ರಾಷ್ಟ್ರೀಯ ಸಂಘರ್ಷ ಸಮಿತಿಯ ರಾಜ್ಯ ಕಾರ್ಯಾಧ್ಯಕ್ಷರಾದ ವೀರಕುಮಾರಗಡಾದ ಅವರು ಪಿಂಚಣಿ ಹೆಚ್ಚು ಮಾಡಲು ಸಂಘಟಿತ ಹೋರಾಟ

Veerakumar Gadada, the state working president of the Rashtriya Sangharsh Samiti, organized a struggle to increase pensions.
 

ಗಂಗಾವತಿ:ಸಮೀಪದ ಮರಳಿಯ ಶ್ರೀ ಗಂಗಾಪರಮೇಶ್ವರಿ ದೇವಸ್ಥಾನದ ಸಮುದಾಯ ಭವನದಲ್ಲಿ ಕೊಪ್ಪಳ ಜಿಲ್ಲೆಯ ಸಭೆ ಜರುಗಿತು.
ರಾಷ್ಟ್ರೀಯ ಸಂಘರ್ಷ ಸಮಿತಿಯ ರಾಜ್ಯ ಕಾರ್ಯಾಧ್ಯಕ್ಷರಾದ ವೀರಕುಮಾರಗಡಾದ ಅವರು ಪಿಂಚಣಿ ಹೆಚ್ಚು ಮಾಡಲು ಸಂಘಟಿತ ಹೋರಾಟದ ಮುಖಾಂತರ ಸಾಧ್ಯ ಎಂದು ತಿಳಿಸಿದರು, ಉಪಾಧ್ಯಕ್ಷರಾದ ಚನ್ನಬಸಯ್ಯ ಅವರು ದಿನಾಂಕ 9, 10 ಹಾಗೂ 11 ಮಾರ್ಚನಲ್ಲಿ ದೆಹಲಿಯ ಜಂತರ ಮಂತರದಲ್ಲಿ ನಡೆಯುವ ಹೋರಾಟದಲ್ಲಿ ಪಾಲ್ಗೊಂಡು ಯಶಸ್ವಿ ಮಾಡಬೇಕೆಂದು ಕರೆ ನೀಡಿದರು. ಮಾಹಿತಿ ಸಂಚಾಲಕರಾದ ಅನೀಲ ಇನಾಮದಾರ ಅವರು ವಾರ್ಷಿಕ ಚಂದಾ, ಅಜೀವ ಚಂದಾದಾರರಾಗಬೇಕೆಂದು ವಿನಂತಿಸಿದರು. ಇನ್ನುಳಿದ ಶಾಂತಿನಾಥ ಪಾಟೀಲ್, ಗುಂಡಪ್ಪ ತೊಂತನಾಳ, ಎಸ್. ಎಸ್. ಅಲಸುಂಡಿ, ಜಿಲ್ಲಾ ಅಧ್ಯಕ್ಷರಾದ ಮಹಮ್ಮದ್ ಶ್ಯಾಮೀದ, ಮೌನೇಶ್ ಪತ್ತಾರ ಆಗಮಿಸಿದ್ದರು.
ಸಕ್ಕರೆ ಕಾರ್ಖಾನೆಯ ನಿವೃತ್ತ ಕಾರ್ಮಿಕರು, ಹೆಚ್ಚು ಸಂಖ್ಯೆಯಲ್ಲಿ ಮಹಿಳೆಯರು, ಸಹಕಾರಿ ಇಲಾಖೆ ಮತ್ತು ಸಾರಿಗೆ ಇಲಾಖೆಯ ನಿವೃತ್ತ ನೌಕರದಾರರು ಭಾಗವಹಿಸಿದ್ದರು.

ಕಾರ್ಯಕ್ರಮ ರಮೇಶ್ ಕುಲಕರ್ಣಿ, ಮೌನಪ್ಪ ನಾಯಕ, ವೀರಯ್ಯಸ್ವಾಮಿ, ಮುದಗಲ್ ಬಸಪ್ಪ, ಎಂ. ಹೊನ್ನಪ್ಪ, ಬಸಪ್ಪ ಉಮಲೂಟಿ, ಆಲಮಯ್ಯ, ಶಿವರಾಜ್ ಹಾಗೂ ಸುಭಾನಿ ಇವರ ಮುಂದಾಳತ್ವದಲ್ಲಿ ಯಶಸ್ವಿಯಾಗಿ ನಡೆಯಿತು ಎಂದು ಸಂಘಟಕರಾದ ಶಾಂತಿನಾಥ ಪಾಟೀಲ್ ತಿಳಿಸಿದರು.

Mallikarjun

Share
Published by
Mallikarjun

Recent Posts

ಮೆಂತ್ಯ ಸೊಪ್ಪು

ಮೆಂತ್ಯ ಸೊಪ್ಪು Fenugreek ಮಾರ್ಕೆಟ್ ಇಂದ ಮೆಂತ್ಯ ಸೊಪ್ಪನ್ನು ಜಾಸ್ತಿ ತಂದಾಗ ಅದನ್ನು ಬಿಡಿಸಿ ಚೆನ್ನಾಗಿ ತೊಳೆದು ನಂತರ ಮೆಂತ್ಯ…

8 hours ago

ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ?

ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ? What is the benefit of drinking…

8 hours ago

ಪ್ರಭಾವಿಗಳಿಂದ ಸರ್ಕಾರಿ ಗೋಮಾಳ ಅತಿಕ್ರಮಿಸುವ ಹುನ್ನಾರ – ಗ್ರಾಮಸ್ಥರ ವಿರೋಧ

ಪ್ರಭಾವಿಗಳಿಂದ ಸರ್ಕಾರಿ ಗೋಮಾಳ ಅತಿಕ್ರಮಿಸುವ ಹುನ್ನಾರ - ಗ್ರಾಮಸ್ಥರ ವಿರೋಧ Influential people planning to encroach on government…

9 hours ago

ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಮಾ. 16 ರಂದು ಫ್ರೀಡಂ ಪಾರ್ಕ್‌ ನಲ್ಲಿ ಅಹೋರಾತ್ರಿ ಪ್ರತಿಭಟನೆ

ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಮಾ. 16 ರಂದು ಫ್ರೀಡಂ ಪಾರ್ಕ್‌ ನಲ್ಲಿ…

9 hours ago

ಬಾಲ್ಯ ವಿವಾಹ ತಡೆಗೆ ಎಲ್ಲರ ಪಾತ್ರ ಬಹು ಮುಖ್ಯ- ನ್ಯಾ. ಮಹಾಂತೇಶ ದರಗದ್

ಬಾಲ್ಯ ವಿವಾಹ ತಡೆಗೆ ಎಲ್ಲರ ಪಾತ್ರ ಬಹು ಮುಖ್ಯ- ನ್ಯಾ. ಮಹಾಂತೇಶ ದರಗದ್ Everyone's role is very important…

9 hours ago

ಮಾಹಿತಿ ನೀಡಲು ವಿಳಂಬ ಮಾಡಿದ ಗ್ರಾಪಂ ಅಧಿಕಾರಿಗಳಿಗೆ 50 ಸಾವಿರ- ಬಿ. ವೆಂಕಟಸಿಂಗ್

ಮಾಹಿತಿ ನೀಡಲು ವಿಳಂಬ ಮಾಡಿದ ಗ್ರಾಪಂ ಅಧಿಕಾರಿಗಳಿಗೆ 50 ಸಾವಿರ- ಬಿ. ವೆಂಕಟಸಿಂಗ್ 50 thousand to gram panchayat…

9 hours ago