
ತಿಪಟೂರು: ಸಮಾಜ ಸೇವಕರು, ಕಾಂಗ್ರೆಸ್ ಪಕ್ಷದ ತಾಲೂಕು ಮುಖಂಡರಾದ ಕೆ.ಟಿ.ಶಾಂತಕುಮಾ ಅವರಿಗೆ ಜೆಡಿಎಸ್ ನ ನೂರಾರು ಮುಖಂಡರು ಜೆಡಿಎಸ್ ಪಕ್ಷ ಸೇರುವಂತೆ ಶಾಂತಕುಮಾರ್ ಮನೆಗೆ ಆಗಮಿಸಿ ಮನವಿ ಮಾಡಿದರು. ನಗರದ ಕೆ.ಆರ್.ಬಡಾವಣೆಯಲ್ಲಿರುವ ಕೆ.ಟಿ.ಶಾಂತಕುಮಾರ್ ನಿವಾಸಕ್ಕೆ ಆಗಮಿಸಿದ, ಜೆಡಿಎಸ್ ತಾಲೂಕು ಕಾರ್ಯಾಧ್ಯಕ್ಷ ಶಿವಸ್ವಾಮಿ ಈ ವೇಳೆ ಪತ್ರಿಕೆಯೊಂದಿಗೆ ಮಾತನಾಡಿ, ತಾಲೂಕಿನ ಕೊನೆಹಳ್ಳಿ ಗ್ರಾಮದಲ್ಲಿ ಹುಟ್ಟಿ ಬೆಳೆದಿರುವ ಕೆ.ಟಿ.ಶಾಂತಕುಮಾರ್ ಅವರು, ಸಮಾಜ ಸೇವಕರಾಗಿ ತಾಲೂಕಿನಲ್ಲಿ ಕಳೆದ ಹಲವಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಸಮಾಜ ಸೇವೆಗೆ ತಮ್ಮ ಸ್ವಂತ ಹಣ ಬಳಕೆ ಮಾಡಿ ಒಬ್ಬ ಸದೃಢ ನಾಯಕರಾಗಿ ತಾಲೂಕಿನಲ್ಲಿ ಸೇವೆಯ ಮೂಲಕ ಗುರುತಿಸಿಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷದ ಮುಖಂಡರಾಗಿರುವ ಕೆ.ಟಿ.ಶಾಂತಕುಮಾರ್ ರವರು, ಜೆಡಿಎಸ್ ಪಕ್ಷಕ್ಕೆ ಬಂದರೆ ನೂರು ಆನೆ ಬಲ ಬರಲಿದೆ. ತಾಲೂಕಿನ ಪ್ರತಿ ಸಮುದಾಯದವರೊಂದಿಗೆ ಉತ್ತಮ ಒಡನಾಟ ಹೊಂದಿರುವ ಕೆ.ಟಿ.ಶಾಂತಕುಮಾರ್ ಜೆಡಿಎಸ್ ಪಕ್ಷ ಸೇರಬೇಕೆಂದು ಗ್ರಾಮೀಣ ಭಾಗದ ಕಾರ್ಯಕರ್ತರ ಒತ್ತಡ ಪಕ್ಷದ ಹೈಕಮಾಂಡ್ ಮೇಲಿದೆ. ಆದ
ಕಾರಣ ಕೆ.ಟಿ.ಶಾಂತಕುಮಾರ್ ಅವರಿಗೆ ಜೆಡಿಎಸ್ ಗೆ ಬರುವಂತೆ ತಾಲೂಕು ಘಟಕದಿಂದ ಮನವಿ ಮಾಡುತ್ತಿದ್ದೇವೆ. ಎಂದರು. ತಾಲೂಕು ಜೆಡಿಎಸ್ ಮುಖಂಡ ಮಲ್ಲೇನಹಳ್ಳಿ ಜಗದೀಶ್ ಮಾತನಾಡಿ ಕೆ.ಟಿ.ಶಾಂತಕುಮಾರ್ ಜೆಡಿಎಸ್ ಪಕ್ಷಕ್ಕೆ ಬಂದು ಸ್ಪರ್ಧಿಸಿದರೆ ಮಾಜಿ ಶಾಸಕ ಬಿ.ನಂಜಾವರಿಯವರು ಕೂಡ ಕೆ.ಟಿ.ಶಾಂತಕುಮಾರ್ ಅವರನ್ನು ಬೆಂಬಲಿಸುವುದಾಗಿ ಹೇಳಿದ್ದಾರೆ. ಈಗಾಗಲೇ ತಾಲೂಕಿನಲ್ಲಿ ಉತ್ತಮ ಸಮಾಜ ಸೇವಕರು ಎಂದು ಹೆಸರು ಗಳಿಸಿರುವ ಶಾಂತಕುಮಾರ್ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡು 2023ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದಲೇ ಚುನಾವಣಾ ಕಣಕ್ಕೆ ಇಳಿದರೆ ಶಾಸಕರಾಗುವುದರಲ್ಲಿ ಯಾವುದೇ ಅನುಮಾನ ಬೇಡ ಎಂದರು. ಜೆಡಿಎಸ್ ಪಕ್ಷದ ಮುಖಂಡರಾದ ಗೋವಿಂದಸ್ವಾಮಿ, ಬಾಳೇಕಾಯಿ ಸ್ವಾಮಿ, ರಾಜಶೇಖರ್, ತಿಮ್ಮೇಗೌಡ, ರಾಕೇಶ್, ನಾಗರಾಜು, ಮೊದಲಾದವರು ಕೆ.ಟಿ.ಶಾಂತಕುಮಾರ್ ಜೆಡಿಎಸ್ ಪಕ್ಷ ಸೇರ್ಪಡೆಗೊಂಡರೆ ಪಕ್ಷ ಬಲಗೊಳ್ಳಲಿದೆ ಎಂದು ಸಭೆಯಲ್ಲಿ ಇದ್ದರು.
ಹೇಳಿದರು. ಈ ವೇಳೆ ಮಾತನಾಡಿದ ಸಮಾಜ ಸೇವಕ ಕೆ.ಟಿ.ಶಾಂತಕುಮಾರ್, ಕಳೆದ ಹಲವಾರು ವರ್ಷಗಳಿಂದ ತಾಲೂಕಿನಲ್ಲಿ ಕುಡಿಯುವ ನೀರು, ಗೋವುಗಳಿಗೆ ಮೇವು, ಕೊರೋನಾ ಸಂದರ್ಭದಲ್ಲಿ ಸೇವೆ ಹೀಗೆ ಹತ್ತಾರು ಸಾಮಾಜಿಕ ಸೇವಾ ಕಾರ್ಯಗಳಲ್ಲಿ ನಾನು ತೊಡಗಿಸಿಕೊಂಡಿದ್ದೇನೆ. ಈಗಾಗಲೇ ಕಾಂಗ್ರೆಸ್ ಪಕ್ಷದಲ್ಲಿದ್ದು, ಕಾಂಗ್ರೆಸ್ ಪಕ್ಷದ ವತಿಯಿಂದ ವಿಧಾನಸಭೆಗೆ ಟಿಕೆಟ್ ನೀಡುವಂತೆ ವರಿಷ್ಠರಲ್ಲಿ ಮನವಿ ಮಾಡಿದ್ದೇನೆ, ಪಕ್ಷದ ಮುಖಂಡರ ಅಭಿಪ್ರಾಯ ಹಾಗೂ ನನ್ನ ಬೆಂಬಲಿಗರ ಜೊತೆ ಮಾತನಾಡಿದ ನಂತರ, ಮುಂದಿನ ನಿರ್ಧಾರ ಇನ್ನೊಂದು ವಾರದಲ್ಲಿ ಕೈಗೊಳ್ಳುತ್ತೇನೆ ಎಂದು ಜೆಡಿಎಸ್ ಮುಖಂಡರಿಗೆ ತಿಳಿಸಿದರು. ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ರಾಧಮ್ಮನಾರಾಯಣಗೌಡ, ಯುವ ಮುಖಂಡರಾದ ರೋಹಿತ್, ಜಮೃದ್ ಪಾಷಾ, ಮಂಜು, ಕುಮಾರ್ ಯೋಗಾನಂದ ಮೊದಲಾದವರು