ಕಲ್ಯಾಣಸಿರಿ

ತಿಪಟೂರುತೋಟಗಾರಿಕೆ ಇಲಾಖೆಯಿಂದ ರೈತರಿಗೆ ತೆಂಗಿನ ಸಸಿ ವಿತರಣೆ

ತಿಪಟೂರು:ತಿಪಟೂರು ತೋಟಗಾರಿಕೆ ಇಲಾಖೆಯಿಂದ ರೈತರಿಗೆ ರಿಯಾಯಿತಿ ದರದಲ್ಲಿ ತೆಂಗಿನಸಸಿ ವಿತರಸಲಾಯಿತು ತೋಟಗಾರಿಕೆ ಸಹಾಯಕ ನಿರ್ದೇಶಕ ಆಂಜನೇಯ ರೆಡ್ಡಿ ತಂಗಿನ ಸಸಿವಿತರಣೆ ಮಾಡಿದರು.

ಗೊರಗೊಂಡನಹಳ್ಳಿ ತೋಟಗಾರಿಕೆ ಫಾರಂ ನಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ರೈತರಿಗೆ ತೆಂಗಿನ ಸಸಿವಿತರಿಸಿದ ಅವರು ತಿಪಟೂರು ತೋಟಗಾರಿಕೆ ಇಲಾಖೆಯಿಂದ ಗೊರಗೊಂಡನಹಳ್ಳಿ ತೋಟಗಾರಿಕೆ ಫಾರಂ ನಲ್ಲಿ 19ಸಾವಿರ ತೆಂಗಿನ ಸಸಿ ಬೆಳೆಸಿದ್ದು
ತಿಪಟೂರು ತಳಿಯ ಉತ್ತಮಗುಣಮಟ್ಟದ ಸಸಿಗಳನ್ನ ತೆಂಗಿನ ಸಸಿಯೊಂದಕ್ಕೆ 75ರೂಪಾಯಿಯಂತೆ ತಾಲ್ಲೋಕಿನ ರೈತರಿಗೆ ಸಸಿ ವಿತರಣೆ ಮಾಡುತ್ತಿದು
ರೈತರು ಪಹಣಿ ಆಧಾರ್ ಕಾರ್ಡ್ ಸೇರಿದಂತೆ ಅಗತ್ಯ ದಾಖಲೆಗಳನ್ನ ಇಲಾಖೆಗೆ ಸಲ್ಲಿಸಿ ಸಸಿಗಳನ್ನ ಪಡೆಯಬಹುದಾಗಿದೆ ತಾಲ್ಲೋಕಿನ ರೈತರು ಯೋಜನೆ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು ಕಾರ್ಯಕ್ರಮದಲ್ಲಿ ತೋಟಗಾರಿಕೆ ಎಹೆಚ್ಒ ಚೇತನ್.ಫಾರಂ ನಿರ್ವಾಹಕ ಶ್ರೀನಿವಾಸ್ ಉಪಸ್ಥಿತರಿದರು

ಎಚ್ ಮಲ್ಲಿಕಾರ್ಜುನ
Editor and Owner Of Kalyansiri.in Kannada Digital News Portal

Leave a Reply

ನಕಲು ಬಲ ರಕ್ಷಿಸಲಾಗಿದೆ