
ಸಿಂಧನೂರು,21 :ಹೌದು ಸರ್ಕಾರದ ಗೃಹ ಇಲಾಖೆಯ ಭದ್ರತಾ ವಿಭಾಗದ ಗೃಹ ರಕ್ಷಕ ಧಳ ಘಟಕವೂ ಅತ್ಯಂತ ಪ್ರಮುಖ ಸ್ಥಾನ ಪಡೆದಿದೆ. ಪೊಲೀಸ್ ಇಲಾಖೆಯ ಜೊತೆ ಸೇರಿಕೊಂಡು ಕಾನೂನು ಸುವ್ಯವಸ್ಥೆ ಕಾಪಾಡಲು ಗೃಹ ರಕ್ಷಕ ಸಿಬ್ಬಂದಿಗಳು ಸಾಕಷ್ಟು ಶ್ರಮ ವಹಿಸಿ ಕೆಲಸ ಮಾಡುತ್ತಾ ಬಂದಿದ್ದಾರೆ. ವಿಪರ್ಯಾಸವೆಂದರೆ ಇಲ್ಲಿಯವರೆಗೂ ಸಹ ರಾಜ್ಯದ ಬಹುತೇಕ ತಾಲ್ಲೂಕುಗಳಲ್ಲಿ 40 ರಿಂದ 50 ಜನ ಹೋಮ್ ಗಾರ್ಡ್ ಗಳು ಇದ್ದಾರೆ. ಆದರೇ ಅವರಿಗೆ ಎಲ್ಲರೂ ಸೇರಿ ಸಭೆ ನಡೆಸಲು, ಹಾಗೂ ವಸ್ತುಗಳನ್ನು ಇಡಲು ಹಾಗೂ ವಿಶ್ರಾಂತಿ ಪಡೆಯಲು ಅಧಿಕೃತ ಕಛೇರಿಯೇ ಇಲ್ಲದಿರುವುದು ನೋಡಿದ್ರೆ ಅಯ್ಯೋ ಪಾಪ ಅನಿಸುತ್ತೇ, ಆದ್ದರಿಂದ ಇಂದು ಮುಂಜಾನೆ ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಗೃಹ ರಕ್ಷಕ ಧಳ ಸಿಬ್ಬಂದಿಗಳು ನಮ್ಮ ನ್ಯೂಸ್ ಸಮೂಹದ ರಾಜ್ಯ ವಿಶೇಷ ಪ್ರತಿನಿಧಿ ಬಸವರಾಜು ಅವರನ್ನು ಭೇಟಿ ಮಾಡಿದ ಹಿನ್ನೆಲೆಯಲ್ಲಿ, ಇವರ ಸಮಸ್ಯೆಗಳನ್ನು ಆಲಿಸಿ ವರದಿ ತಯಾರಿಸಿ ಕೂಡಲೇ ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಗಮನಕ್ಕೆ ತೆಗೆದುಕೊಂಡು ಬಂದು ಕೂಡಲೇ ಗೃಹ ರಕ್ಷಕ ಇಲಾಖೆಯ ಮೇಲಧಿಕಾರಿಗಳಿಗೆ ಪತ್ರ ಬರೆದು ಇವರ ಸಮಸ್ಯೆ ಯನ್ನು ಬಗೆಹರಿಸುವಂತೆ ಫೋನ್ ಮೂಲಕ ಮನವಿ ಮಾಡಿದರು. ಇನ್ನಾದ್ರೂ ಇವರ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುವುದೇ ಎಂಬುದನ್ನು ಕಾದು ನೋಡಬೇಕಿದೆ.