ಕಲ್ಯಾಣಸಿರಿ

ನೊಂದರೈತಸಂಘಟನೆಗಳಿಂದ ಕೊಬ್ಬರಿ ಬೆಲೆಗಾಗಿ ಪ್ರತಿಭಟನೆ. ತಿಪಟೂರು ಎಪಿಎಮ್‌ಸಿಯಲ್ಲಿ ಧರಣಿ ಸತ್ಯಾಗ್ರಹ

ತಿಪಟೂರು: ಕಲ್ಪತರು ನಾಡು ತಿಪಟೂರಿನಲ್ಲಿ ಕೊಬ್ಬರಿ ಬೆಲೆ ರೈತರ ಜೀವನಾದರಿತ ಬೆಳೆಯಾಗಿದೆ ಏಷ್ಯಾದಲ್ಲಿಯೇ ವಿಶಾಲವಾದ ಕೃಷಿ ಮಾರುಕಟ್ಟೆ, ತುಮಕೂರು ಜಿಲ್ಲೆಯ ತುರುವೇಕೆರೆ, ಚಿ,ನಾ,ಹಳ್ಳಿ, ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ಹಾಗೂ ಅರಸೀಕೆರೆ ತಾಲ್ಲೂಕಿನಿಂದಲೂ ಮಾರುಕಟ್ಟೆಗೆ ಸಾವಿರಾರು ಕ್ವಿಂಟಲ್ ಕೊಬ್ಬರಿ ಬಂದು ರಾಜ್ಯಕ್ಕೆ ಹೆಚ್ಚಿನ ತೆರಿಗೆ ಕೊಡುವ ಮಾರುಕಟ್ಟೆಯಾಗಿದ್ದು ರೈತರಿಗೆ ಕನಿಷ್ಠ 16ಸಾವಿರ ಬೆಂಬಲ ಬೆಲೆ ನೀಡಬೇಕೆಂದು ಮಾರುಕಟ್ಟೆ ಆವರಣದ ಬಾಗಿಲು ಮುಚ್ಚಿ ಮಾರುಕಟ್ಟೆ ಬಂದ್ ಮಾಡಿ ಸರ್ಕಾರಕ್ಕೆ ನೊಂದ ರೈತರು ಹಾಗೂ ತೆಂಗು ಉತ್ಪಾದಕರ ಸಂಘಗಳು ಎಚ್ಚರಿಕೆ ನೀಡಿದರು.
ರೈತ ಮುಖಂಡ ಸೂಗುರು ಶಿವಸ್ವಾಮಿ ಮಾತನಾಡಿ ತಿಪಟೂರು ಇಡೀ ಏಷ್ಯಾದಲ್ಲಿ ಕೊಬ್ಬರಿಗೆ ಪ್ರಸಿದ್ಧವಾದ ಸ್ಥಳವಾಗಿದೆ. ಕಳೆದ ಹಲವಾರು ವರ್ಷಗಳಿಂದಲೂ ಕೊಬ್ಬರಿಗೆ ವೈಜ್ಞಾನಿಕ ಬೆಲೆ ನೀಡುವಂತೆ ಹಲವು ರೈತರ ಹೋರಾಟಗಳು ಆದರೂ ಬೆಲೆಯಲ್ಲಿ ಏರಿಕೆ ಕಂಡಿಲ್ಲ. ಕಳೆದ 2-3 ತಿಂಗಳ ಹಿಂದ 19 ಸಾವಿರ ತಲುಪಿದ್ದ ಬೆಲೆ 11 ಸಾವಿರಕ್ಕೆ ಬಂದಿದೆ. ಇದರಿಂದಾಗಿ ತೆಂಗು ಬೆಳೆಗಾರರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಅಲ್ಲದೇ ತೆಂಗು ಬೆಳೆಗೆ ಅನೇಕ ರೋಗಗಳು ಪ್ರಾರಂಭವಾಗಿದ್ದು ವಾರ್ಷಿಕ ಬೆಳೆಗೆ ಸಮರ್ಪಕ ಬೆಲೆ ಸಿಗುತ್ತಿಲ್ಲ. ತುಮಕೂರು ಜಿಲ್ಲೆಯಲ್ಲಿ ಇಬ್ಬರು ಸಚಿವರು, ಒಬ್ಬ ಸಂಸದರು ಇದ್ದು ತೆಂಗು ಬೆಳೆಗಾರ ಬಗ್ಗೆ ಕಿಂಚಿತ್ತು ಕಾಳಜಿ ಹೊಂದಿಲ್ಲ. ರೈತರು ಅನುಭವಿಸುವ ತೊಂದರೆಯನ್ನು ಮನಗಂಡು ಕೊಬ್ಬರಿ ಬೆಂಬಲ ಬೆಲೆಯನ್ನು 15 ಸಾವಿರಕ್ಕೆ ಏರಿಸಿದರೆ ಬೆಲೆ ಕುಸಿತ ಕಾಣುವುದಿಲ್ಲ. ಈ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೂಡಲೇ ಬೆಲೆ ಏರಿಕೆಗೆ ಮುಂದಾಗಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಬೀದಿಗಿಳಿದು ಹೋರಾಡುವ ಅನಿವಾರ್ಯತೆ ಎದುರಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ತಿಪಟೂರಿನ ಕೃಷಿ ಮಾರುಕಟ್ಟೆ ಆವರಣದಲ್ಲಿ ತುಮಕೂರು ಜಿಲ್ಲೆ ಹಾಗೂ ಹಾಸನ ಜಿಲ್ಲೆಯ ನೂರಾರು ರೈತರೊಂದಿಗೆ ಪ್ರತಿಭಟನೆ ನಡೆಸಿ, ಒಂದು ಕ್ವಿಂಟಲ್ ಕೊಬ್ಬರಿಗೆ ರೈತನಿಗೆ ಅಂದಾಜು 16ಸಾವಿರ ಖರ್ಚು ಬರುತ್ತಿದ್ದು, 11 ಸಾವಿರ ಬೆಂಬಲ ಬೆಲೆ ಸಾಕಾಗುವುದಿಲ್ಲ ಕಳೆದ ಬಾರಿ ರೈತರು ಹಾಗೂ ತೆಂಗು ಉತ್ಪಾದಕರ ಸಂಘಗಳು ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ, ಕೃಷಿ ಮಾರುಕಟ್ಟೆ ಬಂಡವಾಳ ಶಾಹಿಗಳ ಹಿಡಿತದಲ್ಲಿದ್ದು, ಕೆಲವರ್ತಕರು ನಿಗದಿಪಡಿಸುವ ಬೆಲೆಗೆ ಹರಾಜು ಪ್ರಕ್ರಿಯೆ ನಡೆಯುತ್ತಿದೆ ರೈತರಿಗೆ ಅನ್ಯಾಯವಾದರೂ ಸರ್ಕಾರ ತಲೆಕೆಡಿಸಿಕೊಳ್ಳುತ್ತಿಲ್ಲ, ಬೆಳೆದ ಕೊಬ್ಬರಿ ಬೆಳೆಗೆ ಸರಿಯಾದ ಬೆಲೆ ಸಿಗದೇ ರೈತರ ಮಕ್ಕಳು ವಲಸೆ ಹೋಗುತ್ತಿದ್ದಾರೆ, ಕುಟುಂಬದ ಮಹಿಳೆಯರು ಗಾರ್ಮೆಂಟ್ಸ್ನಲ್ಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದಾರೆ, ಶಾಸಕರ ಇಚ್ಛಾಶಕ್ತಿಯ ಕೊರತೆಯೇ ರೈತರ ಅದೂಗತಿಗೆ ಕಾರಣವಾಗಿದೆ, ಎಂದು ಎಪಿಎಂಸಿ ಕಾರ್ಯದರ್ಶಿ ನ್ಯಾಮಗೌಡರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಜಾತ್ಯಾತೀತ ಜನತಾದಳದ ಮುಖಂಡ ಶಿವಸ್ವಾಮಿ, ಬಜಗೂರು ವಸಂತ್ ಕುಮಾರ್, ಬಿಳಿಗೆರೆ ಕುಮಾರಸ್ವಾಮಿ, ಶಂಕರಲಿAಗಪ್ಪ ಬಿಳಿಗೆರೆ, ಗಂಡಸಿ ಹೋಬಳಿ ರೈತ ಸಂಘದ ಅಧ್ಯಕ್ಷೆ ಕಾಂತಮಣಿ, ಸಮಾಜ ಸೇವಕ ಶಾಂತಕುಮಾರ್ ಹಾಗೂ ಅರಸೀಕೆರೆ, ಕಡೂರು, ಚನ್ನರಾಯಪಟ್ಟಣ ತಾಲ್ಲೂಕಿನ ನೊಂದ ರೈತರು ಇದ್ದರು.

ಕೋಟ್ : ರೈತರಿಗೆ ಕೊಬ್ಬರಿ ಬೆಲೆಯು ವೈಜ್ಞಾನಿಕ ಬೆಲೆಯಲ್ಲಿ ನಿಗದಿಯಾಗದೆ, ಲಾಭದಾಯಕ ಬೆಲೆಯಲ್ಲಿ ನಿಗದಿಯಾದರೆ ಮಾತ್ರ, ರೈತರು ನೆಮ್ಮದಿ ಜೀವನ ನೆಡಸಲು ಸಾಧ್ಯ. ಆದ್ದರಿಂದ ಡಿ 19 ರಂದು ನವದೆಹಲಿಯ ರಾಮ್ ಲೀಲಾ ಮೈದಾನದÀಲ್ಲಿ ಲಕ್ಷಾಂತರ ರೈತರು ಸೇರಿ ಪ್ರತಿಭಟನೆ ಮಾಡಲಾಗುವುದು.
ಚಂದ್ರಶೇಖರ್ ಬಿಳಿಗೆರೆಪಾಳ್ಯ ಅದ್ಯಕ್ಷರು. ಭಾರತೀಯ ಕಿಸಾನ್ ಸಂಘ ತಿಪಟೂರು.

ಕೋಟ್ : ತೆಂಗು ಉತ್ಪಾದನೆಯ ಮತ್ತು ನಂತರದ ಸಮಸ್ಯೆಗಳನ್ನು ಕುರಿತು ಸರ್ಕಾರದ ಸಂಸ್ಥೆಗಳು ಪ್ರಸ್ತುತ ಮಾರುಕಟ್ಟೆಯ ದರವನ್ನು ಆದರಿಸಿ ಒಟ್ಟು ಉತ್ಪಾದನಾ ವೆಚ್ಚದ ಶೇ 50% ಲಾಭಾಂಶ ಉತ್ಪಾದಕರಿಗೆ ನೀಡಬೇಕು.
ಶಂಕರಮೂರ್ತಿ ರಂಗಾಪುರ ಅದ್ಯಕ್ಷರು. ರಂಗನಾಥ ತೆಂಗು ಉತ್ಪಾದಕರ ಸಂಘ

ಎಚ್ ಮಲ್ಲಿಕಾರ್ಜುನ
Editor and Owner Of Kalyansiri.in Kannada Digital News Portal

Leave a Reply

ನಕಲು ಬಲ ರಕ್ಷಿಸಲಾಗಿದೆ