ಸಂತ ಸೇವಾಲಾಲ ಜಯಂತಿ ಸ್ವಾಭಿಮಾನ ಕಲಿಸಿದ ಸಂತ,ಶಂಕರ್ ನಾಯ್ಕ್
Sant Sewalal Jayanti: The saint who taught self-respect, Shankar Naik
ಗಂಗಾವತಿ.15 ಸಮೀಪದ ಸೂರ್ಯನಾಯಕ ತಾಂಡದಲ್ಲಿ ಭಾನುವಾರ ಪ್ರತಿವರ್ಷದಂತೆ ಗ್ರಾಮದಲ್ಲಿ ಸಂತ ಸೇವಾಲಾಲ 287ನೇ ಜಯಂತಿಯನ್ನು ಆಚರಿಸಲಾಯಿತು,
ಮೆರವಣಿಗೆ ಚಾಲನೆ ನೀಡಿಮಾತನಾಡಿದ ಸಮಾಜದ ಹಿರಿಯ ಮುಖಂಡರು, ಮಾಜಿ ಗ್ರಾಮ ಪಂಚಾಯತಿ ಸದಸ್ಯರಾದ ಶಂಕರ್ ನಾಯ್ಕ ಸಮುದಾಯದ ಸಾಂಸ್ಕೃತಿಕ ನಾಯಕ ಸಂತ ಸೇವಾಲಾಲರು, ಭೀಮ ನಾಯ್ಕ್ ಮತ್ತು ಧರ್ಮಿಣಿ ಯಾಡಿ ದಂಪತಿಯ ಮೂರನೇ ಮಗ. ಕರ್ನಾಟಕದ ಸೂರಗೊಂಡನಕೊಪ್ಪದಲ್ಲಿ ರಾಮವತ್ ಎನ್ನುವ ಬುಕ್ಯಾ ಬೆಡಗದಲ್ಲಿ 1739ರ ಫೆಬ್ರುವರಿ 15ರಂದು ಜನಿಸಿದರು. ಶಿರಸಿಯ ಮಾರಿಕಾಂಬ ದೇವಿಯ ಕೃಪಾಕಟಾಕ್ಷಕ್ಕೆ ಒಳಗಾಗಿ ಸಂತನಾದರು. ಬಾಲ್ಯದಿಂದಲೂ ಸಂತ ಪರಂಪರೆಯ ಕಡೆಗೆ ಒಲವನ್ನು ಹೊಂದಿದ ಸೇವಾಲಾಲರು, ತಮ್ಮ ಪವಾಡಗಳಿಂದ ಸೇವಾ ‘ಭಾಯ’ (ಅಣ್ಣ) ಆದರು. ಹೆಂಗಸರು, ಗಂಡಸರು ‘ಭಾಯ’ ಎನ್ನುವುದರಿಂದಾಗಿ ಆಜನ್ಮ ಬ್ರಹ್ಮಚಾರಿಯಾಗಿಯೇ ಉಳಿದು ಬಿಟ್ಟರು. ಸಮುದಾಯದವರು ಅಂದು ಬದುಕಿದ್ದ ಸ್ಥಿತಿಯನ್ನು
ಕಂಡು ಅವರ ಬದುಕಿಗೆ ಒತ್ತಾಸೆಯಾಗಿ ನಿಂತು ದುಡಿಮೆ, ಜ್ಞಾನಾರ್ಜನೆ, ಸ್ವಾಭಿಮಾನ, ಸ್ವಾವಲಂಬನೆ ಕುರಿತು ಅರಿವು ಮೂಡಿಸಿದ್ದರು ಎಂದು ಹೇಳಿದರು,
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯೆ ಗೌರಮ್ಮ ಶಂಕರ್ ನಾಯ್ಕ, ಸಮಾಜದ ಮುಖಂಡರಾದ ಹನುಮಂತಪ್ಪ ಕಟ್ಟಿಮನಿ,ಪೂಜಾರಿ ಹನುಮಂತಪ್ಪ, ಸಂಕ್ರಪ್ಪ ಕೆ,ಶಂಕ್ರಪ್ಪ, ಯಮನೂರ,ಶಿವಪ್ಪ,ಪಂಪಾಪತಿ,ಕುಮಾರ,ಮಂಜುನಾಥ,ಶಿವು,ಮಹಿಳಾ ಮುಖಂಡರಾದ ಪಾರಮ್ಮ ಕಟ್ಟಿಮನಿ,ಲಾಲಮ್ಮ,ಶಾಂತಮ್ಮ,ಗುಂಡಮ್ಮ ಹಾಗೂ ಗ್ರಾಮದ ಮುದ್ದು ಮಕ್ಕಳು ಸೇರಿದಂತೆ ಇತರರು ಇದ್ದರು
Cancel my account and give me all the money in my account. ನನ್ನ ಅಕೌಂಟನ್ನು ಕ್ಯಾನ್ಸಲ್…
ತಂದೆಯ ಋಣ ತೀರಿಸಲು ..ಎಷ್ಟೇ ಜನ್ಮ ಹುಟ್ಟಿ ಬಂದರೂ ಸಾಧ್ಯವಿಲ್ಲ No matter how many births you take,…
Devotee's iPhone fell into his pocket! Alas, it ended after falling into his pocket. ಹುಂಡಿಗೆ…
ಮೆಂತ್ಯ ಸೊಪ್ಪು Fenugreek ಮಾರ್ಕೆಟ್ ಇಂದ ಮೆಂತ್ಯ ಸೊಪ್ಪನ್ನು ಜಾಸ್ತಿ ತಂದಾಗ ಅದನ್ನು ಬಿಡಿಸಿ ಚೆನ್ನಾಗಿ ತೊಳೆದು ನಂತರ ಮೆಂತ್ಯ…
ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ? What is the benefit of drinking…
ಪ್ರಭಾವಿಗಳಿಂದ ಸರ್ಕಾರಿ ಗೋಮಾಳ ಅತಿಕ್ರಮಿಸುವ ಹುನ್ನಾರ - ಗ್ರಾಮಸ್ಥರ ವಿರೋಧ Influential people planning to encroach on government…