ಗುಂಡಮ್ಮ ಕ್ಯಾಂಪ್ ಸರ್ಕಾರಿ ಕಿರಿಯ ಪ್ರಾರ್ಥಮಿಕ ಶಾಲೆಗೆ ಮಕ್ಕಳ ಸಂಖೆ ಹೆಚ್ಚಿಸಲು ಮಾರ್ಚ್ 9 ರಂದು ತಾಯಂದಿರ ಸಭೆ

Mothers' meeting on March 9th to increase the number of children at Gundamma Camp Government Junior Primary School

ಗುಂಡಮ್ಮ ಕ್ಯಾಂಪ್ ಸರ್ಕಾರಿ ಕಿರಿಯ ಪ್ರಾರ್ಥಮಿಕ ಶಾಲೆಗೆ ಮಕ್ಕಳ ಸಂಖೆ ಹೆಚ್ಚಿಸಲು ಮಾರ್ಚ್ 9 ರಂದು ತಾಯಂದಿರ ಸಭೆ

 

ಗಂಗಾವತಿ:ದಿ,16-2-2026 ಸೋಮವಾರ ಗುಂಡಮ್ಮ ಕ್ಯಾಂಪ್ ಸರ್ಕಾರಿ ಕಿರಿಯ ಪ್ರಾರ್ಥಮಿಕ ಶಾಲೆಯಲ್ಲಿ ಗುಂಡಮ್ಮ ಕ್ಯಾಂಪ್ ವಾರ್ಡ್ ಮುಖಂಡರು ಗಳು ಮತ್ತು ಶಾಲಾ ಶಿಕ್ಷಕರ ನೇತೃತ್ವದಲ್ಲಿ ಶಾಲಾ ಅಭಿವೃದ್ಧಿ  ಎರಡನೆಯ  ಸಭೆ ಜರುಗಿತು.

ಈ ಸಭೆಯಲ್ಲಿ   ಹಿಂದಿನ ಸಭೆಯಲ್ಲಿ  ಮಕ್ಕಳಿಗೆ ಕುಡಿಯುವ ನೀರು, ಶಾಲಾ ಗೇಟ್ ಮುಂದೆ  ಚರಂಡಿ ದುರಸ್ತಿ ನಗೆಸಭೆಯವರ ಸಹಕಾರದಿಂದ ಕಾಮಗಾರಿ ಪ್ರಗತಿಯಲ್ಲಿದೆ.   ಇಂದಿನ ಸಭೆಯಲ್ಲಿ   ಶಾಲೆಗೆ ಮಕ್ಕಳ ಸಂಖ್ಯೆ ಗಣನೀಯವಾಗಿ ಕಡಿಮೆ ಅಗಿರುದರ ಬಗ್ಗೆ   ಮತ್ತು ಶೌಚಾಲಯ, ಆಟದ ಮೈದಾನ ಸ್ವಚ್ಚವಾಗಿಡಲು ,ಮೇತಿಂಗಳಿನಿಂದ ಮನೆ ಮನೆಗೆ ತೆರಳಿ ಪಾಲಕರಿಗೆ ಶಾಲೆಯ ಮಾಹಿತಿ ನೀಡಿ ಮಕ್ಕಳ ಸಂಖ್ಯೆ ಹೆಚ್ಚಿಸಲು ಪ್ರಯತ್ನ ಪಡಬೇಕು ಎಂಬುದರ ಬಗ್ಗೆ ಪುನಃ ಚರ್ಚಿಸಲಾಯಿತು.

ಈ ಸಭೆಯಲ್ಲಿ ಎಂಟು ಅಂಗ ವಾಡಿ ಶಿಕ್ಷಕಿಯರು ಸಲಹೆಗಳನ್ನು  ನೀಡಿದರು.ಈಸಲಹೆಗಳನ್ನು ಗಮನದಲ್ಲಿ ಇಟ್ಟುಕೊಂಡು ಶಾಲೆ ಅಭಿವೃದ್ದಿಗ ಸಹಕಾರಿಯಾಗಲಿದೆ ಎಂದು ತೀರ್ಮಾನಿಸಲಾಯಿತು.

ಮುಂದಿನ ಸಭೆ ದಿ,9-3-2026 ರಂದು ತಾಯಂದಿರ ಸಭೆ   ಕರೆಯಲು ತೀರ್ಮಾನಿಸಿ ಸಭೆ ಮುಂದೂಡಲಾಯಿತು.

ಶಾಲೆಯ ಮುಖ್ಯ ಗುರುಗಳಾದ ಶ್ರೀ ನಿವಾಸ್  ಶಿಕ್ಷಕರಾದ ಪ್ರಕಾಶ ಅವರುಗಳು ಸಭೆಗೆ ಆಗಮಿಸಿದ ಎಲ್ಲರಿಗೂ  ಧನ್ಯವಾದಹೇಳಿದರು.

ಈ ಸಭೆಯಲ್ಲಿ ಗ್ಯಾರಂಟಿ ಯೋಜನಯ ಸದಸ್ಯರಾದ ಕೆ ಸನ್ನಿಕ್, ಇಜಾಪ್, ಪತ್ರಕರ್ತ ಎಂ. ಕೆ. ಉಲ್ಲಾಸ, ಆಸಿಪ್. ಹುಸೇನ್  ಸಾಬ್,ಮೌಲಾಹುಸೇನ್,  ಅಬ್ಬಾಸ್ ,ಇಜಾಜ್,  ಮೌಲಾಸಾಬ್ , ಬೀಟ್ ಕಾನ್ಸ್‌ಟೇಬಲ್ ಯಮನೂರಪ್ಪ ಕುಂಬಾರ , ಪತ್ರಕರ್ತ. ಹೆಚ್.ಮಲ್ಲಿಕಾರ್ಜುನ ಹೊಸಕೇರಾ , ಅಂಗನವಾಡಿ ಶಿಕ್ಷಕಿಯರಾದ   ಪಾತಿಮಾಬೇಗಮ್,  ಮಮತಾಜ್ ಬೇಗಮ್, ಕುಮಾರಿ ಮೇಘನ,ವಿಜಯಲಕ್ಷ್ಮಿ, ಶಾನು ಬೇಗಮ್,ರೇಣುಕಾ .ವಿ ಇತರರು ಭಾಗವಹಿದಿದ್ದರು

      

Mallikarjun

Share
Published by
Mallikarjun

Recent Posts

ಮೆಂತ್ಯ ಸೊಪ್ಪು

ಮೆಂತ್ಯ ಸೊಪ್ಪು Fenugreek ಮಾರ್ಕೆಟ್ ಇಂದ ಮೆಂತ್ಯ ಸೊಪ್ಪನ್ನು ಜಾಸ್ತಿ ತಂದಾಗ ಅದನ್ನು ಬಿಡಿಸಿ ಚೆನ್ನಾಗಿ ತೊಳೆದು ನಂತರ ಮೆಂತ್ಯ…

7 hours ago

ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ?

ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ? What is the benefit of drinking…

7 hours ago

ಪ್ರಭಾವಿಗಳಿಂದ ಸರ್ಕಾರಿ ಗೋಮಾಳ ಅತಿಕ್ರಮಿಸುವ ಹುನ್ನಾರ – ಗ್ರಾಮಸ್ಥರ ವಿರೋಧ

ಪ್ರಭಾವಿಗಳಿಂದ ಸರ್ಕಾರಿ ಗೋಮಾಳ ಅತಿಕ್ರಮಿಸುವ ಹುನ್ನಾರ - ಗ್ರಾಮಸ್ಥರ ವಿರೋಧ Influential people planning to encroach on government…

7 hours ago

ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಮಾ. 16 ರಂದು ಫ್ರೀಡಂ ಪಾರ್ಕ್‌ ನಲ್ಲಿ ಅಹೋರಾತ್ರಿ ಪ್ರತಿಭಟನೆ

ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಮಾ. 16 ರಂದು ಫ್ರೀಡಂ ಪಾರ್ಕ್‌ ನಲ್ಲಿ…

7 hours ago

ಬಾಲ್ಯ ವಿವಾಹ ತಡೆಗೆ ಎಲ್ಲರ ಪಾತ್ರ ಬಹು ಮುಖ್ಯ- ನ್ಯಾ. ಮಹಾಂತೇಶ ದರಗದ್

ಬಾಲ್ಯ ವಿವಾಹ ತಡೆಗೆ ಎಲ್ಲರ ಪಾತ್ರ ಬಹು ಮುಖ್ಯ- ನ್ಯಾ. ಮಹಾಂತೇಶ ದರಗದ್ Everyone's role is very important…

7 hours ago

ಮಾಹಿತಿ ನೀಡಲು ವಿಳಂಬ ಮಾಡಿದ ಗ್ರಾಪಂ ಅಧಿಕಾರಿಗಳಿಗೆ 50 ಸಾವಿರ- ಬಿ. ವೆಂಕಟಸಿಂಗ್

ಮಾಹಿತಿ ನೀಡಲು ವಿಳಂಬ ಮಾಡಿದ ಗ್ರಾಪಂ ಅಧಿಕಾರಿಗಳಿಗೆ 50 ಸಾವಿರ- ಬಿ. ವೆಂಕಟಸಿಂಗ್ 50 thousand to gram panchayat…

8 hours ago