ನರೇಗಾ ಕೂಲಿ ಕಾರ್ಯಕ್ರಮ ಅಡಿಯಲ್ಲಿ ಆರೋಗ್ಯ ಜಾಗೃತಿ
Health awareness under NREGA wage program ಗಂಗಾವತಿ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿ, ಜಿಲ್ಲಾ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮ ಕೊಪ್ಪಳ ತಾಲೂಕು ಉಪ ವಿಭಾಗೀಯ ಆಸ್ಪತ್ರೆ ತಾಲೂಕಾ ಆರೋಗ್ಯ ಕಛೇರಿ ಗಂಗಾವತಿ ಅಡಿಯಲ್ಲಿ ಶಿವಾನಂದ ನಾಯ್ಕರ್, ಮಲ್ಲಿಕಾರ್ಜುನ ಡಿ ಹ್ಯಾಟೀ, ಉಪ ವಿಭಾಗೀಯ ಆಸ್ಪತ್ರೆ ಗಂಗಾವತಿ ಕ್ಷಯ ಮತ್ತು ಎಚ್ಐವಿ, ಏಡ್ಸ್ ಮತ್ತು ಸಾಮಾನ್ಯ ಆರೋಗ್ಯ ನೈರ್ಮಲ್ಯ ಮತ್ತು ಮಾನಸಿಕ ಆರೋಗ್ಯ ಅರಿವು ನೀಡಿ ಜೀವನಶೈಲಿಯ ಅಸಮತೋಲನದಿಂದಾಗಿ ಮಾನವಕುಲವು ಮುಖ್ಯವಾಗಿ ಸಾಂಕ್ರಾಮಿಕ ರೋಗಗಳಿಂದ ಬಳಲುತ್ತಿದೆ. ಅಧಿಕ ರಕ್ತದೊತ್ತಡ ಮತ್ತು ಮಧುಮೇಹದಂತಹ ಸಾಂಕ್ರಾಮಿಕವಲ್ಲದ ಕಾಯಿಲೆಗಳು ಸಹ ಹೆಚ್ಚಾಗಿದೆ ಆದ್ದರಿಂದ ಮಾನವಕುಲ ತಮ್ಮ ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳಬೇಕು ಸೂರ್ಯೋದಯಕ್ಕೂ ಮುಂಚೆ ಬೇಗ ಎದ್ದೇಳಬೇಕು ಆರೋಗ್ಯಕರ ಆಹಾರವನ್ನು ಸೇವಿಸಬೇಕು 8 ಗಂಟೆಗಳ ನಿದ್ದೆ, ಪ್ರತಿದಿನ ಕನಿಷ್ಠ 6 ಕಿ.ಮೀ ನಡೆಯಬೇಕು. ಮನಸ್ಸನ್ನು ಶಾಂತವಾಗಿ ಮತ್ತು ಒತ್ತಡ ಮುಕ್ತವಾಗಿಡುವುದೇ ಆರೋಗ್ಯದ ರಹಸ್ಯ.
ಸಾಂಕ್ರಾಮಿಕ ರೋಗಗಳಲ್ಲಿ ಕ್ಷಯರೋಗವು ತುಂಬಾ ಅಪಾಯಕಾರಿ ಕಾಯಿಲೆಯಾಗಿದೆ. 2 ವಾರ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯ ಕೆಮ್ಮು ,ತೂಕ ಇಳಿಕೆ, ಸಂಜೆ ಜ್ವರ ಹೆಚ್ಚಾಗುವುದು. ಕಡಿಮೆ ಹಸಿವು ಲಕ್ಷಣಗಳು ಕಾಣಿಸಿಕೊಳ್ಳುತ್ತವೆ ಇಂತಹವರು ಕಂಡುಬಂದರೆ ದಯವಿಟ್ಟು ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಪರೀಕ್ಷಿಸಿಕೊಳ್ಳಿ.ಎಲ್ಲಾ ಸಮುದಾಯಗಳಿಗೂ ಇದು ವಿನಮ್ರ ವಿನಂತಿ.
ಎಚ್ಐವಿ ಏಡ್ಸ್ ರೋಗವು ಅಸುರಕ್ಷಿತ ಲೈಂಗಿಕತೆ, ಅಸುರಕ್ಷಿತ ರಕ್ತ ವರ್ಗಾವಣೆ, ತಾಯಿಯಿಂದ ಮಗುವಿಗೆ, ಸಿರೆಂಜ್‌ನ ಅಸುರಕ್ಷಿತ ಬಳಕೆಯಿಂದ ಮಾತ್ರ ಉಂಟಾಗುತ್ತದೆ. ಶ್ರೀ ಶಿವಾನಂದ ನಾಯ್ಕರವರು ಹೇಳಿದರು ಕಾರ್ಯಕ್ರಮದಲ್ಲಿ ಸುಮಾರು 90 ಜನರು ಭಾಗವಹಿಸಿದ್ದರು.
ಮೆಂತ್ಯ ಸೊಪ್ಪು Fenugreek ಮಾರ್ಕೆಟ್ ಇಂದ ಮೆಂತ್ಯ ಸೊಪ್ಪನ್ನು ಜಾಸ್ತಿ ತಂದಾಗ ಅದನ್ನು ಬಿಡಿಸಿ ಚೆನ್ನಾಗಿ ತೊಳೆದು ನಂತರ ಮೆಂತ್ಯ…
ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ? What is the benefit of drinking…
ಪ್ರಭಾವಿಗಳಿಂದ ಸರ್ಕಾರಿ ಗೋಮಾಳ ಅತಿಕ್ರಮಿಸುವ ಹುನ್ನಾರ - ಗ್ರಾಮಸ್ಥರ ವಿರೋಧ Influential people planning to encroach on government…
ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಮಾ. 16 ರಂದು ಫ್ರೀಡಂ ಪಾರ್ಕ್ ನಲ್ಲಿ…
ಬಾಲ್ಯ ವಿವಾಹ ತಡೆಗೆ ಎಲ್ಲರ ಪಾತ್ರ ಬಹು ಮುಖ್ಯ- ನ್ಯಾ. ಮಹಾಂತೇಶ ದರಗದ್ Everyone's role is very important…
ಮಾಹಿತಿ ನೀಡಲು ವಿಳಂಬ ಮಾಡಿದ ಗ್ರಾಪಂ ಅಧಿಕಾರಿಗಳಿಗೆ 50 ಸಾವಿರ- ಬಿ. ವೆಂಕಟಸಿಂಗ್ 50 thousand to gram panchayat…