ವಿದೇಶಿ ಮಹಿಳೆ ಮೇಲೆ ಅತ್ಯಾಚಾರ. ಅತ್ಯಾಚಾರಿಗಳಿಗೆ ಮರಣ ದಂಡನೆ ತೀರ್ಪು.
Rape of a foreign woman. Death sentence for the rapists.
ಗಂಗಾವತಿ, ಫೆ.16: ಇಸ್ರೇಲಿಯನ್ ಸೇರಿದಂತೆ ಇಬ್ಬರು ಮಹಿಳೆಯರ ಮೇಲೆ ಅತ್ಯಾಚಾರ ಹಾಗೂ ಒಬ್ಬ ಪ್ರವಾಸಿಗನ ಕೊಲೆ ಪ್ರಕರಣದಲ್ಲಿ ಮೂವರು ಆರೋಪಿಗಳಿಗೆ ಇಲ್ಲಿನ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯ ಮರಣ ದಂಡನೆ ಶಿಕ್ಷೆ ವಿಧಿಸಿ ಐತಿಹಾಸಿಕ ತೀರ್ಪು ನೀಡಿದೆ.
ಕಿಕ್ಕಿರಿದು ತುಂಬಿದ್ದ ನ್ಯಾಯಾಲಯದಲ್ಲಿ ಮಧ್ಯಾಹ್ನ 3.10 ನಿಮಿಷಕ್ಕೆ ಆದೇಶದ ಪ್ರತಿ ಓದಿದ ನ್ಯಾಯಾಧೀಶ ಸದಾನಂದ ನಾಗಪ್ಪ ನಾಯ್ಕ ಅವರು ಪ್ರಕರಣದಲ್ಲಿನ ಮೂವರು ಆರೋಪಿಗಳಿಗೆ ಮರಣ ದಂಡನೆ ವಿಧಿಸಿ ತೀರ್ಪು ನೀಡಿದರು.
ನ್ಯಾಯಾಲಯದ ಕಟಕಟೆಯಲ್ಲಿ ನ್ಯಾಯಾಧೀಶರ ಮುಂದೆ ಕೈ ಮುಗಿದು ನಿಂತಿದ್ದ ಆರೋಪಿಗಳು, ನ್ಯಾಯಾಧೀಶರಿಂದ ಆದೇಶ ಹೊರ ಬರುತ್ತಿದ್ದಂತೆಯೆ ಬಿಕ್ಕಳಿಸಿ, ಬಿಕ್ಕಳಿಸಿ ಅತ್ತರು. ಸುಮಾರು ಎಂಟು ನಿಮಿಷಗಳ ಕಾಲ ಆದೇಶದ ತೀರ್ಪಿನ ಬಳಿಕ ನ್ಯಾಯಾಧೀಶರು ಅಪಾಧಿತರಿಗೆ ಹೈಕೋರ್ಟಿನ ಮೊರೆ ಹೋಗಲು ಸೂಚನೆ ನೀಡಿದರು.
ಇಸ್ರೇಲ್ ದೇಶದ ಮಹಿಳೆ ಸೇರಿದಂತೆ ಸ್ಥಳೀಯ ಮತ್ತೊಬ್ಬ ಮಹಿಳೆ ಮೇಲೆ ಅತ್ಯಾಚಾರ, ಅಮೆರಿಕಾದ ಒಬ್ಬ ಪ್ರವಾಸಿಗ, ಓರಿಸ್ಸಾ ಮತ್ತು ಮಹಾರಾಷ್ಟ್ರದ ತಲಾ ಒಬ್ಬ ಪ್ರವಾಸಿಗರನ್ನು ತುಂಗಭದ್ರಾ ಎಡದಂಡ ನಾಲೆಗೆ ತಳ್ಳಿ ಕೊಲೆ ಯತ್ನಿಸಿದ ಪ್ರಕರಣದಲ್ಲಿ ಒಬ್ಬನ ಕೊಲೆಯ ಘಟನೆಗೆ ಸಂಬಂಧಿಸಿದಂತೆ ನ್ಯಾಯಾಧೀಶ ತೀರ್ಪು ನೀಡಿದರು.
ಅತ್ಯಾಚಾರ, ದರೋಡೆ, ಕೊಲೆ, ಸಂಚು, ಹಲ್ಲೆ, ದೌರ್ಜನ್ಯ ಸೇರಿದಂತೆ ಇತರ ಅಂಶಗಳನ್ನು ಪ್ರಕರಣದಲ್ಲಿ ಮನಗಂಡ ನ್ಯಾಯಾಧೀಶರು, ಒಂದು ಪ್ರಕರಣದಲ್ಲಿ ಮರಣ ದಂಡನೆ (ಬಿಎನ್‌ಎಸ್-301) ಉಳಿದ ಐದು ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ನೀಡಿದರು. ಪ್ರಕರಣದಲ್ಲಿನ ಆರೋಪಿಗಳಾದ ಸಂಗಾಪುರ ಸಾಯಿನಗರದ ಗೌಂಡಿ ಕಾರ್ಮಿಕ ಮಲ್ಲೇಶ, ಅಲಿಯಾಸ್ ಹಂದಿ ಮಲ್ಲ, ಅಯ್ಯಪ್ಪ ದಾಸರ, ಮೇಷನ್ ಕೆಲಸಗಾರ ಚೇತನ್ ಸಾಯಿ ಕಾಮೇಶ್ವರರಾವ್, ಶರಣಪ್ಪ ಅಲಿಯಾಸ್ ಶರಣ ಬಸವರಾಜ್ ಎಂಬ ಅಪಾಧಿತರಿಗೆ ಮರಣ ದಂಡನೆ ವಿಧಿಸಲಾಗಿದೆ.
ಮೆಂತ್ಯ ಸೊಪ್ಪು Fenugreek ಮಾರ್ಕೆಟ್ ಇಂದ ಮೆಂತ್ಯ ಸೊಪ್ಪನ್ನು ಜಾಸ್ತಿ ತಂದಾಗ ಅದನ್ನು ಬಿಡಿಸಿ ಚೆನ್ನಾಗಿ ತೊಳೆದು ನಂತರ ಮೆಂತ್ಯ…
ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ? What is the benefit of drinking…
ಪ್ರಭಾವಿಗಳಿಂದ ಸರ್ಕಾರಿ ಗೋಮಾಳ ಅತಿಕ್ರಮಿಸುವ ಹುನ್ನಾರ - ಗ್ರಾಮಸ್ಥರ ವಿರೋಧ Influential people planning to encroach on government…
ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಮಾ. 16 ರಂದು ಫ್ರೀಡಂ ಪಾರ್ಕ್ ನಲ್ಲಿ…
ಬಾಲ್ಯ ವಿವಾಹ ತಡೆಗೆ ಎಲ್ಲರ ಪಾತ್ರ ಬಹು ಮುಖ್ಯ- ನ್ಯಾ. ಮಹಾಂತೇಶ ದರಗದ್ Everyone's role is very important…
ಮಾಹಿತಿ ನೀಡಲು ವಿಳಂಬ ಮಾಡಿದ ಗ್ರಾಪಂ ಅಧಿಕಾರಿಗಳಿಗೆ 50 ಸಾವಿರ- ಬಿ. ವೆಂಕಟಸಿಂಗ್ 50 thousand to gram panchayat…