
ಬಳ್ಳಾರಿ 16, ದೇಶದ ಎರಡು ಪ್ರಮುಖ ರಾಷ್ಟ್ರೀಯ ಪಕ್ಷಗಳಿಂದ ಧರ್ಮ ದಳ್ಳೂರಿಗೆ, ಕೋಮುಗಲಭೆ ಗೆ ಈಗಾಗಲೇ ಸಾಕಷ್ಟು ನೋವು ಸಂಕಷ್ಟ ದೇಶದ ಪ್ರಜೆಗಳು ಅನುಭವಿಸುತ್ತಿದ್ದು ಸಾಕು, ಸಂವಿಧಾನದ ಆಶಯದಲ್ಲಿ ಸಮಾನತೆ ಸ್ವಾತಂತ್ರ, ಬಾತೃತ್ವ ಮನೋಭಾವನೆಯನ್ನು ತಮ್ಮ ಜೀವನದ ಉದ್ದಕ್ಕೂ ಬೆಳೆಸಿಕೊಂಡು ಬಂದಿರುವ ಅರವಿಂದ್ ಕ್ರೇಜಿವಾಲ್ ಅಮ್ ಆದ್ಮಿ ಪಕ್ಷದ ದೆಹಲಿಯ ಮುಖ್ಯಮಂತ್ರಿ ಆಗಿ ಈಗ ಪಂಜಾಬಿನಲ್ಲಿ ಆಡಳಿತದ ಚುಕ್ಕಾಣಿಯನ್ನು ಹಿಡಿಯುವುದರ ಮೂಲಕ ದೇಶದ ಮಗನಾಗಿ ಕಂಗೊಳಿಸುತ್ತಿದ್ದಾರೆ, ಆಡಳಿತದಲ್ಲಿ ಪಾರದರ್ಶಕತೆ, ಪ್ರಾಮಾಣಿಕತೆ, ದಕ್ಷ ಆಡಳಿತದ ಮೂಲಕ ಪಕ್ಷದ ಸಂಘಟನೆಯಲ್ಲಿ ತೊಡಗಿದ್ದು ಇಂದು ಅವರ ಹುಟ್ಟುಹಬ್ಬ ಅಂತಹ ದಕ್ಷ ಮುಖ್ಯಮಂತ್ರಿ ಅರವಿಂದ್ ಕ್ರೇಜಿ ವಾಲ್ ನೂರಾರು ವರ್ಷ ಬಾಳಲಿ ಎಂದು ಬಳ್ಳಾರಿ ಅಮ್ ಆದ್ಮಿ ಪಕ್ಷದ ಮಹಿಳಾ ಅಧ್ಯಕ್ಷ ಪದ್ಮಾವತಿ ಸುಭಾಷ್ ಆಚಾರ್ ಸಂತಸ ವ್ಯಕ್ತಪಡಿಸಿದ್ದಾರೆ