
ವರದಿ :ಬಂಗಾರಪ್ಪ ಸಿ ಹನೂರು.
ಚಾಮರಾಜನಗರ ಜಿಲ್ಲೆಯಹನೂರು ತಾಲ್ಲೂಕಿನಲ್ಲಿ :ದೇಶದ ಬೆನ್ನಲುಬು ರೈತ ಇವರಿಲ್ಲದಿದ್ದರೆ ಪ್ರತಿಯೋಬ್ಬ ಮನುಷ್ಯನು ಜೀವಿಸಲು ಅರ್ಹನಿರುತ್ತಿರಲಿಲ್ಲ ಅಂತಹ ರೈತರ ಆತ್ಮಹತ್ಯೆಯ ಪ್ರಕರಣಗಳಿಂದ ಪ್ರಾರಂಭವಾಗಿ ಸಾಕಷ್ಟು ಪ್ರಮಾಣದಲ್ಲಿ ಸಮಸ್ಯೆಗಳನ್ನೆ ಎದುರಿಸುವ ಪರಿಸ್ಥಿತಿಯಲ್ಲಿ ನಿರ್ಮಾಣವಾಗಿದೆ ಅದ್ದರಿಂದ ನಮ್ಮರೈತರೆ ನಮಗೆ ಸ್ಪೂರ್ತಿದಾಯಕವಾಗಿ ತಮ್ಮ ಸಮಸ್ಯೆಗಳನ್ನು ಪರಿಹರಿಸಲು ಕಾರ್ಯಪ್ರವೃತ್ತರಾಗಲಿ ಎಂದು ತಾಲ್ಲೊಕು ಘಟಕದ ಅಧ್ಯಕ್ಷರಾದ ಗೌಡೆಗೌಡ್ರು ತಿಳಿಸಿದರು .
ಹನೂರು ತಾಲ್ಲೂಕಿನ ಜಿ ರಾಜೂಗೌಡ ನಗರದಲ್ಲಿ ಗ್ರಾಮ ಘಟಕ ವನ್ನು ಉದ್ಘಾಟನೆ ಮಾಡಿದ ಅವರು ನಮ್ಮಲ್ಲಿ ಯಾವುದೇ ಸಮಸ್ಯೆಗಳಿದ್ದರು ನೇರವಾಗಿ ಅಧಿಕಾರಿಗಳನ್ನು ಬೇಟಿಯಾಗಿ ಸಮಸ್ಯೆಗಳನ್ನು ಇತ್ಯಾರ್ಥಪಡಿಸಿಕೊಳ್ಳಿ ಒಂದು ವೇಳೆ ಆ ಸಮಸ್ಯೆಯನ್ನು ಬಗೆಹರಿಸದಿದ್ದರೆ ನಮಗೆ ಮಾಹಿತಿ ನೀಡಿ ನಾವು ಬರುತ್ತೆವಿ ಎಂದು ತಿಳಿಸಿದರು. ಇದೇ ಸಮಯದಲ್ಲಿ ರೈತ ಮುಖಂಡರುಗಳು ಹಾಗೂ ಗ್ರಾಮಸ್ತರು ಹಾಜರಿದ್ದರು