
ಗಂಗಾವತಿ,ಅಕ್ಟೋಬರ್01: ತಾಲೂಕಿನ ದಾಸನಾಳ ಗ್ರಾಮದಲ್ಲಿ ಅಂದಾಜು ಮೊತ್ತ 68 ಲಕ್ಷ ರೂ ಗಳಲ್ಲಿ ದಾಸನಾಳ ಸೇತುವೆ ಯಿಂದ ದಾಸನಾಳ ಗ್ರಾಮದ ವರೆಗೆ ಸಿಸಿ ರಸ್ತೆ ಮತ್ತು ಚರಂಡಿ ಕಾಮಗಾರಿಯ ಭೂಮಿ ಪೂಜೆಗೆ ಶಾಸಕರಾದ ಪರಣ್ಣ ಮುನವಳ್ಳಿ ಚಾಲನೆ ನೀಡಿದರು
ನಂತರ ಮಾತನಾಡಿ ಗುಣಮಟ್ಟದ ಕಾಮಗಾರಿಯನ್ನು ಮಾಡಬೇಕು ಯಾವುದೇ ರೀತಿಯಲ್ಲಿ ಕಳಪೆ ಮಟ್ಟದ ಕಾಮಗಾರಿಯನ್ನು ಮಾಡಬಾರದು ಎಂದು ಗುತ್ತಿಗೆದಾರರಿಗೆ ಸಲಹೆ ನೀಡಿದರು ಮತ್ತು ಗ್ರಾಮದಲ್ಲಿ ಸಾರ್ವಜನಿಕರು ಸಹಕಾರದಿಂದ ಕಾಮಗಾರಿಯನ್ನು ಮಾಡಬೇಕು ಎಂದರು
ಈ ಸಂಧರ್ಭದಲ್ಲಿ ಗ್ರಾಮೀಣ ಮಂಡಲ ಅಧ್ಯಕ್ಷ ಚೆನ್ನಪ್ಪ ಮಳಿಗಿ, ರೈತ ಮೋರ್ಚ ಜಿಲ್ಲಾ ಅಧ್ಯಕ್ಷ ಚೆನ್ನವೀರನ ಗೌಡ, ಶಕ್ತಿ ಕೇಂದ್ರದ ಅಧ್ಯಕ್ಷ ಆರ್. ದೇವಾನಂದ, ಕೆಡಿಪಿ ಸದಸ್ಯ ಅಮೆರೇಗೌಡ ಪೋಲಿಸ್ ಪಾಟೀಲ್,ಎಪಿಎಮ್ಸಿ ಮಾಜಿ ಅಧ್ಯಕ್ಷ ಸಣ್ಣಕ್ಕಿ ನೀಲಪ್ಪ ಬಗರ ಹುಕಂ ಸದಸ್ಯ ಸಿದ್ದಲಿಂಗಯ್ಯ ಗಡ್ಡಿಮಠ ಮುಖಂಡರಾದ ಜಿ. ವೀರನಗೌಡ, ವಿರುಪಾಕ್ಷ ಗೌಡ , ಹನುಮಂತ ಗೌಡ, ವೀರಭದ್ರಗೌಡ ಮಾಲಿಪಾಟೀಲ್, ಹಾಗೂ ದಾಸನಾಳ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.