ಕಲ್ಯಾಣಸಿರಿ

ರಾಷ್ಟ್ರೀಯ ಬಸವ ದಳದ ರಾಷ್ಟ್ರೀಯ ಅಧ್ಯಕ್ಷರಾಗಿನಾಂದೇಡ್ ನ ಅವಿನಾಶ ಭೋಸಿಕರ್ ಆಯ್ಕೆ – ಬೀದರರಾಷ್ಟ್ರೀಯ ಬಸವದಳವತಿಯಿಂದ ಸನ್ಮಾನ.

ಬೀದರ: ರಾಷ್ಟ್ರೀಯ ಬಸವ ದಳದ ರಾಷ್ಟ್ರೀಯ ಅಧ್ಯಕ್ಷರಾಗಿ ನೂತನವಾಗಿ ಸರ್ವಾನುಮತದಿಂದ ಆಯ್ಕೆಯಾದ ನಾಂದೇಡ್ ನ ಅವಿನಾಶ ಭೋಸಿಕರ್ ಅವರು ಅಧ್ಯಕ್ಷರಾದ ನಂತರ ಪ್ರಥಮ ಬಾರಿಗೆ ಬೀದರ ನಗರಕ್ಕೆ ಆಗಮಿಸಿದ ನಿಮಿತ್ಯ ಬೀದರನ ಬಸವೇಶ್ವರ ವೃತ್ತದಲ್ಲಿ ಅದ್ಧೂರಿಯಾಗಿ ಸನ್ಮಾನಿಸಲಾಯಿತು.

ಲಿಂಗಾಯತ ಧರ್ಮ ಮಹಾಸಭಾ ರಾಷ್ಟ್ರೀಯ ಉಪಾಧ್ಯಕ್ಷರಾದ ಶಿವರಾಜ ಪಾಟೀಲ ಅತಿವಾಳ ಮಾತನಾಡಿ “ಎರಡು ದಶಕಗಳಿಂದ ಬಸವ ತತ್ವಕ್ಕಾಗಿ ನಿರಂತರ ದುಡಿಯುತ್ತಿರುವ ನವತರುಣರಾದ ನಾಂದೇಡ್ ನ ಅವಿನಾಶ ಭೋಸಿಕರ್ ಅವರನ್ನು ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಧಾರವಾಡದಲ್ಲಿ ನಡೆದ ಕೇಂದ್ರ ಸಮಿತಿ ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ಭೋಸಿಕರ್ ಅವರ ಅಧ್ಯಕ್ಷತೆಯಲ್ಲಿ ರಾಷ್ಟ್ರದ ತುಂಬೆಲ್ಲಾ ರಾಷ್ಟ್ರೀಯ ಬಸವ ದಳ ಸಂಘಟನೆ ಹಾಗೂ ಲಿಂಗಾಯತ ಧರ್ಮದ ಮಾನ್ಯತೆಗಾಗಿ ಹೋರಾಟ ಮಾಡಲಾಗುವುದು. ಮಾಜಿ ಅಧ್ಯಕ್ಷರಾದ ಬಸವರಾಜ ಧನ್ನೂರ ಅವರು ಮೂರು ವರ್ಷ ಅಧಿಕಾರದಲ್ಲಿದ್ದರು. ಅವರ ಅವಧಿ ಮುಗಿದಿತ್ತು. ನಾಲ್ಕು ರಾಜ್ಯಗಳ ಶರಣರು ರಾಷ್ಟ್ರೀಯ ಅಧ್ಯಕ್ಷ ಸ್ಥಾನ ತುಂಬಲು ಒತ್ತಡ ಹೇರಿದ್ದ ನಿಮಿತ್ಯ ತೆರವಾದ ಸ್ಥಾನದಲ್ಲಿ ಅವಿನಾಶ ಭೋಸಿಕರ್ ಅವರಿಗೆ ಆಯ್ಕೆ ಮಾಡಲಾಗಿದೆ ಎಂದು ನುಡಿದರು.

ರಾಷ್ಟ್ರೀಯ ಬಸವ ದಳದ ಸಂಘಟನಾ ಕಾರ್ಯದರ್ಶಿ ಬಸವರಾಜ ಸಂಗಮದ್ ಅವರು ಮಾತನಾಡಿ ” ಜನವರಿ1ರಂದು ಚಿತ್ರದುರ್ಗದಲ್ಲಿ ಬಸವರಾಜ ಧನ್ನೂರ ಅವರನ್ನು ರಾಷ್ಟ್ರೀಯ ಅಧ್ಯಕ್ಷ ಸ್ಥಾನದಿಂದ ಪದಚ್ಯುತಗೊಳಿಸಲಾಗಿತ್ತು. ಜನವರಿ 18 ರಂದು ಧಾರವಾಡದಲ್ಲಿ ಕರೆದ ಸಭೆಯಲ್ಲಿ ಸರ್ವಾನುಮತದಿಂದ ಮಹಾರಾಷ್ಟ್ರದ ಅವಿನಾಶ ಭೋಸಿಕರ್ ಅವರನ್ನು ಆಯ್ಕೆ ಮಾಡಲಾಯಿತು. ಅವರ ನೇತೃತ್ವದಲ್ಲಿ ಇಡೀ ದೇಶದಲ್ಲಿ ರಾಷ್ಟ್ರೀಯ ಬಸವ ದಳದ ಸಂಘಟನೆ ಹಾಗೂ ಧರ್ಮದ ಮಾನ್ಯತೆಗಾಗಿ ಹೋರಾಟ ಮಾಡಲಾಗುವುದು ಎಂದರು.

ಬಸವ ಮಂಟಪದ ಪೂಜ್ಯ ಶ್ರೀ ಸದ್ಗುರು ಮಾತೆ ಸತ್ಯಾದೇವಿ ಅವರು ಮಾತನಾಡಿ “ಈ ಹಿಂದಿನ ಅಧ್ಯಕ್ಷ ಬಸವರಾಜ ಧನ್ನೂರ ಅವರು ಮೂರು ವರ್ಷ ಅವಧಿ ಪೂರೈಸಿದ್ದರು. ಆದರೆ ಅಷ್ಟೊಂದು ಹೇಳಿಕೊಳ್ಳುವಷ್ಟು ಸಂಘಟನೆ ಮಾಡದ ಕಾರಣ ಅವರನ್ನು ಕೇಂದ್ರ ಸಮಿತಿ ವತಿಯಿಂದ ನೂರಾರು ಪ್ರಮುಖ ಪದಾಧಿಕಾರಿಗಳ ಹಾಗೂ ಪೂಜ್ಯರ ನೇತೃತ್ವದಲ್ಲಿ ಸರ್ವಾನುಮತದಿಂದ ಪದಚ್ಯುತಗೊಳಿಸಲಾಗಿತ್ತು. ತೆರವಾದ ಸ್ಥಾನದಲ್ಲಿ ಹೋರಾಟಗಾರರು, ಲಿಂಗಾಯತ ಸಮನ್ವಯ ಸಮಿತಿ ಸಂಸ್ಥಾಪಕ ಮಹಾರಾಷ್ಟ್ರದ ನಾಂದೇಡನ ಅವಿನಾಶ ಭೋಸಿಕರ ಅವರಿಗೆ ನೇಮಕ ಮಾಡಲಾಗಿದೆ. ಅವರ ಮುಂಚೂಣಿಯಲ್ಲಿ ಮುಂದಿನ ಸಂಘಟನೆ ಮಾಡಲಾಗುವುದು ಎಂದು ಪ್ರತಿಪಾದಿಸಿದರು

ನೂತನವಾಗಿ ರಾಷ್ಟ್ರೀಯ ಬಸವ ದಳದ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀ ಅವಿನಾಶ ಭೋಸಿಕರ ಅವರು ಮಾತನಾಡಿ “ಪೂಜ್ಯ ಲಿಂಗಾನಂದ ಸ್ವಾಮಿಗಳ, ಪೂಜ್ಯ ಮಾತೆ ಮಹಾದೇವಿ ಅವರ ಹಾಗೂ ಪೂಜ್ಯ ಗಂಗಾಮಾತಾಜಿಯವರ ಆಶೋತ್ತರಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವೆ. ಬಹುದೊಡ್ಡ ಜವಾಬ್ದಾರಿ ನನಗೆ ರಾಷ್ಟ್ರೀಯ ಬಸವ ದಳದ ಪದಾಧಿಕಾರಿಗಳು ನೀಡಿದ್ದಾರೆ. ಅದನ್ನು ಉಳಿಸಿಕೊಂಡು, ಎಲ್ಲರಿಗೂ ಪರಿಗಣನೆಗೆ ತೆಗೆದುಕೊಂಡು ಇಡೀ ರಾಷ್ಟ್ರದ ತುಂಬಾ ರಾಷ್ಟ್ರೀಯ ಬಸವ ದಳ ಸಂಘಟಿಸಲು ತನು ಮನ ಧನದಿಂದ ಪ್ರಯತ್ನಿಸುವೆ ಎಂದರು.

ಇದೇ ವೇಳೆ ದಳದ ಜಿಲ್ಲಾ ಉಪಾಧ್ಯಕ್ಷ ಶಿವಶರಣಪ್ಪ ಪಾಟೀಲ ಹಾರೂರಗೇರಿ, ಮನ್ಮಥಯ್ಯ ಸ್ವಾಮಿ, ರವಿಕಾಂತ ಬಿರಾದಾರ, ಬಸವಂತರಾವ ಬಿರಾದಾರ, ಅಡಿವೆಪ್ಪ ಪಟ್ನೆ, ಮಲ್ಲಿಕಾರ್ಜುನ ಬಿರಾದಾರ ಸಂಗಮ, ಶ್ರೀನಾಥ ಕೋರೆ, ಸತೀಶ ಪಾಟೀಲ, ಸಂಗಮೇಶ ಅಳ್ಳಿ, ಶಾಂತಪ್ಪ ಮುಗಳಿ, ನಿರ್ಮಲಾ ನಿಲಂಗೆ, ಇಂದುಮತಿ ತಗಾರೆ, ಮಲ್ಲಿಕಾರ್ಜುನ ಜೈಲರ್, ಮಲ್ಲಿಕಾರ್ಜುನ ಬುಕ್ಕಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Kalyanasiri News
ಎಚ್ ಮಲ್ಲಿಕಾರ್ಜುನ
Editor and Owner Of Kalyansiri.in Kannada Digital News Portal

Leave a Reply

ನಕಲು ಬಲ ರಕ್ಷಿಸಲಾಗಿದೆ