ಕಲ್ಯಾಣಸಿರಿ

ಬಿ ಜೆ ಪಿ ಕಾರ್ಯಕರ್ತರಿಂದ ನಿಶಾಂತ್ ಗೆ ಛೀಮಾರಿ


ವರದಿ :ಬಂಗಾರಪ್ಪ ಸಿ ಹನೂರು

ಹನೂರು :ವಿಧಾನಸಭಾ ಕ್ಷೇತ್ರದಲ್ಲಿ ಬಿ ಜೆ ಪಿ ಯವರ ಸ್ವಪಕ್ಷದವರಲ್ಲೆ ಭುಗಿಲೆದ್ದ ಬಣ ರಾಜಕೀಯದ ದೊಂಬರಾಟಕ್ಕೆ ಸಾಕ್ಷಿಯಾದ ಹನೂರು ವಿಧಾನಸಭಾ ಕ್ಷೇತ್ರ . ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ವರಿಷ್ಠರ ಆದೇಶದಂತೆ ಬೂತ್ ವಿಜಯ ಸಂಕಲ್ಪ ಅಭಿಯಾನ ಕಾರ್ಯಕ್ರಮ ಹಮ್ಮಿಕೊಂಡಿದ್ದ ಸಂದರ್ಭದಲ್ಲಿ ಪ್ರತಿ ಜಿಲ್ಲಾ ಪಂಚಾಯತಿ ವ್ಯಾಪ್ತಿಯಲ್ಲಿ ಒರ್ವರಂತೆ ಮೇಲ್ವಿಚಾರಣೆ ಜವಾಬ್ದಾರಿಯನ್ನು ವರಿಷ್ಠರು ಆದೇಶಿಸಿದರು ಎಂದು ನಿಶಾಂತ್ ಎಂಬುವವರು ಹೇಳಿದ ಸಂದರ್ಭದಲ್ಲಿ ಬಿ ಜೆ ಪಿ ಕಾರ್ಯಕರ್ತರು ತಮಗೆ ಜವಾಬ್ದಾರಿ ನೀಡಿದವರು ಯಾರು ಒಂದು ವೇಳೆ ನೀಡಿದ್ದರೆ ಅದರ ಆದೇಶ ಪ್ರತಿಯನ್ನು ನಮಗೆ ನೀಡಿ ಇಲ್ಲವೆ ಕ್ಷೇತ್ರ ಬಿಟ್ಟು ತೊಲಗಿ ನೀವು ನಮ್ಮ ಕ್ಷೇತ್ರದ ಮತದಾರರೇ ನಮ್ಮ ಕ್ಷೇತ್ರಕ್ಕೂ ನಿಮಗೂ ಏನು ಸಂಬಂಧ ನಮ್ಮ ಕಾರ್ಯಕರ್ತರಲ್ಲಿ ಗೊಂದಲಕ್ಕೆ ಕಾರಣ ನೀವೆ ಮೊದಲು ಕ್ಷೇತ್ರ ಬಿಟ್ಟು ತೊಲಗಿ ಇಲ್ಲದಿದ್ದ ಪಕ್ಷದಲ್ಲಿ ವರಿಷ್ಠರ ಮುಂದೆ ನಿಮ್ಮ ವಿರುದ್ದ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ ಪ್ರಸಂಗವು ಜರುಗಿದೆ ಇದೇ ಸಂದರ್ಭದಲ್ಲಿ ಕ್ಷೇತ್ರದ ಕಾರ್ಯಕರ್ತರು ಹಾಜರಿದ್ದರು.

Kalyanasiri News
ಎಚ್ ಮಲ್ಲಿಕಾರ್ಜುನ
Editor and Owner Of Kalyansiri.in Kannada Digital News Portal

Leave a Reply

ನಕಲು ಬಲ ರಕ್ಷಿಸಲಾಗಿದೆ