ಕಾಫಿ,ಟೀ ಬಿಡಿ ಈ ಅಭ್ಯಾಸ ಮಾಡಿಕೊಳ್ಳಿ! ದಿನ ಫುಲ್ ಎನರ್ಜಿಟಿಕ್ ಆಗಿರ್ತೀರ ಈ ಕಾಫಿ, ಟೀ ನಮ್ಮ ಮೂಡ್‌…

 
Give up coffee and tea and make this a habit! This coffee and tea will make you feel full of energy throughout the day. Our mood will improve...

ಕಾಫಿ,ಟೀ ಬಿಡಿ ಈ ಅಭ್ಯಾಸ ಮಾಡಿಕೊಳ್ಳಿ! ದಿನ ಫುಲ್ ಎನರ್ಜಿಟಿಕ್ ಆಗಿರ್ತೀರ ಈ ಕಾಫಿ, ಟೀ ನಮ್ಮ ಮೂಡ್‌…

ಕಾಫಿ,ಟೀ ಬಿಡಿ ಈ ಅಭ್ಯಾಸ ಮಾಡಿಕೊಳ್ಳಿ! ದಿನ ಫುಲ್ ಎನರ್ಜಿಟಿಕ್ ಆಗಿರ್ತೀರ ಈ ಕಾಫಿ, ಟೀ ನಮ್ಮ ಮೂಡ್‌ ಅನ್ನು ಸರಿಪಡಿಸುತ್ತದೆ, ಇದು ಒಪ್ಪಿಕೊಳ್ಳವ ವಿಚಾರ ಹೌದು, ಆದರೆ ಅತಿಯಾದರೆ ಅಮೃತನೂ ವಿಷ ಎನ್ನುವಂತೆ ಕಾಫಿ, ಟೀಯಲ್ಲಿನ ಕೆಫೀನ್ ಸೇವನೆ ಹೆಚ್ಚಾದರೆ ಆರೋಗ್ಯಕ್ಕೆ ಹಾನಿಕಾರಕ.

ಬೆಳಗ್ಗೆ ಕಾಫಿ, ಟೀ ಇಲ್ಲದೇ ಕೆಲವರಿಗೇ ದಿನಾನೇ ಆರಂಭವಾಗಲ್ಲ. ಬೆಳಗ್ಗೆಗೆ ಮಾತ್ರ ಇದು ಸೀಮಿತ ಅಲ್ಲ, ಮುಗಿಯೋದೂ ಇಲ್ಲ. ಹನ್ನೊಂದು ಗಂಟೆಗೆ ಒಂದು ಲೋಟ, ನಾಲ್ಕು ಗಂಟೆಗೆ ಒಂದು ಕಪ್‌ (Cup) ಇಷ್ಟೆ ಅಲ್ಲಾ ತಲೆಬಿಸಿ ಎಂದರೆ ಅದಕ್ಕೂ ಒಂದು ಲೋಟ ಕಾಫಿ ಇಲ್ಲಾ ಟೀ (Tea), ಕೆಲಸ ಮಾಡೋ ಮೂಡಿಲ್ವಾ ಅದಕ್ಕೂ ಒಂದು ಕಪ್‌ ಟೀ. ಹೀಗೆ ಕೆಲವರಿಗೆ ಈ ಕಾಫಿ, ಟೀ ಕುಡಿಯೋದು ಬೇಸರ ಅನ್ಸೋದೆ ಇಲ್ಲ. ಊಟ ಇಲ್ಲದಿದ್ರೂ ಇರ್ತೀವಿ ಕಾಫಿ (Cofee), ಟೀ ಬೇಕೆ ಬೇಕು ಅಂತಾರೆ ಹಲವರು.‌ ದಿನವಿಡೀ ಶಕ್ತಿಯುತವಾಗಿರಲು, ಹುಮ್ಮಸ್ಸಿನಿಂದ ಕೆಲಸ ಮಾಡಲು, ಎಚ್ಚರವಾಗಿರಲು ಕೆಫೀನ್‌ ಸೇವೆನೆಗೆ ಹಲವರು ಅಂಟಿಕೊಂಡಿರುತ್ತಾರೆ. ಅದಕ್ಕಾಗಿಯೇ ಹೆಚ್ಚು ಕೆಫೀನ್ ಸೇವಿಸುತ್ತಾರೆ.



ಹಾಗಾದರೆ ಕೆಫೀನ್‌ ಸೇವನೆ ಇಲ್ಲದೇ ಚುರುಕಾಗಿ, ಶಕ್ತಿಯುತವಾಗಿ ಇರೋದು ಹೇಗೆ ಅನ್ನೋದು ಇಲ್ಲಿದೆ ನೋಡಿ.ಕೆಲಸದ ಮಧ್ಯೆ ಒಂದು ಲೋಟ ಬಿಸಿ ಬಿಸಿ ಕಪ್‌ ಕಾಫಿ, ಟೀ ಕುಡಿಬೇಕು ಅನ್ನಿಸೋದು ಸಹಜ. ಆದರೆ ಈ ನಿಮ್ಮ ಬಾಯಿ ಚಪಲಕ್ಕೆ ಬ್ರೇಕ್‌ ಹಾಕಿ, ಹೀಗೆ ಅನಿಸಿದಾಗ ಸಲಾಡ್‌ನಂತಹ ಸ್ನ್ಯಾಕ್‌ಗಳಿಗೆ ಆದ್ಯತೆ ನೀಡಿ. ಸಲಾಡ್‌ನಲ್ಲಿ ಸೊಪ್ಪು, ಸೌತೇಕಾಯಿ, ಹಣ್ಣುಗಳು ಇರುವಂತೆ ನೋಡಿಕೊಳ್ಳಿ, ಈ ಆರೋಗ್ಯಕರ ವಿಧಾನ ನಿಮ್ಮ ಶಕ್ತಿಯನ್ನು ಮತ್ತಷ್ಟು ಹೆಚ್ಚಿಸುತ್ತದೆ.

ವ್ಯಾಯಾಮನೀವು ವ್ಯಾಯಾಮ ಮಾಡುವಾಗ, ನಿಮ್ಮ ಹೃದಯ ಬಡಿತ ಹೆಚ್ಚಾಗುತ್ತದೆ ಮತ್ತು ನಿಮ್ಮ ರಕ್ತದ ಹರಿವು ಸುಧಾರಿಸುತ್ತದೆ. ವ್ಯಾಯಾಮವು ಎಂಡಾರ್ಫಿನ್‌ಗಳು ಮತ್ತು ಡೋಪಮೈನ್‌ಗಳ ಬಿಡುಗಡೆಯನ್ನು ಪ್ರಚೋದಿಸುತ್ತದೆ ಎಂದು ಹೇಳಲಾಗುತ್ತದೆ.ಇದು ನಿಮಗೆ ಚೈತನ್ಯವನ್ನು ಮಾತ್ರವಲ್ಲದೆ ಸಂತೋಷವನ್ನು ನೀಡುತ್ತದೆ. ಹೀಗಾಗಿ ವ್ಯಾಯಾಮ ಮಾಡುವುದು ಕೆಫೀನ್‌ ಸೇವನೆಯ ಬದಲಿನ ಶಕ್ತಿಯನ್ನು ನಿಮಗೆ ನೀಡುತ್ತದೆ.ಹೆಚ್ಚು ನೀರು ಸೇವನೆದಿನದಲ್ಲಿ ಹೆಚ್ಚು ಕೆಫೀನ್‌ ಕುಡಿಯುವ ಬದಲಿಗೆ ಹೆಚ್ಚು ನೀರು ಕುಡಿಯುವ ಅಭ್ಯಾಸ ಮಾಡಿಕೊಳ್ಳಿ. ನಿಯಮಿತ ಚಹಾ ಮತ್ತು ಕಾಫಿ ನಿರ್ಜಲೀಕರಣದ ಪರಿಣಾಮವನ್ನು ಹೊಂದಿರುತ್ತದೆ.

ಹೀಗಾಗಿ ಇದರ ಬದಲಿಗೆ ನೀರು ಕುಡಿಯಿರಿ. ನೀರಿನ ಜೊತೆ ಎಳನೀರು, ಹರ್ಬಲ್ ಟೀ, ಮನೆಯಲ್ಲಿ ತಯಾರಿಸಿದ ಮಿಲ್ಕ್‌ಶೇಕ್‌ಗಳು ಮುಂತಾದ ನೈಸರ್ಗಿಕ ಶಕ್ತಿ ಪಾನೀಯಗಳನ್ನು ಸಹ ನಿವು ಆರಿಸಿಕೊಳ್ಳಬಹುದು. ಇವು ನಿಮಗೆ ಕೆಫೀನ್‌ಗಿಂತ ಹೆಚ್ಚಿನ ಶಕ್ತಿಯನ್ನು ಒದಗಿಸುತ್ತವೆ.ಗುಣಮಟ್ಟದ ನಿದ್ರೆರಾತ್ರಿ ನಿದ್ರೆ ಇಲ್ಲದಿದ್ದರೆ ಮರುದಿನ ಕೆಲಸದಲ್ಲಿ ಉತ್ಸಾಹ, ಶಕ್ತಿ ಎರಡೂ ಇರುವುದಿಲ್ಲ. ಆಗ ಎಚ್ಚರವಾಗಿರಲು ಹೆಚ್ಚು ಕೆಫೀನ್‌ಗೆ ಮೊರೆ ಹೋಗುತ್ತೇವೆ. ಆದ್ದರಿಂದ ಕೆಫೀನ್‌ ಸೇವನೆಯ ಮೂಲ ಕಾರಣ ನಿದ್ರೆಗೆ ಒತ್ತು ನೀಡಿ. ಬೇಗ ಮಲಗಿ, ಬೇಗ ಏಳುವ ಮತ್ತು ಏಳು ತಾಸು ಮಲಗುವ ಅಭ್ಯಾಸ ಬೆಳೆಸಿಕೊಳ್ಳಿ.

ಒತ್ತಡ ನಿರ್ವಹಿಸಿಕೆಲಸ, ಜೀವನದಲ್ಲಿ ಒಂದಿಷ್ಟು ಒತ್ತಡಗಳು ಸಾಮಾನ್ಯವಾಗಿರುತ್ತವೆ. ಇವುಗಳಿಗೆ ಕೆಫೀನ್‌ ಮದ್ದಲ್ಲ. ದಿನನಿತ್ಯದ ಅಭ್ಯಾಸಗಳಾದ ಧ್ಯಾನ, ವ್ಯಾಯಾಮ, ಯೋಗದ ಮೂಲಕ ಒತ್ತಡ ನಿಭಾಯಿಸಿ ಕೆಫೀನ್‌ ಸೇವನೆ ಕಡಿಮೆ ಮಾಡಿ.

Mallikarjun

Share
Published by
Mallikarjun

Recent Posts

ಮೆಂತ್ಯ ಸೊಪ್ಪು

ಮೆಂತ್ಯ ಸೊಪ್ಪು Fenugreek ಮಾರ್ಕೆಟ್ ಇಂದ ಮೆಂತ್ಯ ಸೊಪ್ಪನ್ನು ಜಾಸ್ತಿ ತಂದಾಗ ಅದನ್ನು ಬಿಡಿಸಿ ಚೆನ್ನಾಗಿ ತೊಳೆದು ನಂತರ ಮೆಂತ್ಯ…

18 hours ago

ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ?

ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ? What is the benefit of drinking…

19 hours ago

ಪ್ರಭಾವಿಗಳಿಂದ ಸರ್ಕಾರಿ ಗೋಮಾಳ ಅತಿಕ್ರಮಿಸುವ ಹುನ್ನಾರ – ಗ್ರಾಮಸ್ಥರ ವಿರೋಧ

ಪ್ರಭಾವಿಗಳಿಂದ ಸರ್ಕಾರಿ ಗೋಮಾಳ ಅತಿಕ್ರಮಿಸುವ ಹುನ್ನಾರ - ಗ್ರಾಮಸ್ಥರ ವಿರೋಧ Influential people planning to encroach on government…

19 hours ago

ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಮಾ. 16 ರಂದು ಫ್ರೀಡಂ ಪಾರ್ಕ್‌ ನಲ್ಲಿ ಅಹೋರಾತ್ರಿ ಪ್ರತಿಭಟನೆ

ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಮಾ. 16 ರಂದು ಫ್ರೀಡಂ ಪಾರ್ಕ್‌ ನಲ್ಲಿ…

19 hours ago

ಬಾಲ್ಯ ವಿವಾಹ ತಡೆಗೆ ಎಲ್ಲರ ಪಾತ್ರ ಬಹು ಮುಖ್ಯ- ನ್ಯಾ. ಮಹಾಂತೇಶ ದರಗದ್

ಬಾಲ್ಯ ವಿವಾಹ ತಡೆಗೆ ಎಲ್ಲರ ಪಾತ್ರ ಬಹು ಮುಖ್ಯ- ನ್ಯಾ. ಮಹಾಂತೇಶ ದರಗದ್ Everyone's role is very important…

19 hours ago

ಮಾಹಿತಿ ನೀಡಲು ವಿಳಂಬ ಮಾಡಿದ ಗ್ರಾಪಂ ಅಧಿಕಾರಿಗಳಿಗೆ 50 ಸಾವಿರ- ಬಿ. ವೆಂಕಟಸಿಂಗ್

ಮಾಹಿತಿ ನೀಡಲು ವಿಳಂಬ ಮಾಡಿದ ಗ್ರಾಪಂ ಅಧಿಕಾರಿಗಳಿಗೆ 50 ಸಾವಿರ- ಬಿ. ವೆಂಕಟಸಿಂಗ್ 50 thousand to gram panchayat…

19 hours ago