆದಿದ್ದ ಜಮೀನಿಗೆ ಕಾಡಾನೆಗಳು ನುಗ್ಗಿ ದಾಂಧಲೆ ನಡೆಸಿ ಸಂಪೂರ್ಣವಾಗಿ ಬೆಳೆಯನ್ನು ನಾಶಪಡಿಸಿರುವ ಘಟನೆ ಹನೂರು ತಾಲ್ಲೂಕಿನ ಚಿಗತಾಪುರ ಗ್ರಾಮದಲ್ಲಿ ನೆಡೆದಿದೆ.
ಗ್ರಾಮದ ಸೈಯದ್ ರಜಾಕ್ ಎಂಬ ರೈತನ ಜಮೀನಿನಲ್ಲಿ ಕಾಡಾನೆಗಳು ದಾಂಧಲೆ ನಡೆಸಿದ್ದು, ಸುಮಾರು 4 ಎಕರೆ ಜೋಳದ ಫಸಲು ನಾಶವಾಗಿರುವ ಬಗ್ಗೆ ವರದಿಯಾಗಿದೆ. ಜತೆಗೆ ತಂತಿ ಬೇಲಿಯ ಕಂಬಗಳನ್ನು ಆನೆಗಳು ಕಿತ್ತು ನಾಶ ಮಾಡಿವೆ. ಶನಿವಾರ ತಡ ರಾತ್ರಿ ಘಟನೆ ನಡೆದಿದ್ದು, ಅರಣ್ಯ ಅಧಿಕಾರಿಗಳಿಗೆ ಮಾಹಿತಿ ತಿಳಿಸಿದರೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ರೈತರು ಆರೋಪಿಸಿದ್ದಾರೆ. ಈ ಭಾಗದಲ್ಲಿ ಕಾಡು ಪ್ರಾಣಿಗಳ ಉಪಟಳ ಹೆಚ್ಚಾಗಿದ್ದು, ಸೂಕ್ತ ಪರಿಹಾರ ನೀಡುವಂತೆ ರೈತರು ಒತ್ತಾಯಿಸಿದ್ದಾರೆ.

ಎಚ್ ಮಲ್ಲಿಕಾರ್ಜುನ
Editor and Owner Of Kalyansiri.in Kannada Digital News Portal

Leave a Reply

ನಕಲು ಬಲ ರಕ್ಷಿಸಲಾಗಿದೆ