ಕಲ್ಯಾಣಸಿರಿ

ವಿಧಾನಸಭೆಚುನಾವಣೆರಿಪಬ್ಲಿಕ್ ಪಾರ್ಟಿ ಆಫ್ಇಂಡಿಯಾ (ಬಿ) ಪಕ್ಷದಿಂದ ಸಿದ್ಧತೆ

ಗಂಗಾವತಿ: ಮುಂಬರುವ ವಿಧಾನಸಭೆ ಚುನವಣೆ ಹಿನ್ನೆಲೆ ಕರ್ನಾಟಕದಎಲ್ಲಾ ಜಿಲ್ಲೆಗಳಿಗೆ ಖPI (ಃ) ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾ (ಬಿ) ಪಕ್ಷ (ಡಾ. ಬಿ.ಆರ್.ಅಂಬೇಡ್ಕರ್ ಪಕ್ಷ) ದಿಂದ ಪ್ರವಾಸ ಕೈಗೊಳ್ಳಲಾಗುವುದು. ಪಕ್ಷದರಾಷ್ಟಿçÃಯ ಅಧ್ಯಕ್ಷರಾದ ಡಾ. ಎನ್. ಮೂರ್ತಿಯವರಿಂದ ಪ್ರವಾಸಕ್ಕೆಚಾಲನೆ ನೀಡಲಾಗುವುದು. ಈ ಸಂದರ್ಭದಲ್ಲಿಅವರಿಗೆಆತ್ಮೀಯವಾಗಿಅಭಿನಂದಿಸಲಾಗುವುದು. ಡಾ. ಎನ್. ಮೂರ್ತಿಯವರು ಪಕ್ಷದಕೊಪ್ಪಳ ಜಿಲ್ಲಾ ಮಹಿಳಾ ಘಟಕದ ಉಪಾಧ್ಯಕ್ಷರನ್ನಾಗಿ ಶ್ರೀಮತಿಸರಸ್ವತಿ ನಾಗರಾಜ ಇವರನ್ನು ಆಯ್ಕೆ ಮಾಡಿದ್ದಾರೆ.ಆಯ್ಕೆಯಾದ ಶ್ರೀಮತಿ ಸರಸ್ವತಿ ನಾಗರಾಜ ಇವರು ಮಾತನಾಡಿ,ಕೊಪ್ಪಳ ಜಿಲ್ಲೆಯಾಧ್ಯಂತ ದಿನಾಂಕ: ೨೬.೧೧.೨೦೨೨ ರಿಂದ ೨೬-೧೧-೨೦೨೩ರವರೆಗೆ ಪ್ರವಾಸ ಕೈಗೊಂಡು ಪಕ್ಷದ ಬಲವರ್ಧನೆಗೆ ಹಲವಾರುಕಾರ್ಯಕ್ರಮಗಳನ್ನು ಹಮ್ಮಿಕೊಂಡು ಪಕ್ಷದಧ್ಯೇಯೋದ್ಧೇಶಗಳನ್ನು ಸಾರ್ವಜನಿಕರ ಗಮನಕ್ಕೆ ತರಲುಶ್ರಮಿಸುವುದಾಗಿ ತಿಳಿಸಿ, ಖPI (ಃ) ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾ (ಬಿ) ಪಕ್ಷದರಾಷ್ಟಿçÃಯ ಅಧ್ಯಕ್ಷರಾದ ಡಾ. ಎನ್. ಮೂರ್ತಿಯವರ ನಾಲ್ಕುದಶಕಗಳ ಹೊರಾಟ, ಅವರ ಕುಟುಂಬ ತ್ಯಾಗಕ್ಕೆ ತಕ್ಕ ಪ್ರತಿಫಲದೊರಕಿಸಿ, ಅವರನ್ನು ಇನ್ನಷ್ಟು ಉನ್ನತ ಮಟ್ಟಕ್ಕೆ ಬೆಳೆಯಲು ಹಾಗೂದೀನ ದಲಿತರು, ದುರ್ಬಲರ ಕಲ್ಯಾಣಕ್ಕೆ ಶ್ರಮಿಸಲಾಗುವುದು. ರಾಜ್ಯದಲ್ಲಿನಿರುದ್ಯೋಗ, ಅನಕ್ಷರತೆ, ಅಜ್ಞಾನ ತಾಂಡವವಾಡುತ್ತಿದೆ. ಇಂತಹಅಸಮಾನತೆಯನ್ನು ನಿರ್ಮೂಲನೆ ಮಾಡಲು ನಮ್ಮ ಪಕ್ಷಹೋರಾಡಲಿದೆ ಎಂದು ತಿಳಿಸಿದರು.ಭಾರತದಲ್ಲಿ ಸಂವಿಧಾನ ಜಾರಿಯಾಗಿ ೭೫ ವರ್ಷ ಕಳೆದಿದೆ. ದೇಶದಲ್ಲಿಅನಕ್ಷರತೆ, ನಿರುದ್ಯೋಗ, ಬಡತನ ಹಾಗೆ ಇದೆ. ದೇಶ ಆರ್ಥಿಕವಾಗಿ. ದಿವಾಳಿಯಾಗಿದೆ. ಜಾಗತಿಕ ಆರ್ಥಿಕ ಸೂಚ್ಯಾಂಕದಲ್ಲಿ ೧೯೭ನೇ ಸ್ಥಾನದಲ್ಲಿದೆ.ಹಸಿವಿನ ಸೂಚ್ಯಾಂಕದಲ್ಲಿ ೧೨೧ ದೇಶಗಳಲ್ಲಿ ೧೦೭ನೇ ಸ್ಥಾನದಲ್ಲಿದೆ.ಆದಾಗ್ಯೂ ಕೇಂದ್ರ ಸರ್ಕಾರ ಬಡವರು, ಮಧ್ಯಮವರ್ಗದವರನೆರವಿಗೆ ಬರದೇ ದಿನಬಳಕೆಯ ಆಹಾರ, ಗ್ಯಾಸ್ ಸಿಲಿಂಡರ್, ಡೀಸೆಲ್,ಪೆಟ್ರೋಲ್ ಬೆಲೆ ಹೆಚ್ಚಿಸುತ್ತಲೇ ಇದೆ. ಹಿಂದೆಂದೂ ಕಂಡರಿಯದ ಜಿ.ಎಸ್.ಟಿತೆರಿಗೆ ಹೇರಲಾಗಿದೆ. ಕೃಷಿಯನ್ನು ಆಧುನೀಕರಿಸುತ್ತಿಲ್ಲ. ಮಳೆಯಿಂದಬೆಳೆ ಹಾನಿ, ಅತಿವೃಷ್ಟಿ-ಅನಾವೃಷ್ಟಿಯಿಂದ ಜನ ತತ್ತರಿಸಿ ಹೋಗಿದ್ದಾರೆ. ಸರ್ಕಾರಅವರ ನೆರವಿಗೆ ಬರುತ್ತಿಲ್ಲವೆಂದು ವಿಷಾದಿಸಿದರು.ಶಿಕ್ಷಣ, ಆರೋಗ್ಯ ಉಚಿತವಾಗಬೇಕು. ನಿರುದ್ಯೋಗನಿವಾರಣೆಯಾಗಬೇಕು, ಯುವಶಕ್ತಿ ನಾಶವಾಗುತ್ತಿದೆ. ವರ್ಷಕ್ಕೆ ೨ಕೋಟಿ ಉದ್ಯೋಗ ನೀಡುತ್ತೇವೆ. ೨೦೨೨ ಹೊತ್ತಿಗೆ ಎಲ್ಲಾ ನಿರಾಶ್ರಿತರಿಗೂಉತ್ತಮ ಮನೆ ನಿರ್ಮಿಸುತ್ತೇವೆ. ಬುಲೆಟ್ ಟ್ರೆöÊನ್ ಬಿಡುತ್ತೇವೆ ಎಂದೆಲ್ಲಮೋದಿ ಸಾಹೇಬರು ಸುಳ್ಳು ಭರವಸೆ ಕೊಟ್ಟರು. ಕೇಂದ್ರದಲ್ಲಿ SಅSP/ಖಿSPಕಾಯ್ದೆ ತರಲು ಮೀನಾಮೇಷ ಎಣಿಸಲಾಗುತ್ತಿದೆ. ರಾಜ್ಯದಲ್ಲಿ SಅSP/ಖಿSPಕಾಯ್ದೆ ಇದ್ದರೂ ಸಹ ಈ ಕಾಯ್ದೆಯಲ್ಲಿ ಸೆಕ್ಷನ್ ೭ಡಿ ಇಟ್ಟು ಇದರ ಪ್ರಕಾರಪರಿಶಿಷ್ಟರ ಅಭಿವೃದ್ಧಿಗೆ ನಿಗದಿಪಡಿಸಲಾದ ಹಣವನ್ನು ರಸ್ತೆ, ಕೆರೆ,ಸೇತುವೆಗಲಂತಹ ಇತರೆ ಸಾಮಾನ್ಯ ಯೋಜನೆಗೆ ಬಳಸಲಾಗಿದೆ.ಕೇಂದ್ರ ಸರ್ಕಾರ ೬೦ ಲಕ್ಷ ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗ ವಿದ್ಯಾರ್ಥಿಗಳವಿದ್ಯಾರ್ಥಿ ವೇತನವನ್ನು ಕಡಿತಗೊಳಿಸಿದೆ. ಕೇಂದ್ರ ಸರ್ಕಾರ ಹಾಗೂ ರಾಜ್ಯಸರ್ಕಾರದಲ್ಲಿ ಮುಂದಿನ ಬಜೆಟ್‌ನಲ್ಲಿ ಪ.ಜಾ/ಪ.ವರ್ಗಗಳ ಜನಸಂಖ್ಯೆಗನುಗುಣವಾಗಿ ಹಣ ಕಾಯ್ದಿರಿಸಿ ಬಿಡುಗಡೆ ಮಾಡಬೇಕು.ಸದಾಶಿವ ಆಯೋಗದ ವರದಿ ಜಾರಿಯಾಗಬೆಕು. SಅSP/ಖಿSP ಕಾಯ್ದೆಯಕ್ಲಾಸ್ ೭ಡಿ ರದ್ದಾಗಬೇಕು. ಆಶ್ರಯ ಮನೆ, ಸಕ್ರಮ, ಬಗರ್‌ಹುಕ್ಕುಂ,ಸಾಗುವಳಿ ಸಕ್ರಮ, Pಖಿಅಐ ಕಾಯ್ದೆ ತಿದ್ದುಪಡಿ ಆಗಲಿ, ಸಂವಿಧಾನಸAಪೂರ್ಣ ಜಾರಿಗಾಗಿ ನಮ್ಮ ಪಕ್ಷ ಖPI (ಃ) ರಾಜ್ಯಾಧ್ಯಂತ ಆಂದೋಲನಮಾಡಲಿದೆ ಎಂದರು.ಈ ಸಂದರ್ಭದಲ್ಲಿ ಡಾ. ಜ್ಞಾನಸುಂದರ, ರಾಮಣ್ಣ ಕಂದಾರಿ, ಬಸವರಾಜಸಾಸಲಮರಿ, ಮರಿಸ್ವಾಮಿ, ಚಂದಪ್ಪ ಕುಂದ್ರಿ, ನಾಗರಾಜ ರ‍್ಯಾವಣಕಿ,ಯಮನೂರ, ಅಂಜಿನಪ್ಪ, ಲಿಂಗಪ್ಪ ಪೂಜಾರ ಕನಕಗಿರಿ ಸೇರಿದಂತೆಮತ್ತಿತರರು ಉಪಸ್ಥಿತರಿದ್ದರು.ಪಕ್ಷದ ರಾಜ್ಯಾಧ್ಯಂತ ಆಂದೋಲನಸAವಿಧಾನವನ್ನು ರಾಜಕೀಯ ಪಕ್ಷಗಳು ಇಚ್ಛಾನುಸಾರತಿದ್ದುಪಡಿ ಮಾಡಿವೆ. ಮೀಸಲಾತಿ ಮತ್ತು ಅದರ ಆಶಯ ಹಾಗೂ. ಪರಿಕಲ್ಪನೆಗಳನ್ನು ಈಡೇರಿಸುವ ಇಚ್ಛಾಶಕ್ತಿತೋರದೆಸಂವಿಧಾನವನ್ನು ಬದಲಿಸುತ್ತೇವೆ ಎಂದು ಗೊಂದಲ ಸೃಷ್ಟಿಯಾಗುತ್ತಿದೆ.ಕೋಮು ಮತ್ತು ಜಾತಿ ಘರ್ಷಣೆಗಳು ಹೆಚ್ಚಿವೆ. ರಾಜಕೀಯದಲ್ಲಿಧರ್ಮವನ್ನು ಬೆರೆಸಲಾಗುತ್ತಿದೆ. ತೀವ್ರ ಭ್ರಷ್ಟಾಚಾರ, ಸ್ವಜನಪಕ್ಷಪಾತ, ಮನೆತನಾಡಳಿತ ದ್ವೇಷದ ರಾಜಕಾರಣದಿಂದ ಜನಬೇಸತ್ತಿದ್ದಾರೆ. ಕೇಂದ್ರ ಮತ್ತು ರಾಜ್ಯದಲ್ಲಿ ಬಲಿಷ್ಠ ವಿರೋಧಪಕ್ಷವಿಲ್ಲ. ಇದು ಪ್ರಜಾಪ್ರಭುತ್ವಕ್ಕೆ ಬಹುದೊಡ್ಡ ಪೆಟ್ಟಾಗಿದೆ. ಈಸಂದರ್ಭದಲ್ಲಿ ಹಲವಾರು ಪಕ್ಷ ಸೇರ್ಪಡೆಗೊಂಡರು.ಖPI (ಃ) ನಿರ್ಣಯಗಳುನಮ್ಮ ಖPI (ಃ) ದಿನಾಂಕ: ೨೬.೧೧.೨೦೨೨ ರಿಂದ ದಿನಾಂಕ: ೨೬.೧೧.೨೦೨೩ರವರೆಗೆ ರಾಜ್ಯಾಧ್ಯಂತ “ಸಂವಿಧಾನ ರಕ್ಷಿಸಿ ಜನಾಂದೋಲನ”ಅಭಿಯಾನ ನಡೆಸಲಿದೆ. ಜೈಭೀಮ್ ತಂಡಗಳು ರಾಜ್ಯದ ಹಳ್ಳಿಹಳ್ಳಿಗೆಪ್ರವಾಸ ಕೈಗೊಂಡು ಮುಂದಿನ ೨೦೨೩ ರ ವಿಧಾನಸಭಾ ಚುನಾವಣೆಗೆಎಲ್ಲಾ ೨೨೪ ಕ್ಷೇತ್ರಗಳಲ್ಲೂ ಸ್ಪರ್ಧಿಸಲಿದೆ.ರಾಜ್ಯಾಧ್ಯಂತ ೩ ತಿಂಗಳಲ್ಲಿ ಕನಿಷ್ಟ ೫೦ ಲಕ್ಷ ಸದಸ್ಯತ್ವದನೋಂದಣಿ ಹಾಗೂ ಸೇರ್ಪಡೆ ಮಾಡಲಾಗುವುದು. ೨೦೨೩ರಜನವರಿಯಲ್ಲಿ ದೆಹಲಿಯಲ್ಲಿ ನಡೆಯುವ ಖPI (ಃ) ರಾಷ್ಟಿçÃಯಸಮ್ಮೇಳನದ ನಂತರ ೨೦೨೩ ವಿಧಾನಸಭಾ ಚುನಾವಣೆಯಅಭ್ಯರ್ಥಿಗಳ ೧ನೇ ಹಂತದಪಟ್ಟಿಬಿಡುಗಡೆಮಾಡಲಾಗುವುದಾಗಿಹಲವಾರು ನಿರ್ಣಯಗಳನ್ನು ಅಂಗೀಕರಿಸಲಾಯಿತು.

ಎಚ್ ಮಲ್ಲಿಕಾರ್ಜುನ
Editor and Owner Of Kalyansiri.in Kannada Digital News Portal

Leave a Reply

ನಕಲು ಬಲ ರಕ್ಷಿಸಲಾಗಿದೆ