ಬೆಂಗಳೂರು, ನವೆಂಬರ್ 22; ಕರ್ನಾಟಕ ವಿಧಾನ ಪರಿಷತ್‌ನ 25 ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿದೆ. ಡಿಸೆಂಬರ್ 10ರಂದು ಚುನಾವಣೆ ನಡೆಯಲಿದ್ದು, ಡಿಸೆಂಬರ್ 14 ರಂದು ಫಲಿತಾಂಶ ಪ್ರಕಟವಾಗಲಿದೆ. ನಾಮಪತ್ರಗಳನ್ನು ಸಲ್ಲಿಕೆ ಮಾಡಲು ಮಂಗಳವಾರ ಕೊನೆಯ ದಿನವಾಗಿದೆ.
ಸೋಮವಾರ ಸಂಜೆ ಕಾಂಗ್ರೆಸ್ ಚುನಾವಣೆಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಸದಸ್ಯರನ್ನು ಆಯ್ಕೆ ಮಾಡಲು ಚುನಾವಣೆ ನಡೆಯುತ್ತಿದ್ದು, ರಾಜ್ಯದ ಆಡಳಿತ ಪಕ್ಷ ಬಿಜೆಪಿ, ಪ್ರತಿಪಕ್ಷವಾಗಿರುವ ಕಾಂಗ್ರೆಸ್‌ಗೆ ಚುನಾವಣೆ ಪ್ರತಿಷ್ಠೆಯಾಗಿದೆ.

ಈಗಾಗಲೇ ಚುನಾವಣೆ ಅಧಿಸೂಚನೆ ಪ್ರಕಟವಾಗಿದ್ದು, ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ನವೆಂಬರ್ 23 ಕೊನೆ ದಿನ. ನವೆಂಬರ್ 24ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನವೆಂಬರ್ 26 ನಾಮಪತ್ರ ವಾಪಸ್ ಪಡೆಯಲು ಕೊನೆ ದಿನ.
ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು; ಎಚ್. ಆಂಜನೇಯ
ಅಭ್ಯರ್ಥಿಗಳ ಪಟ್ಟಿ; ಕಲಬುರಗಿ (ಶಿವಾನಂದ ಪಾಟೀಲ್ ಮರ್ತೂರು), ಬೆಳಗಾವಿ (ಚರಣರಾಜ ಬಸವರಾಜ ಹಟ್ಟಿಹೊಳಿ), ಉತ್ತರ ಕನ್ನಡ (ಭೀಮಣ್ಣ ನಾಯ್ಕ), ಹುಬ್ಬಳ್ಳಿ–ಧಾರವಾಡ–ಗದಗ–ಹಾವೇರಿ (ಸಲೀಂ ಅಹಮದ್), ರಾಯಚೂರು (ಶರಣ ಗೌಡ ಪಾಟೀಲ್), ಚಿತ್ರದುರ್ಗ (ಬಿ. ಸೋಮಶೇಖರ್), ಶಿವಮೊಗ್ಗ (ಆರ್. ಪ್ರಸನ್ನ ಕುಮಾರ್).
ಚಿಕ್ಕಮಗಳೂರು (ಎ. ವಿ. ಗಾಯತ್ರಿ ಶಾಂತೇಗೌಡ), ದಕ್ಷಿಣ ಕನ್ನಡ (ಮಂಜುನಾಥ ಭಂಡಾರಿ), ಹಾಸನ (ಎಂ. ಶಂಕರ್), ತುಮಕೂರು (ಆರ್. ರಾಜೇಂದ್ರ), ಮಂಡ್ಯ (ಎಂ. ಜಿ. ಗೂಳಿ ಗೌಡ), ಬೆಂಗಳೂರು ಗ್ರಾಮಾಂತರ (ಎಸ್. ರವಿ), ಕೊಡಗು (ಮಂಥರ್ ಗೌಡ), ಬಿಜಾಪುರ–ಬಾಗಲಕೋಟೆ (ಸುನೀಲ್ ಗೌಡ ಪಾಟೀಲ್), ಮೈಸೂರು–ಚಾಮರಾಜನಗರ (ಡಾ. ಡಿ. ತಿಮ್ಮಯ್ಯ), ಬಳ್ಳಾರಿ (ಕೆ. ಸಿ. ಕೊಂಡಯ್ಯ).
ಡಿಸೆಂಬರ್ 10ರಂದು ಒಟ್ಟು 25 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಆದರೆ ಕಾಂಗ್ರೆಸ್ 17 ಅಭ್ಯರ್ಥಿಗಳ ಪಟ್ಟಿಯನ್ನು ಮಾತ್ರ ಬಿಡುಗಡೆ ಮಾಡಿದೆ. ಚುನಾವಣೆಗೆ ನಾಮಪತ್ರಗಳನ್ನು ಸಲ್ಲಿಕೆ ಮಾಡಲು ಮಂಗಳವಾರ ಕಡೆ ದಿನ.

ಬಿ. ಫಾರಂ ವಿತರಿಸಿದ ಡಿಕೆ ಶಿವಕುಮಾರ್
ಜೆಡಿಎಸ್ ಪಕ್ಷ ಚುನಾವಣೆಗ ಅಧಿಕೃತವಾಗಿ ಇನ್ನೂ ಪಕ್ಷದ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಹಾಸನ ಕ್ಷೇತ್ರದಿಂದ ಮಾಜಿ ಸಚಿವ ಎಚ್. ಡಿ. ರೇವಣ್ಣ ಪುತ್ರ ಡಾ. ಸೂರಜ್ ರೇವಣ್ಣ ಜೆಡಿಎಸ್ ಅಭ್ಯರ್ಥಿಯಾಗಿ ಈಗಾಗಲೇ ನಾಮಪತ್ರ ಸಲ್ಲಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಮೈಸೂರಿನಲ್ಲಿದ್ದು ಪಕ್ಷದ ನಾಯಕರ ಜೊತೆ ಸಭೆ ನಡೆಸಲಿದ್ದಾರೆ. ರಾತ್ರಿ ವೇಳೆಗೆ ಅಧಿಕೃತವಾದ ಪಟ್ಟಿ ಪಕ್ಷದ ವತಿಯಿಂದ ಹೊರಬೀಳುವ ನಿರೀಕ್ಷೆ ಇದೆ.
ಪಕ್ಷದಿಂದ ಉಚ್ಛಾಟನೆ; ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಕೆಪಿಸಿಸಿ ಕಚೇರಿಯಲ್ಲಿ ಅಭ್ಯರ್ಥಿಗಳಿಗೆ ಬಿ.ಫಾರಂ ವಿತರಣೆ ಮಾಡಿದರು. ಮಾಧ್ಯಮಗಳ ಜೊತೆ ಮಾತನಾಡಿದ ಅವರು, “ಪರಿಷತ್ ಚುನಾವಣೆಯಲ್ಲಿ ಯಾರಾದರೂ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದರೆ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗುತ್ತದೆ” ಎಂದು ಎಚ್ಚರಿಕೆ ನೀಡಿದರು.
“ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಬಣಗಳಿಲ್ಲ. ನಮ್ಮಲ್ಲಿ ಇರುವುದು ಒಂದೇ ಬಣ ಅದು ಕಾಂಗ್ರೆಸ್. ಬಿಜೆಪಿ ನಾಯಕರಿಗೆ ನಮ್ಮ ಬಗ್ಗೆ ಮಾತನಾಡದಿದ್ದರೆ ನಿದ್ದೆ ಬರುವುದಿಲ್ಲ” ಎಂದು ಡಿ. ಕೆ. ಶಿವಕುಮಾರ್ ಲೇವಡಿ ಮಾಡಿದರು.