ಶಿವರಾತ್ರಿಯಂದು ಗಂಗಾವತಿ ರಾಷ್ಟ್ರೀಯ ಬಸವದಳದವರಿಂದ ಗಣಮೇಳ ಕಾರ್ಯಕ್ರಮ

ಶಿವರಾತ್ರಿಯಂದು ಗಂಗಾವತಿ ರಾಷ್ಟ್ರೀಯ ಬಸವದಳದವರಿಂದ ಗಣಮೇಳ ಕಾರ್ಯಕ್ರಮ

Ganamela program by Gangavati Rashtriya Basava Dal on Shivaratri

ಗಂಗಾವತಿ: ಪ್ರತಿ ವರ್ಷದಂತೆ ಈ ವರ್ಷ ಶಿವರಾತ್ರಿ ಯಂದು  ನಗರದ ಸರೋಜಾ ನಗರದಲ್ಲಿರುವ  ಬಸವ ಮಂಟಪದಲ್ಲಿ ದಿ, 15-2-2026 ರವಿವಾರದಂದು ಬೆಳಗ್ಗೆ 11 ಗಂಟೆಗೆ ಶರಣ ಗಣ ಮೇಳ” ಸಮಾವೇಶ ಜರುಗಲಿದೆ.

ಪಾಷಂಡಿ ಭೂಮಿಯೊಳು ಶಿವಭಕ್ತಿಯನಾರಂಭಿಸಿ ಸಾಮರ್ಥ್ಯದುಂ ಬಿತ್ತಿ ಪ್ರತ್ಯಕ್ಷಂಗಳಂ ಬೆಳೆದು ಗಣಪರ್ವಗಳು ಸುಫಲಂ ಮಾಡಲೆಂದು ಬಂದ ಕಾರಣಿಕ ಬಸವಾ ನಿನ್ನ ದೆಸೆಯಿಂದು ಭಕ್ತಿ ಬಣ್ಣವೇರಿತು

ಮಹಾಮಾನವತಾದಿ, ಮಂತ್ರಪುರುಷ, ಧರ್ಮಗುರು ಬಸವಣ್ಣನವರ ತತ್ವಗಳಲ್ಲಿ ಶ್ರದ್ಧೆ ವಿಶ್ವಾಸವಿರುವ ಬಸವ ಧರ್ಮಿಯರು ಬಸವತತ್ವ ಅಭಿಮಾನಿಗಳು ಒಂದಡೆ ಸೇರುವದು ಅವಶ್ಯವಾಗಿದೆ. ಧರ್ಮಗುರು ಇಷ್ಟಲಿಂಗ ಜನಕ ಅಪ್ಪ, ಬಸವಣ್ಣನವರು ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸಿ ಸುಸಂಬದ್ದವಾಗಿ ರೂಪಿಸಿಕೊಟ್ಟ ಬಸವ ಧರ್ಮ (ಲಿಂಗಾಯತ) ದಲ್ಲಿ ಯಾವುದೋ ಸ್ವಾರ್ಥ ಆಶಯದ ಪೂರ್ತಿಗಾಗಿ ಶತಶತಮಾನಗಳಿಂದ ಈ ಧರ್ಮಕ್ಕೆ ಸಲ್ಲದ, ಬಸವಾದಿ ಶರಣರು ದೂರೀಕರಿಸಿದ ಆಚರಣೆಗಳನ್ನು ಜನಮನದಲ್ಲಿ ನೆಲೆಗೊಳಿಸುತ್ತ ಬರಲಾಗಿದೆ. ಬಸವ ಧರ್ಮವನ್ನು ಅಂದಗೆಡಿಸಿರುವ ಈ ಆಚರಣೆಗಳನ್ನು ತಿರಸ್ಕರಿಸಿ, ಬಸವಾದಿ ಶರಣರ ಆಶಯದ ತತ್ರಗಳ ಬಗೆಗೆ ಆತ್ಮಾವಲೋಕನ ಮಾಡಿಕೊಳ್ಳುವ ಸಂಧರ್ಭವೇ ಈ ಶರಣ ಗಣ ಮೇಳದ ಉದ್ದೇಶ

ಗಣವೆಂದರೆ ಸಮಾಜ, ಸಮೂಹ ಧರ್ಮಪಿತ ಬಸವಣ್ಣನವರು ಗಣಧರ್ಮಗಳನ್ನು ಸ್ಥಾಪಿಸಿದರು ಕುಟುಂಬ, ಜಾತಿ, ಕುಲ ವರ್ಣಗಳ ಸೀಮೆ ದಾಟಿದ ಗುಣಧರ್ಮದ ಪರಿಕಲ್ಪನೆಯನ್ನು ಕೊಟ್ಟರು. ಈ ಗಣ ಮೇಳವು ಸಮಾನತೆಯ, ಧಾರ್ಮಿಕ ಸಹೋದರತ್ವ ಸಹಬಾಳ್ವೆಯ ಪ್ರತೀಕವಾಗಿದೆ.

ಸ್ಥಾವರದ ಪೂಜೆಯನ್ನು ನಿಷೇದಿಸಿ, ಶೋಷಕ ಸಾಧನವಾದ ಪೌರೋಹಿತ್ಯದ ಸೋಂಟ ಮುರಿದಿದ್ದು ಬಸವಣ್ಣ ಭಾರತಕ್ಕೆ ಮಾತ್ರವಲ್ಲ ಇಡೀ ಜಗತ್ತಿಗೆ ತೋರಿಸಿದ ಕ್ರಾಂತಿಮಾರ್ಗ, ಎಲ್ಲೆಲ್ಲಿ ಪೌರೋಹಿತ್ಯವು ಜನರ ಅಜ್ಞಾನ, ದಾರಿದ್ರಗಳನ್ನು ಬಂಡವಾಳ ಮಾಡಿಕೊಂಡು ವಿಜೃಂಭಿಸುತ್ತಿದೆಯೋ ಅಲ್ಲಲಿಲ್ಯ ಜನಕ್ಕೆ, ಅಲ್ಲಲಿಯ ಮತ ಸುಧಾರಣಾಕಾಂಕ್ಷಿಗಳಿಗೆ ಬಸವಣ್ಣನವರ ಆದರ್ಶ ತತ್ರಗಳು ದಾರಿದೀಪವಾಗುತ್ತವೆ. ಬಸವಣ್ಣನವರ ಹಾಗೆ ಜಾತೀಯತೆಯ ಮೇಲು ಕೀಳುಗಳ ಬಗೆಗೆ ಕುದಿದವರು, ಲೊಂದವರು, ಬೆಂದವರು, ಕಂಬನಿಗರೆದವರು ಮತ್ತೊಬ್ಬರಿಲ್ಲ. ಸೋದರತೆ, ಸಮಾನತೆಗಳನ್ನು ನೆಲೆಗೊಳಿಸಲು ತಮ್ಮ ಶಕ್ತಿ ಸಿದ್ಧಿಗಳನ್ನೆಲ್ಲ ನಿವೇದಿಸಿದ ಭರತ ಖಂಡದ ಪ್ರಪ್ರಥಮ ಯುಗಪುರುಷ ಬಸವಣ್ಣ” ಎಂಬ ದಿ, ರಾಷ್ಟ್ರಕವಿ ಕುವೆಂಪು ಅವರು ಮಾತುಗಳು ಮಾನವತಾವಾದಿಗಳಿಗೆ ಮನನೀಯವಾಗಿದೆ. ಶಿವರಾತ್ರಿಯಂದು ನಡೆಯುವ ಈ ತರಣ ಗಣ ಮೇಳವನ್ನು ಸರ್ವತರಣರ ಸಂಸ್ಕರಣಾ ದಿನವನ್ನಾಗಿ ಆಚರಿಸಲಾಗುತ್ತಿದೆ.

ಶರಣ ನಿದ್ರೆಗೈದೆಡೆ ಜಪ ಕಾಣಿರೋ  ಶರಣನೆದ್ದು ಕುಳಿತರೆ ಶಿವರಾತ್ರಿ ಕಾಣಿರೋ  ಶರಣ ನಡೆದುದು ಪಾವನ ಕಾಣಿರೋ ಶರಣ ನುಡಿದುದೇ ಶಿವತತ್ವ ಕಾಣಿರೋ ಕೂಡಲ ಸಂಗನ ಶರಣನ ಕಾಯಕವೇ ಕೈಲಾಸ ಕಾಣಿರೋ

ಇಂದಿನ ಕಾರ್ಯಕ್ರಮ ದಲ್ಲಿ ದ್ವಜಾರೋಹಣ, ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ, ವಾರದ ಸಾಮೂಹಿಕ ಪ್ರಾರ್ಥನೆ, ಸಾಮೋಹಿಕ ಇಷ್ಟಲಿಂಗ ಪೂಜೆ, ಗುಣ ಮೇಳ ಕುರಿತು ಉಪನ್ಯಾಸ ಜರುಗಲಿದೆ

ವಿಶೇಷ ಸೂಚನೆ : ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬ ಬಸವ ಧನ್ನೀಯರು ಬಿಳಿವಸ್ತ್ರ ಧರಿಸಿ ಷಚ್ಚೇನಯುಕ್ತ ಬಸವ ಮಂತ್ರ ಸಹಿತ ಕೆಂಪು ಮೇಲು ವಸ್ತ್ರ ಧರಿಸಬೇಕು.

  ಜಗದ್ಗುರು ಮಾತೆ ಮಹಾದೇವಿ ಮಾತಾಜಿಯವರು ಹಾಕಿ ಕೊಟ್ಟ ಕಾರ್ಯ ವನ್ನು ಪೋರೈಸುವದು ನಮ್ಮೆಲರ ಆದ್ಯ ಕರ್ತವ್ಯ .ಕಾರಣ ಎಲ್ಲಾ ಶರಣ ಶರಣಿಯರು ತಪ್ಪದೆ ತಪ್ಪದೆ ಸರಿಯಾದ ಸಮಯ ಕ್ಕೆ ಭಾಗವಹಿಸಲು ರಾಷ್ಟ್ರೀಯ ಬಸವದಳದ ಅದ್ಯಕ್ಷ ರಾದ ಶರಣ ದಿಲೀಪ್ ಕುಮಾರ ವಂದಾಲವರು ವಿನಂತಿಸಿದ್ದಾರೆ.

.

Mallikarjun

Share
Published by
Mallikarjun

Recent Posts

ಮೆಂತ್ಯ ಸೊಪ್ಪು

ಮೆಂತ್ಯ ಸೊಪ್ಪು Fenugreek ಮಾರ್ಕೆಟ್ ಇಂದ ಮೆಂತ್ಯ ಸೊಪ್ಪನ್ನು ಜಾಸ್ತಿ ತಂದಾಗ ಅದನ್ನು ಬಿಡಿಸಿ ಚೆನ್ನಾಗಿ ತೊಳೆದು ನಂತರ ಮೆಂತ್ಯ…

7 hours ago

ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ?

ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ? What is the benefit of drinking…

7 hours ago

ಪ್ರಭಾವಿಗಳಿಂದ ಸರ್ಕಾರಿ ಗೋಮಾಳ ಅತಿಕ್ರಮಿಸುವ ಹುನ್ನಾರ – ಗ್ರಾಮಸ್ಥರ ವಿರೋಧ

ಪ್ರಭಾವಿಗಳಿಂದ ಸರ್ಕಾರಿ ಗೋಮಾಳ ಅತಿಕ್ರಮಿಸುವ ಹುನ್ನಾರ - ಗ್ರಾಮಸ್ಥರ ವಿರೋಧ Influential people planning to encroach on government…

7 hours ago

ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಮಾ. 16 ರಂದು ಫ್ರೀಡಂ ಪಾರ್ಕ್‌ ನಲ್ಲಿ ಅಹೋರಾತ್ರಿ ಪ್ರತಿಭಟನೆ

ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಮಾ. 16 ರಂದು ಫ್ರೀಡಂ ಪಾರ್ಕ್‌ ನಲ್ಲಿ…

7 hours ago

ಬಾಲ್ಯ ವಿವಾಹ ತಡೆಗೆ ಎಲ್ಲರ ಪಾತ್ರ ಬಹು ಮುಖ್ಯ- ನ್ಯಾ. ಮಹಾಂತೇಶ ದರಗದ್

ಬಾಲ್ಯ ವಿವಾಹ ತಡೆಗೆ ಎಲ್ಲರ ಪಾತ್ರ ಬಹು ಮುಖ್ಯ- ನ್ಯಾ. ಮಹಾಂತೇಶ ದರಗದ್ Everyone's role is very important…

7 hours ago

ಮಾಹಿತಿ ನೀಡಲು ವಿಳಂಬ ಮಾಡಿದ ಗ್ರಾಪಂ ಅಧಿಕಾರಿಗಳಿಗೆ 50 ಸಾವಿರ- ಬಿ. ವೆಂಕಟಸಿಂಗ್

ಮಾಹಿತಿ ನೀಡಲು ವಿಳಂಬ ಮಾಡಿದ ಗ್ರಾಪಂ ಅಧಿಕಾರಿಗಳಿಗೆ 50 ಸಾವಿರ- ಬಿ. ವೆಂಕಟಸಿಂಗ್ 50 thousand to gram panchayat…

7 hours ago