ಹಿಂದೂ ಮುಸ್ಲಿಂ ಸ್ವಾಮರಸ್ಯ ಸಾರುವ ಹನೂರು ನಾಡ ದೇವತೆ ಬೆಟ್ಟಳ್ಳಿ ಮಾರಮ್ಮನ ಜಾತ್ರೆಗೆ ಸಾರಣೆ

ಹಿಂದೂ ಮುಸ್ಲಿಂ ಸ್ವಾಮರಸ್ಯ ಸಾರುವ ಹನೂರು ನಾಡ ದೇವತೆ ಬೆಟ್ಟಳ್ಳಿ ಮಾರಮ್ಮನ ಜಾತ್ರೆಗೆ ಸಾರಣೆ .‌

Announcement for the Bettalli Maramma fair, a Hindu-Muslim goddess of Hanur Nadu who preaches Hindu-Muslim harmony


ವರದಿ : ಬಂಗಾರಪ್ಪ .ಸಿ .


ಹನೂರು :ಪ್ರತಿ ವರ್ಷದಂತೆ ಈ ವರ್ಷವು ಹನೂರು ಪಟ್ಟಣದ ಗ್ರಾಮ ದೇವತೆಯಾದ ಶ್ರೀ ಬೆಟ್ಟಳ್ಳಿ ಮಾರಮ್ಮ ಜಾತ್ರಾ ಮಹೋತ್ಸವಕ್ಕೆ ಇಂದು ಅಧಿಕೃತವಾಗಿ ಚಾಲನೆ ನೀಡಲಾಗಿದೆ , ಕಳೆದ ನೂರಾರು ವರ್ಷಗಳಿಂದ ಎಲ್ಲಾ ಸಮುದಾಯದವರು ಜಾತ್ರಾ ಮಹೋತ್ಸದ ಯಶಸ್ವಿಗೆ ಎಲ್ಲಾ ರೀತಿಯ ಸಹಕಾರ ನೀಡಿದ್ದಿರ ಮುಂದೆಯು ನೀಡಬೇಕೆಂದು ಪಟ್ಟಣದ ಹಿರಿಯ ಮುಖಂಡರಾದ ಲಿಂಗರಾಜುಗೌಡರು ಸಭೆಯಲ್ಲಿ ಮನವಿ ಮಾಡಿದರು.

ಹನೂರು ಪಟ್ಟಣದ ಶ್ರೀ ಬೆಟ್ಟಳ್ಳಿ ಮಾರಮ್ಮ ದೇವಸ್ಥಾನದ ಆವರಣದಲ್ಲಿ ಶ್ರೀ ಬೆಟ್ಟಳ್ಳಿ ಮಾರಮ್ಮ ದೇವಸ್ಥಾನ ಜಾತ್ರಾ ಮಹೋತ್ಸವ ಸಂಬಂಧ ಕರೆಯಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ ಅವರು ಗ್ರಾಮ ದೇವತೆ ಶ್ರೀ ಬೆಟ್ಟಳ್ಳಿ ಮಾರಮ್ಮ ಜಾತ್ರಾ ಮಹೋತ್ಸವವನ್ನು ಪಟ್ಟಣದಲ್ಲಿರುವ ಪ್ರತಿಯೊಂದು ಸಮುದಾಯದವರು ಬಹಳ ಅಚ್ಚುಕಟ್ಟಾಗಿ ನೆರವೇರಿಸಿ ಹಬ್ಬವನ್ನು ಅತ್ಯಂತ ವಿಜೃಂಭಣೆಯಿಂದ ಆಚರಣೆ ಮಾಡುತ್ತಿದ್ದೇವೆ. ಅದೇ ರೀತಿಯಲ್ಲಿ ಇಂದು ಅಧಿಕೃತವಾಗಿ ಹಬ್ಬಕ್ಕೆ ಚಾಲನೆ ನೀಡುವ ದಿನದಂದು ಎಲ್ಲಾ ಸಮುದಾಯದ ಮುಖಂಡರನ್ನು ಕರೆದು ಹಬ್ಬಕ್ಕೆ ಚಾಲನೆ ನೀಡುವುದು ವಾಡಿಕೆ ಅದರಂತೆ ಎಲ್ಲರ ಅಭಿಪ್ರಾಯದಂತೆ ಈ ವರ್ಷ ಶ್ರೀ ಬೆಟ್ಟಳ್ಳಿ ಮಾರಮ್ಮ ಜಾತ್ರಾ ಮಹೋತ್ಸವವನ್ನು ನಡೆಸಲು ಪ್ರತಿಯೊಬ್ಬರ ಸಹಕಾರವು ನಮಗೆ ಅತ್ಯಗತ್ಯವಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಹಾಜರಿದ್ದ ಆರ್ಯವೈಶ್ಯ ಸಮುದಾಯದ ಮುಖಂಡರಾದ ಜಯಪ್ರಕಾಶ್ ಗುಪ್ತ ಮಾತನಾಡಿ ಪಟ್ಟಣದಲ್ಲಿರುವ ಇತಿಹಾಸ ಪ್ರಸಿದ್ಧ ದೇವಸ್ಥಾನಗಳ ಪೈಕಿ ಪ್ರತಿಯೊಂದು ಸಮುದಾಯದವರು ಒಂದೊಂದು ದೇವಸ್ಥಾನದ ನಿರ್ವಹಣೆ ಮಾಡುತ್ತಿದ್ದಾರೆ ಅದರಂತೆ ಒಕ್ಕಲಿಗ ಸಮುದಾಯದವರು ಶ್ರೀ ಬೆಟ್ಟಳ್ಳಿ ಮಾರಮ್ಮ ದೇವಸ್ಥಾನದ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಪ್ರತಿ ವರ್ಷದ ಜಾತ್ರಾ ಮಹೋತ್ಸವದಲ್ಲಿ ಪ್ರತಿಯೊಬ್ಬ ಸಮುದಾಯದವರು ಪಾಲ್ಗೊಳ್ಳುತ್ತಿದ್ದಾರೆ ಅದರಂತೆ ಈ ಬಾರಿಯೂ ಜಾತ್ರಾ ಮಹೋತ್ಸವಕ್ಕೆ ನಮ್ಮೆಲ್ಲರ ಸಹಕಾರ ಇರುತ್ತದೆ ಎಂದರು.
ನಂತರ
ಮೊದಲಿಯಾರ್ ಸಮಾಜದ ಮುಖಂಡ ನಟರಾಜ್ ಮಾತನಾಡಿ ಹನೂರು ಪಟ್ಟಣದ ಗ್ರಾಮ ದೇವತೆ ಶ್ರೀ ಬೆಟ್ಟಳ್ಳಿ ಮಾರಮ್ಮ ಜಾತ್ರಾ ಮಹೋತ್ಸವವನ್ನು ಆಚರಣೆ ಮಾಡುತ್ತಿದ್ದೇವೆ, ಹಲವಾರು ವರ್ಷಗಳ ಹಿಂದೆ ಒಂದು ಸಮುದಾಯದವರು ಹಬ್ಬಕ್ಕೆ ಚಾಲನೆ ನೀಡಲು ಬಾರದಿದ್ದಾಗ ನಮ್ಮ ತಂದೆಯವರೇ ಹಬ್ಬಕ್ಕೆ ಗ್ರಾಮದಲ್ಲೆಲ್ಲ ಹೋಗಿ ಚಾಲನೆ ನೀಡಿದ್ದರು, ಯಾರೋ ಅವರ ವೈಯಕ್ತಿಕ ಹಿತಾಸಕ್ತಿಗಾಗಿ ಬೇರೆ ಗ್ರಾಮದಲ್ಲಿ ದೇವಸ್ಥಾನ ನಿರ್ಮಾಣ ಮಾಡಿದರೆ ಅಲ್ಲಿ ಹೋಗಿ ಜಾತ್ರೆ ಮಾಡಲು ಸಾಧ್ಯವೇ ನಮ್ಮ ಆಚಾರ ವಿಚಾರ ಸಂಸ್ಕೃತಿಯಂತೆ ನಮ್ಮ ಗ್ರಾಮದಲ್ಲಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸೋಣ ಎಂದರು.
ಮಡಿವಾಳ ಸಮುದಾಯದ ಜಿಲ್ಲಾ ಉಪಾಧ್ಯಕ್ಷರಾದ ಮುಖಂಡ ವಿಜಯ್ ಕುಮಾರ್ ಮಾತನಾಡಿ ಶ್ರೀ ಬೆಟ್ಟಳ್ಳಿ ಮಾರಮ್ಮ ಜಾತ್ರಾ ಮಹೋತ್ಸವದಲ್ಲಿ ನಮ್ಮ ಸಮುದಾಯದವರು ತಮ್ಮ ಸೇವೆಯನ್ನು ಸಲ್ಲಿಸುತ್ತಿದ್ದಾರೆ ಅದರಂತೆ ಈ ಬಾರಿಯ ಜಾತ್ರಾ ಮಹೋತ್ಸವದಲ್ಲೂ ನಮ್ಮ ಸೇವೆಯನ್ನು ಮುಂದುವರಿಸಿ ಜಾತ್ರೆಗೆ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಕುರುಬ ಸಮುದಾಯದ ಮುಖಂಡ ಮಲ್ಲು ಮಾತನಾಡಿ ಪ್ರತಿವರ್ಷದಂತೆ ಈ ವರ್ಷವೂ ನಮ್ಮ ಸಮುದಾಯದ ವತಿಯಿಂದ ಜಾತ್ರಾ ಮಹೋತ್ಸವಕ್ಕೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದರು.

ಉಪ್ಪಾರ ಸಮುದಾಯದ ಮುಖಂಡ ಮುದ್ದುಗಾಮ ಶೆಟ್ಟಿ ಮಾತನಾಡಿ ಹನೂರು ಪಟ್ಟಣದ ಶ್ರೀ ಬೆಟ್ಟಳ್ಳಿ ಮಾರಮ್ಮ ಜಾತ್ರಾ ಮಹೋತ್ಸವವನ್ನು ಆರ್ ಎಸ್ ದೊಡ್ಡಿ ಹಾಗೂ ಹನೂರು ಪಟ್ಟಣದ ಎಲ್ಲಾ ಸಮುದಾಯದವರು ಒಗ್ಗಟ್ಟಾಗಿ ಜಾತ್ರಾ ಮಹೋತ್ಸವವನ್ನು ಆಚರಣೆ ಮಾಡುತ್ತಿದ್ದೇವೆ. ಅದರಂತೆ ಈ ಬಾರಿಯೂ ಯಾವುದೇ ಗೊಂದಲಗಳಿಗೆ ಅವಕಾಶ ಮಾಡಿಕೊಡದೆ ಜಾತ್ರಾ ಮಹೋತ್ಸವವನ್ನು ಆಚರಣೆ ಮಾಡೋಣ ಎಂದು ಸಲಹೆ ನೀಡಿದರು.

ನಂತರ ಎಲ್ಲಾ ಸಮುದಾಯದವರ ಒಮ್ಮತದ ಅಭಿಪ್ರಾಯದಂತೆ ಪಟ್ಟಣದ ಬನ್ನಿಮರ ಬೀದಿಯ ರಂಗಸ್ವಾಮಿ ಎಂಬುವವರು ಶ್ರೀ ಬೆಟ್ಟಳ್ಳಿ ಮಾರಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ಶ್ರೀ ಬೆಟ್ಟಳ್ಳಿ ಮಾರಮ್ಮ ಜಾತ್ರಾ ಮಹೋತ್ಸವಕ್ಕೆ ಅಧಿಕೃತವಾಗಿ ಚಾಲನೆ ನೀಡಿದರು.
ಪೂರ್ವಭಾವಿ
ಸಭೆಯಲ್ಲಿ ಕಮ್ಮವಾರು ಸಮುದಾಯದ ಅಧ್ಯಕ್ಷ ದಿನಮಣಿ ಮುಖಂಡರಾದ ರಮೇಶ್ ನಾಯ್ಡು, ಬಾಲರಾಜ್ ನಾಯ್ಡು, ಬಾಲಸುಂದರ, ಆದಿಜಾಂಬವ ಸಮುದಾಯದ ಯಜಮಾನರಾದ ಮಹದೇವ ಸೋಮಣ್ಣ ಪ್ರದೀಪ್ ಸಚಿನ್, ಮುಸ್ಲಿಂ ಸಮುದಾಯದ ಮುನಾವರ್ ಪಾಷ, ಸಮಿವುಲ್ಲಾ, ಆರ್ಯವೈಶ್ಯ ಸಮುದಾಯದ ರಾಜೇಂದ್ರ ಗುಪ್ತ ಗಾಣಿಗ ಸಮುದಾಯದ ಮುಖಂಡ ಮಣಿ ದೇವಾಂಗ ಸಮುದಾಯದ ಮುಖಂಡರಾದ ರಂಗಸ್ವಾಮಿ ರಾಜು ಬಣಜಿಗ ಸಮುದಾಯದ ತಾಲೂಕು ಅಧ್ಯಕ್ಷ ಪ್ರಸನ್ನ ವೀರಶೈವ ಮುಖಂಡರಾದ ನಂಜುಂಡಸ್ವಾಮಿ ವೀರಭದ್ರ ಮಲ್ಲೇಶ್ ಶಿವಲಿಂಗಪ್ಪ ಕುಮಾರ್ ಮರಾಠ ಸಮುದಾಯದ ಬಾಬು ವಿಶ್ವಕರ್ಮ ಸಮುದಾಯದ ತಮ್ಮಯ್ಯ ಚಾರಿ, ಪುಟ್ಟಸ್ವಾಮಿ ನಾಗಾಚಾರಿ ಮುತ್ತುರಾಜು, ಮಡಿವಾಳ ಸಮುದಾಯದ ಮುಖಂಡರಾದ ರಮೇಶ್ ವಿಜಯ್ ಕುಮಾರ್ ಕೃಷ್ಣಮೂರ್ತಿ ಸವಿತಾ ಸಮಾಜದ ಮುಖಂಡ ರಾಜು, ಉಪ್ಪಾರ ಸಮುದಾಯದ ರಂಗಸ್ವಾಮಿ ಕಾಮಶೆಟ್ಟಿ ಬಸವರಾಜು ಜೈ ರಾಜು ಮಹದೇವ ಶೆಟ್ಟಿ ಕುರುಬ ಸಮುದಾಯದ ಮುಖಂಡರಾದ ಮಲ್ಲು ಅನಂತು ನಾಗಣ್ಣ ನಾಗೇಶ್ ಪುಟ್ಟಸ್ವಾಮಿ ಸೇರಿದಂತೆ ಇನ್ನಿತರರು ಹಾಜರಿದ್ದರು.

Mallikarjun

Share
Published by
Mallikarjun

Recent Posts

ಮೆಂತ್ಯ ಸೊಪ್ಪು

ಮೆಂತ್ಯ ಸೊಪ್ಪು Fenugreek ಮಾರ್ಕೆಟ್ ಇಂದ ಮೆಂತ್ಯ ಸೊಪ್ಪನ್ನು ಜಾಸ್ತಿ ತಂದಾಗ ಅದನ್ನು ಬಿಡಿಸಿ ಚೆನ್ನಾಗಿ ತೊಳೆದು ನಂತರ ಮೆಂತ್ಯ…

9 hours ago

ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ?

ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ? What is the benefit of drinking…

9 hours ago

ಪ್ರಭಾವಿಗಳಿಂದ ಸರ್ಕಾರಿ ಗೋಮಾಳ ಅತಿಕ್ರಮಿಸುವ ಹುನ್ನಾರ – ಗ್ರಾಮಸ್ಥರ ವಿರೋಧ

ಪ್ರಭಾವಿಗಳಿಂದ ಸರ್ಕಾರಿ ಗೋಮಾಳ ಅತಿಕ್ರಮಿಸುವ ಹುನ್ನಾರ - ಗ್ರಾಮಸ್ಥರ ವಿರೋಧ Influential people planning to encroach on government…

9 hours ago

ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಮಾ. 16 ರಂದು ಫ್ರೀಡಂ ಪಾರ್ಕ್‌ ನಲ್ಲಿ ಅಹೋರಾತ್ರಿ ಪ್ರತಿಭಟನೆ

ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಮಾ. 16 ರಂದು ಫ್ರೀಡಂ ಪಾರ್ಕ್‌ ನಲ್ಲಿ…

9 hours ago

ಬಾಲ್ಯ ವಿವಾಹ ತಡೆಗೆ ಎಲ್ಲರ ಪಾತ್ರ ಬಹು ಮುಖ್ಯ- ನ್ಯಾ. ಮಹಾಂತೇಶ ದರಗದ್

ಬಾಲ್ಯ ವಿವಾಹ ತಡೆಗೆ ಎಲ್ಲರ ಪಾತ್ರ ಬಹು ಮುಖ್ಯ- ನ್ಯಾ. ಮಹಾಂತೇಶ ದರಗದ್ Everyone's role is very important…

10 hours ago

ಮಾಹಿತಿ ನೀಡಲು ವಿಳಂಬ ಮಾಡಿದ ಗ್ರಾಪಂ ಅಧಿಕಾರಿಗಳಿಗೆ 50 ಸಾವಿರ- ಬಿ. ವೆಂಕಟಸಿಂಗ್

ಮಾಹಿತಿ ನೀಡಲು ವಿಳಂಬ ಮಾಡಿದ ಗ್ರಾಪಂ ಅಧಿಕಾರಿಗಳಿಗೆ 50 ಸಾವಿರ- ಬಿ. ವೆಂಕಟಸಿಂಗ್ 50 thousand to gram panchayat…

10 hours ago