ತೋಟದ ಮನೆಗೆ ನುಗ್ಗಿದ್ದ ಚಿರತೆ ದಾಳಿಗೆ ಮೂರು ಮೇಕೆಗಳು ಬಲಿ
Three goats killed in leopard attack on farmhouse
ವರದಿ:ಬಂಗಾರಪ್ಪ .ಸಿ.
ಹನೂರು:ಇತ್ತೀಚಿನ ದಿನಗಳಲ್ಲಿ ಚಿರತೆಗಳ ಹಾವಳಿಗೆ ಹನೂರು ಕ್ಷೇತ್ರದ ಜನತೆ ಸಾಮನ್ಯವಾಗಿ ತಿರುಗಾಡಲು ಭಯಪಟ್ಟು ಬೆಚ್ಚಿಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ರೈತ ಸಂಘದ ಅಧ್ಯಕ್ಷರಾದ ಅಮ್ಜಾದ್ ಖಾನ್ ರವರು ತಿಳಿಸಿದರು.
ಹನೂರು ಪಟ್ಟಣದ ಸಿದ್ದೆಗೌಡ ಎಂಬುವವರ ಮಾಹಾಲಿಂಗನ ಕಟ್ಟೆ ಗ್ರಾಮದ ಜಮೀನಿನ ತೋಟದ ಮನೆಯಲ್ಲಿ ಶುಕ್ರವಾರ ಬೆಳಗ್ಗೆ ಜಾವ ಸುಮಾರು 5 ಗಂಟೆಯ ಸಮಯದಲ್ಲಿ ಚಿರತೆಯು ಎಂಟು ಮೇಕೆಗಳಿದ್ದ ತೋಟದ ಮನೆಗೆ ದಿಡಿರ್ ದಾಳಿ ಮಾಡಿದ್ದು ಸ್ಥಳದಲ್ಲಿದ್ದ ಮೇಕೆಗಳ ಪೈಕಿರ ಮೂರರ ಮೇಲೆ ದಾಳಿ ಮಾಡಿ ಬಲಿಪಡೆದಿರುವ ಘಟನೆ ಜರುಗಿದೆ.
ಬಲಿಯಾದ ಮೂರು ಮೇಕೆಗಳಿಂದ ಮಾಲೀಕರಿಗೆ ಸುಮಾರು 50,000 ಸಾವಿರ ರೂಪಾಯಿಗಳಷ್ಟು ನಷ್ಟವಾಗಿದೆ ಎಂದು ತಿಳಿದುಬಂದಿದೆ .
ಚಿರತೆ ದಾಳಿಗೆಯಿಂದ ಭಯ ಬೀತರಾದ ಸಾರ್ವಜನಿಕರು ತಾವು ವಾಸಿಸುವ ಸುತ್ತಮುತ್ತಲಿನ ಪ್ರದೇಶಗಳಲ್ಲಿ ತೋಟದ ಮನೆಯಲ್ಲಿ ವಾಸವಿರುವವರು ಸೇರಿದಂತೆ ಇನ್ನಿತರರು ಆತಂಕ ಪಡುವ ಸ್ತಿತಿ ನಿರ್ಮಾಣವಾಗಿದ್ದು ಎಲ್ಲಾರು ಭಯಭೀತರಾಗಿದ್ದಾರೆ. ಆದ್ದರಿಂದ ಆದಷ್ಟು ಬೇಗ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆಯನ್ನು ಸೆರೆ ಹಿಡಿಯುವಂತೆ ಹಾಗೂ ಇದೇ ಪರಿಸ್ಥಿತಿಯನ್ನು ಅಧಿಕಾರಿಗಳು ಮುಂದುವರಿಸಿದರೆ ಮುಂದಿನ ದಿನಗಳಲ್ಲಿ ಉಗ್ರಹೋರಾಟ ಮಾಡಲಾಗುವುದು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಮೆಂತ್ಯ ಸೊಪ್ಪು Fenugreek ಮಾರ್ಕೆಟ್ ಇಂದ ಮೆಂತ್ಯ ಸೊಪ್ಪನ್ನು ಜಾಸ್ತಿ ತಂದಾಗ ಅದನ್ನು ಬಿಡಿಸಿ ಚೆನ್ನಾಗಿ ತೊಳೆದು ನಂತರ ಮೆಂತ್ಯ…
ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ? What is the benefit of drinking…
ಪ್ರಭಾವಿಗಳಿಂದ ಸರ್ಕಾರಿ ಗೋಮಾಳ ಅತಿಕ್ರಮಿಸುವ ಹುನ್ನಾರ - ಗ್ರಾಮಸ್ಥರ ವಿರೋಧ Influential people planning to encroach on government…
ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಮಾ. 16 ರಂದು ಫ್ರೀಡಂ ಪಾರ್ಕ್ ನಲ್ಲಿ…
ಬಾಲ್ಯ ವಿವಾಹ ತಡೆಗೆ ಎಲ್ಲರ ಪಾತ್ರ ಬಹು ಮುಖ್ಯ- ನ್ಯಾ. ಮಹಾಂತೇಶ ದರಗದ್ Everyone's role is very important…
ಮಾಹಿತಿ ನೀಡಲು ವಿಳಂಬ ಮಾಡಿದ ಗ್ರಾಪಂ ಅಧಿಕಾರಿಗಳಿಗೆ 50 ಸಾವಿರ- ಬಿ. ವೆಂಕಟಸಿಂಗ್ 50 thousand to gram panchayat…