ಕಲ್ಯಾಣಸಿರಿ

ಕಿನ್ನಾಳ-ಲೇಬಗೇರಿ ಜಿಪಂ ಕ್ಷೇತ್ರಕ್ಕೆ ಜೆಡಿಎಸ್ ಆಕಾಂಕ್ಷಿ

?????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????

ಮಲ್ಲಮ್ಮ ತಿಪ್ಪಣ್ಣನವರ್ ಆಭ್ಯರ್ಥಿಯಾಗಿ ಕಣಕ್ಕೆ

ಕೊಪ್ಪಳ,: ಮುಂಬರುವ ಜಿಪಂ ಹಾಗೂ ತಾಪಂ ಚುನಾವಣೆಯಲ್ಲಿ ಗಂಗಾವತಿ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಕೊಪ್ಪಳ ತಾಲೂಕಿನ ಕಿನ್ನಾಳ-ಲೇಬಗೇರಿ ಪರಿಶಿಷ್ಠ ಜಾತಿ ಮಹಿಳಾ ಮೀಸಲು ಜಿಪಂ ಕ್ಷೇತ್ರದಿಂದ ಈ ಬಾರಿ ಚುನಾವಣೆಯಲ್ಲಿ ಸ್ಪರ್ದಿಸಲು ಶ್ರೀಮತಿ ಮಲ್ಲಮ್ಮ ಬಸವರಾಜ್ ತಿಪ್ಪಣ್ಣನವರ್ (ಗೂಡ್ಲಾನೂರು) ರವರು ಜೆಡಿಎಸ್ ಆಕಾಂಕ್ಷಿ ಆಭ್ಯರ್ಥಿಯಾಗಿ ಕಣಕ್ಕೆ ಇಳಿಯಲು ನಿರ್ಧರಿಸಿದ್ದಾರೆ ಎಂದು ಅವರ ಬೆಂಬಲಿಗರು ಹಾಗೂ ಸ್ನೇಹಿತರ ಬಳಗವು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶ್ರೀಮತಿ ಮಲ್ಲಮ್ಮ ರವರು ಕೊಪ್ಪಳದ ಹಿರಿಯ ಪತ್ರಕರ್ತ ಹಾಗೂ ವಿನಯವಾಣಿ ಸ್ಥಳಿಯ ದಿನಪತ್ರಿಕೆಯ ಸಂಪಾದಕ ಬಸವರಾಜ್ ತಿಪ್ಪಣ್ಣನವರ್ (ಗೂಡ್ಲಾನೂರು) ರವರ ಧರ್ಮ ಪತ್ನಿಯಾಗಿದ್ದು, ಈಗಾಲೇ ಜಿಲ್ಲೆಯಲ್ಲಿ ಹಾಗೂ ವಿಶೇಷವಾಗಿ ಗ್ರಾಮೀಣ ಭಾಗದಲ್ಲಿ ತಮ್ಮನ್ನು ತಾವು ಸಕ್ರೀಯವಾಗಿ ಸಾಮಾಜಿಕ ಚುಟುವಟಿಕೆಯಲ್ಲಿ ತೊಡಗಿಸಿಕೊಂಡು ಶ್ರಮಿಸುತ್ತಾಬಂದಿರುವ ಇವರು, ಶೋಷಿತ ಸಮುದಾಯಗಳ ಅದರಲ್ಲೂ ವಿಶೇಷವಾಗಿ ಮಹಿಳೆಯರ ಪರ ಧ್ವನಿಯಾಗಿ ಶ್ರಮಿಸುತ್ತಾ ಬಂದಿದ್ದಾರೆ. ಇವರ ಪತಿ ಕೂಡ ಪತ್ರಿಕೋದ್ಯಮದಲ್ಲಿ ಕಳೆದ ಒಂದು ದಶಕದಿಂದ ಉತ್ತಮ ಸೇವೆ ಸಲ್ಲಿಸುತ್ತಾ ಸಾಮಾನ್ಯ ಜನರ ವಿಶ್ವಾಸ ಗಳಿಸುವಲ್ಲಿ ಯಶ್ವಸಿಯಾಗಿದ್ದಾರೆ.

       ಈಗ ಅವರ ಬೆಂಬಲಿಗರು ಮತ್ತು ಸ್ನೇಹಿತರ ಬಳಗ ಸೇರಿದಂತೆ ವಿವಿಧ ಸಂಘಟನೆಗಳು ಮತ್ತು ಕ್ಷೇತ್ರ ಪರಿಶಷ್ಠ ಜಾತಿ ಸಮುದಾಯ ಮತ್ತು ಮಹಿಳೆಯರ ಒತ್ತಾಯದ ಮೇರೆಗೆ ಈ ಬಾರಿ ಜರುಗಲಿರುವ ಜಿಲ್ಲೆಯ ಜಿಪಂ, ತಾಪಂ ಚುನಾವಣೆಯಲ್ಲಿ ಕಿನ್ನಾಳ-ಲೇಬಗೇರಿ ಜಿಪಂ ಪರಿಶಿಷ್ಠ ಜಾತಿ ಮಹಿಳಾ ಮೀಸಲು ಕ್ಷೇತ್ರದಿಂದ ಸ್ಪರ್ದಿಸಲು ನಿರ್ಣಯಿಸಿದ್ದಾರೆ. ಈಗಾಗಲೇ ರಾಷ್ಟಿçÃಯ ಪಕ್ಷಗಳ ಆಡಳಿತಗಳಿಂದ ಜನರು ಬೇಸತ್ತಿದ್ದಾರೆ. ಪ್ರಾದೇಶಿಕ ಪಕ್ಷಗಳ ಬಗ್ಗೆ ಹೆಚ್ಚಿನ ಒಲವು ತೋರಿದ ಹಿನ್ನಲೆಯಲ್ಲಿ ಜಿಡಿಎಸ್ ಪಕ್ಷದಿಂದ ಸ್ಪರ್ದಿಸಲು ಇಚ್ಛಿಸಿ ಟಿಕೇಟ್ ಬೇಡಿ ಅರ್ಜಿ ಹಾಕಲು ಈಗಾಗಲೇ ತಯಾರಿ ನಡೆಸಿದ್ದಾರೆ ಎಂದು ಬೆಂಬಲಿಗರು ಮತ್ತು ಸ್ನೇಹಿತರ ಬಳಗ ಸೇರಿದಂತೆ ವಿವಿಧ ಸಂಘಟನೆಗಳು ಮತ್ತು ಕ್ಷೇತ್ರದ ಪರಿಶಿಷ್ಠ ಜಾತಿ ಸಮುದಾಯ ಮತ್ತು ಮಹಿಳೆಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಎಚ್ ಮಲ್ಲಿಕಾರ್ಜುನ
Editor and Owner Of Kalyansiri.in Kannada Digital News Portal

Leave a Reply

ನಕಲು ಬಲ ರಕ್ಷಿಸಲಾಗಿದೆ