ಗಂಗಾವತಿ: ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಪತ್ರಕರ್ತರಿಗೂ ಮಾನ್ಯತೆ ಪಡೆದ ಪತ್ರಕರ್ತರ ಗುರುತಿನ ಚೀಟಿಯನ್ನು ವಿತರಿಸಬೇಕು.ಗುರುತಿನ ಚೀಟಿ ವಿತರಿಸುವ ಅಧಿಕಾರವನ್ನು ಜಿಲ್ಲಾಧಿಕಾರಿಗಳಿಗೆ ನೀಡಬೇಕೆಂದು ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಬಂಗ್ಲೆ ಮಲ್ಲಿಕಾರ್ಜುನ ಹೇಳಿದರು.

ಅವರು ನಗರದ ಸರ್ಕ್ಯೂಟ್ ಹೌಸ್ ನಲ್ಲಿ ಗಂಗಾವತಿ ಮೀಡಿಯಾ ಕ್ಲಬ್ ಹಾಗೂ ಕರ್ನಾಟಕ ಪತ್ರಕರ್ತರ ಸಂಘದ ವತಿಯಿಂದ
ನಿಂದ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದರು.
ಈಗಾಗಲೇ ಪಕ್ಕದ ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ಅಕ್ರಡಿಷನ್ ಗುರುತಿನ ಪತ್ರವನ್ನು ವಿತರಿಸುವ ಅಧಿಕಾರವನ್ನು ಜಿಲ್ಲಾ ಮಟ್ಟದಲ್ಲಿಯೇ ಕೊಡಲಾಗಿದೆ ರಾಜ್ಯ ಮತ್ತು ಜಿಲ್ಲಾ ಮಟ್ಟದ ಪತ್ರಿಕೆಗಳಲ್ಲಿ ಕೆಲಸ ಮಾಡುವ ಎಲ್ಲಾ ಪತ್ರಕರ್ತರು ಮಾನ್ಯತೆ ಪಡೆದ ಪತ್ರಕರ್ತರ ಯಾದಿಯಲ್ಲಿ ಬರುತ್ತಾರೆ.ಅವರಿಗೆ ಸೇವಾ ಭದ್ರತೆ ಇರುವುದಿಲ್ಲ ಆದ್ದರಿಂದ ರಾಜ್ಯ ಸರಕಾರ ಮತ್ತು ವಾರ್ತಾ ಇಲಾಖೆ ತಾಲೂಕು ಜಿಲ್ಲಾ ಮಟ್ಟದ ಪತ್ರಿಕೆಗಳಲ್ಲಿ ಕೆಲಸ ಮಾಡುವ ಪತ್ರಕರ್ತರಿಗೆ ಮಾನ್ಯತೆ ನೀಡಬೇಕು.ಗ್ರಾಮೀಣ ಮತ್ತು ನಗರ ಮಟ್ಟದಲ್ಲಿ ಮನೆ ಸಹಿತ ನಿವೇಶನವನ್ನು ನೀಡಬೇಕು. ಪತ್ರಕರ್ತರ ಮಕ್ಕಳ ವಿದ್ಯಾಭ್ಯಾಸಕ್ಕೆ ಧನಸಹಾಯ ಮಾಡಬೇಕು ಆರೋಗ್ಯ ಸಂಜೀವಿನಿ ಯೋಜನೆ ಎಲ್ಲಾ ಪತ್ರಕರ್ತರಿಗೆ ವಿಸ್ತರಿಸಬೇಕು.
ಗಂಗಾವತಿ ಮೀಡಿಯಾ ಕ್ಲಬ್ ಅಧ್ಯಕ್ಷ ನವಲಿ ರಾಮಮೂರ್ತಿ ಪ್ರಧಾನ ಕಾರ್ಯದರ್ಶಿ ಕೆ. ನಿಂಗಜ್ಜ ಹಿರಿಯ ಪತ್ರಕರ್ತರಾದ ಕೆ. ಮಲ್ಲಿಕಾರ್ಜುನ್ ಸಾಣಾಪುರ ಎಸ್.ಎಂ.ಪಟೇಲ್ ಕರ್ನಾಟಕ ಪತ್ರಕರ್ತರ ಸಂಘ ರಸ್ತೆ ಹೊಸ್ಕೇರಿ ಮಲ್ಲಿಕಾರ್ಜುನ ಸೇರಿ ಅನೇಕರಿದ್ದರು