Breaking News

ಚಂಪಾ ಸೃಷ್ಟಿ ಪ್ರಯುಕ್ತ ಶ್ರೀ ಕನ್ನಿಕಾ ಪರಮೇಶ್ವರಿ ದೇವಿಗೆ ಕಾರ್ತಿಕೋತ್ಸವ

Kartikotsava to Goddess Sri Kannika Parameshwari for the creation of Champa

ಜಾಹೀರಾತು
ಜಾಹೀರಾತು

ಗಂಗಾವತಿ: ನಗರದ ಹಿರೇಜಂತಕಲ್, ವಿರುಪಾಪುರ ಆರ್ಯವೈಶ್ಯ ಸಮಾಜದ ನೇತೃತ್ವದಲ್ಲಿ ಕಾರ್ತಿಕ ಮಾಸದ ಕೊನೆಯ ದಿನವಾದ ಶನಿವಾರದಂದು ಚಂಪಾಸೃಷ್ಟಿ (ಶ್ರೀ ಸುಬ್ರಹ್ಮಣ್ಯೇಶ್ವರ ಆಚರಣೆ) ಪ್ರಯುಕ್ತ ಶ್ರೀ ಕನ್ನಿಕಾ ಪರಮೇಶ್ವರಿ ದೇವಿಗೆ ದೀಪೋತ್ಸವ ಅಪಾರ ಭಕ್ತಾದಿಗಳ ಮಧ್ಯೆ ಶ್ರದ್ಧೆ, ಭಕ್ತಿಯಿಂದ ಜರುಗಿತು.
ಇದಕ್ಕೂ ಪೂರ್ವದಲ್ಲಿ ಅಮ್ಮನವರಿಗೆ ವಿಶೇಷ ಅಲಂಕಾರ, ಧಾರ್ಮಿಕ ಪೂಜಾ ಕಾರ್ಯಕ್ರಮಗಳನ್ನು ದೇವಸ್ಥಾನದ ಅರ್ಚಕರು ಸಾಂಗತವಾಗಿ ನಡೆಸಿಕೊಟ್ಟರು. ಬಳಿಕ ವಾಸವಿ ಮಹಿಳಾ ಮಂಡಳಿಯ ಸದಸ್ಯರಿಂದ ಭಜನೆ, ಲಲಿತ ಸಹಸ್ರಪಾರಾಯಣ ಪಠಣ, ಇತರೆ ಕಾರ್ಯಕ್ರಮಗಳು ಜರುಗಿದವು. ಬಳಿಕ ಸಮಾಜದ ಅಧ್ಯಕ್ಷ ನಾಗರಾಜ ದರೋಜಿ ದಂಪತಿಗಳು ಸೇರಿದಂತೆ ಟ್ರಸ್ಟಿ ಸದಸ್ಯರ ನೇತೃತ್ವದಲ್ಲಿ ದೀಪೋತ್ಸವಕ್ಕೆ ಚಾಲನೆ ನೀಡಲಾಯಿತು.
ಬಳಿಕ ಅಧ್ಯಕ್ಷ ನಾಗರಾಜ ದರೋಜಿ ಮಾತನಾಡಿ ಪ್ರತಿವರ್ಷದಂತೆ ಈ ವರ್ಷವೂ ಸಹ. ಚಂಪಾ ಸೃಷ್ಟಿಯ ೧೬ನೇ ವರ್ಷದ ಕಾರ್ತಿಕ ದೀಪೋತ್ಸವ ಇದಾಗಿದ್ದು, ಸಮಾಜಬಾಂಧವರ ಎಲ್ಲರ ಸಹಕಾರದ ಮೇರೆಗೆ ಯಶಸ್ವಿಗೊಂಡಿದೆ. ಜ್ಯೋತಿ ಪರಂ ಬ್ರಹ್ಮ ಎನ್ನುವಂತೆ ಕುಲದೇವತೆ ಅಮ್ಮನವರು ಸರ್ವರಿಗೂ ಸುಖ ಶಾಂತಿ ಸಮೃದ್ಧಿ ಕರುಣಿಸಲಿ ಎಂದು ಸಂಕಲ್ಪಿಸಿಕೊAಡಿರುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಡಿ. ಮಲ್ಲಿಕಾರ್ಜುನ, ಗೋಪಾಲ ಶೆಟ್ಟಿ ಆನೆಗುಂದಿ, ಡಿ. ವೆಂಕಟೇಶ್, ರುಕ್ಮಿಣಿಬಾಯಿ ದಮ್ಮೂರು, ಉಷಾ ಸಿರಿಗೇರಿ, ರೇಖಾ ಜಿ., ವಾಸವಿ ಯುವಜನ ಸಂಘದ ಯುವಕರು ಹಾಗೂ ಮಹಿಳಾ ಮಂಡಳಿಯ ಸದಸ್ಯರು ಪಾಲ್ಗೊಂಡಿದ್ದರು.

About Mallikarjun

Check Also

ನಿರ್ಮಲ ತುಂಗಭದ್ರಾ ಅಭಿಯಾನಕ್ಕೆ ಸೌಹಾರ್ದ ಸಹಕಾರಿ ಸಂಘಗಳ ಬಳಗ ಬೆಂಬಲ : ಸುಧಾಕರ್ ಕಲ್ಮನಿ  

Sauharda Cooperative Societies support Nirmala Tungabhadra campaign: Sudhakar Kalmani ಗಂಗಾವತಿ:ಶೃಂಗೇರಿಯ ಜಗದ್ಗುರು ಶ್ರೀ ಭಾರತಿ ತೀರ್ಥ ಮಹಾಸ್ವಾಮಿಗಳಿಂದ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.