ಕಲ್ಯಾಣಸಿರಿ

ಕಾಣಿಯಾದ ಸ್ವಾಮೀಜಿ ಶವವಾಗಿ ಪತ್ತೆ .


ವರದಿ :ಬಂಗಾರಪ್ಪ ಸಿ ಹನೂರು.
ಚಾಮರಾಜನಗರ ಜಿಲ್ಲೆಯಹನೂರು ತಾಲ್ಲೂಕಿನಲ್ಲಿ ನಡೆದ ಘಟನೆ: ಕಾಣೆಯಾಗಿದ್ದ ಸ್ವಾಮೀಜಿಯೊಬ್ಬರ ಮೃತದೇಹ ಹನೂರು ವಿಧಾನಸಭಾ ಕ್ಷೇತ್ರದ ಸತ್ತೇಗಾಲದ ಕಾವೇರಿ ನದಿಯ ಸೇತುವೆ ಬಳಿ ದೊರಕಿದೆ.
ಹನೂರು ತಾಲ್ಲೂಕಿನ ಪಿಜಿಪಾಳ್ಯ ಗ್ರಾಮದ ಹೊಸಮಠದ ಪೀಠಾದಿಪತಿ ರಾಜಶೇಖರ್ ಬುದ್ದಿ ಮೃತರು. ಕಳೆದ ಮೂರು ದಿನಗಳ ಹಿಂದೆ ಕಾಣೆಯಾಗಿದ್ದ ಇವರು ಶುಕ್ರವಾರ ಮುಂಜಾನೆ ಶವವಾಗಿ ಪತ್ತೆಯಾಗಿದ್ದಾರೆ.
ಪಿಜಿ ಪಾಳ್ಯದ ಮಠದಲ್ಲಿ ನಡೆದ ಕಾರ್ಯಕ್ರಮವೊಂದಲ್ಲಿ ಭಾಗಿಯಾಗಿ ಸುತ್ತೂರು ಜಾತ್ರೆಗೆ ಹೋಗುವುದಾಗಿ ತಿಳಿಸಿ ನಂತರ ಕಾಣೆಯಾಗಿದ್ದರು. ಸ್ವಾಮೀಜಿ ಕಾಣೆಯಾಗಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯೂ ಹರಿದಾಡಿತ್ತು. ಸ್ವಾಮೀಜಿ ಸಾವಿಗೆ ಕಾರಣ ನಿಗೂಢವಾಗಿದ್ದು, ಕೊಳ್ಳೇಗಾಲ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Kalyanasiri News
ಎಚ್ ಮಲ್ಲಿಕಾರ್ಜುನ
Editor and Owner Of Kalyansiri.in Kannada Digital News Portal

Leave a Reply

ನಕಲು ಬಲ ರಕ್ಷಿಸಲಾಗಿದೆ