ಕ.ಕ.ರ.ಸಾ.ನಿ. ಕೊಪ್ಪಳ ವಿಭಾಗ: ಶಿಶಿಕ್ಷ ತರಬೇತಿಗೆ ಅರ್ಜಿ ಆಹ್ವಾನ
K.K.R.Sa.ni. Koppal Division: Application Invitation for Teacher Training ಕೊಪ್ಪಳ ಫೆಬ್ರವರಿ 04, (ಕರ್ನಾಟಕ ವಾರ್ತೆ): ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ, ಕೊಪ್ಪಳ ವಿಭಾಗದಿಂದ ಶಿಶಿಕ್ಷ ಅಧಿನಿಯಮ 1961 ರನ್ವಯ ಪೂರ್ಣ ಅವಧಿಯ ತರಬೇತಿ ಪಡೆಯಲು ಕೊಪ್ಪಳ ವಿಭಾಗದ ವ್ಯಾಪ್ತಿಯಲ್ಲಿ ಇರುವ ಕೊಪ್ಪಳ, ಗಂಗಾವತಿ, ಕುಕನೂರು, ಯಲಬುರ್ಗಾ, ಕುಷ್ಟಗಿ ಹಾಗೂ ವಿಭಾಗೀಯ ಕಾರ್ಯಾಗಾರಗಳಲ್ಲಿ ತರಬೇತಿಗೆ ಅವಕಾಶವಿದ್ದು, ಅದರಂತೆ ವಿವಿಧ ವೃತ್ತಿಗಳಲ್ಲಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಕರೆಯಲಾಗಿದೆ.
ಮೆಕ್ಯಾನಿಕ್ ಡೀಸಲ್ ವೃತ್ತಿ (ಮೆಕ್ಯಾನಿಕ್ ಡೀಸಲ್‌ನಲ್ಲಿ ಐ.ಟಿ.ಐ ಪಾಸಾಗಿರಬೇಕು) 15 ಅಭರ್ಥಿಗಳು, ಆಟೋ ಎಲೆಕ್ಟ್ರಿಷಿಯನ್ ವೃತ್ತಿ(ಆಟೋ ಎಲೆಕ್ಟಿçÃಷಿಯನ್ ಐ.ಟಿ.ಐ ಪಾಸಾಗಿರಬೇಕು) 18 ಅಭ್ಯರ್ಥಿಗಳು ಹಾಗೂ ಆಟೋ ಬಾಡಿ ಬಿಲ್ಡರ್/ಫಿಟ್ಟರ್(ಎಂ.ವಿ.ಬಿ.ಬಿ)(
ತರಬೇತಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು 2026ರ ಜನವರಿ 31 ಕ್ಕೆ ಕನಿಷ್ಟ 18 ವರ್ಷಗಳು ತುಂಬಿರಬೇಕು. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ ಗರಿಷ್ಟ 40 ವರ್ಷ ಮತ್ತು ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 35 ವರ್ಷಗಳು ಮೀರಿರಬಾರದು. ಪರಿಶಿಷ್ಟ ಜಾತಿಯವರಿಗೆ ಶೇ.17 ರಷ್ಟು, ಪರಿಶಿಷ್ಟ ಪಂಗಡದವರಿಗೆ ಶೇ.7 ರಷ್ಟು ಸ್ಥಾನವನ್ನು ಮೀಸಲಾಗಿರಿಸಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ನಿಯಾನುಸಾರ ಕ.ಕ.ರ.ಸಾ. ನಿಗಮ, ಕೇಂದ್ರ ಕಛೇರಿ, ಕಲಬುರಗಿಯಿಂದ ಸೂಚಿಸುವ ಮೊತ್ತವನ್ನು ಮಾಹೆಯಾನ ಬ್ಯಾಂಕ್ ಖಾತೆ ಮುಖಾಂತರ ಮಾಸಿಕ ಶಿಶಿಕ್ಷÄ ತರಬೇತಿ ಭತ್ಯೆ ಪಾವತಿಸಲಾಗುವುದು. ಮೇಲಿನ ಖಾಲಿ ಸ್ಥಾನಗಳಲ್ಲಿ ಅವಶ್ಯಕತೆ ಅನುಸಾರ ಬದಲಾಯಿಸುವ ಹಕ್ಕನ್ನು ಸಂಸ್ಥೆಯು ಕಾಯ್ದಿರಿಸಲಾಗಿದೆ.
ಶಿಶಿಕ್ಷÄ ತರಬೇತಿಯು ಷರತ್ತು ಮತ್ತು ನಿಬಂಧನೆಗಳಿಗೆ ಒಳಪಟ್ಟಿದೆ. ಇದರನ್ವಯ ಈಗಾಗಲೇ ಶಿಶಿಕ್ಷÄ ಕಾಯ್ದೆ 1961 ರ ಅನ್ವಯ ಯಾವುದೇ ವೃತ್ತಿಯಲ್ಲಿ ಶಿಶಿಕ್ಷÄ ತರಬೇತಿ ಪಡೆದಿರುವವರು ಅರ್ಜಿ ಸಲ್ಲಿಸಲು ಅರ್ಹರಲ್ಲ. ಶಿಶಿಕ್ಷÄ ತರಬೇತಿ ಪೂರ್ತಿಯಾದ ನಂತರ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ತರಬೇತಿ ಪಡೆದ ಅಭ್ಯರ್ಥಿಗಳಿಗೆ ಕೆಲಸ ನೀಡುವ ಬಗ್ಗೆ ಹೊಣೆಗಾರರಾಗುವುದಿಲ್ಲ ಹಾಗೂ ಯಾವುದೇ ಒಪ್ಪಂದಕ್ಕೆ ಒಳಪಟ್ಟಿರುವುದಿಲ್ಲ. ಅಭ್ಯರ್ಥಿಗಳಿಗೆ ಕನ್ನಡ ಭಾಷೆಯನ್ನು ಓದಲು, ಬರೆಯಲು ಮತ್ತು ಮಾತನಾಡಲು ಕಡ್ಡಾಯವಾಗಿ ತಿಳಿದಿರಬೇಕು. ತರಬೇತಿ ನಿಯೋಜನೆಗೆ ಸಂಬAಧಿಸಿದAತೆ ಯಾವುದೇ ರೀತಿಯ ಶಿಫಾರಸ್ಸು ಅಥವಾ ಒತ್ತಡಗಳಿಗೆ ಆಸ್ಪದ ಇರುವುದಿಲ್ಲ. ನಿಯೋಜನಾ ಪ್ರಾಧಿಕಾರಸ್ಥರುಗಳ ತೀರ್ಮಾನವೇ ಅಂತಿಮ. ಈ ಬಗ್ಗೆ ಯಾವುದೇ ಪತ್ರ ವ್ಯವಹಾರಕ್ಕೆ ಆಸ್ಪದವಿಲ್ಲ. ಶಿಶಿಕ್ಷÄ ತರಬೇತಿಗೆ ನಿಯೋಜನೆಗೊಂಡ ಅಭ್ಯರ್ಥಿಗಳು ದೈಹಿಕ ಅರ್ಹತೆ ಪಡೆದಿರಬೇಕು ಮತ್ತು ತರಬೇತಿಗೆ ಹಾಜರಾಗುವ ಮುನ್ನ ಜಿಲ್ಲಾ ವೈದ್ಯಾಧಿಕಾರಿಗಳಿಂದ ವೈದ್ಯಕೀಯ ಪ್ರಮಾಣ ಪತ್ರ ಸಲ್ಲಿಸಬೇಕು. ತರಬೇತಿಗೆ ಆಯ್ಕೆಯಾದ ಅಭ್ಯರ್ಥಿಗಳು ಕೊಪ್ಪಳ ವಿಭಾಗದ ವ್ಯಾಪ್ತಿಯಲ್ಲಿ ಬರುವ ಘಟಕ ಹಾಗೂ ಕೊಪ್ಪಳ ವಿಭಾಗೀಯ ಕಾರ್ಯಾಗಾರದಲ್ಲಿ ಮಾತ್ರ ತರಬೇತಿ ಪಡೆಯಲು ಸಿದ್ದರಿರಬೇಕು.
ತರಬೇತಿಗೆ ನಿಗದಿತ ಅರ್ಜಿ ನಮೂನೆಯಲ್ಲಿ ಅಭ್ಯರ್ಥಿಗಳು ತಮ್ಮ ಸ್ವಂತ ಕೈ ಬರಹದಿಂದ ವಿವರವನ್ನು ನಮೂದಿಸಿ ಅರ್ಜಿಯೊಂದಿಗೆ ಜನ್ಮ ದಿನಾಂಕ, ವಿದ್ಯಾರ್ಹತೆಗೆ ಸಂಬAಧಿಸಿದ ಪ್ರಮಾಣ ಪತ್ರಗಳ ನಕಲು ಪ್ರತಿಗಳನ್ನು ಹಾಗೂ ಪ.ಜಾ/ಪ.ಪಂ ಸಂಬAಧಪಟ್ಟAತೆ ಜಾತಿ ಪ್ರಮಾಣ ಪತ್ರಗಳನ್ನು ಲಗತ್ತಿಸಿ, ಇತ್ತೀಚಿನ ಪಾಸ್‌ಪೋರ್ಟ ಸೈಜಿನ ಭಾವ ಚಿತ್ರವನ್ನು ಅರ್ಜಿಗೆ ಅಂಟಿಸಿ ಸಂಬAಧಿಸಿದ ಎಲ್ಲಾ ದಾಖಲೆಗಳ ಮೂಲ ಪ್ರಮಾಣ ಪತ್ರಗಳು ಹಾಗೂ ಒಂದು ಜೊತೆ ಛಾಯಾ ಪ್ರತಿಗಳೊಂದಿಗೆ “ವಿಭಾಗೀಯ ನಿಯಂತ್ರಣಾಧಿಕಾರಿ, ಕ.ಕ.ರ.ಸಾ.ನಿಗಮ, ಕೊಪ್ಪಳ ವಿಭಾಗ” ಇವರಲ್ಲಿ ಫೆಬ್ರವರಿ 26 ರಂದು ಬೆಳಿಗ್ಗೆ 11 ಗಂಟೆಯಿAದ ಮಧ್ಯಾಹ್ನ 1.30 ರ ವರೆಗೆ ಸ್ವಂತ ಖರ್ಚಿನಲ್ಲಿ ನೇರ ಸಂದರ್ಶನಕ್ಕೆ ಹಾಜರಾಗತಕ್ಕದ್ದು.
ಸಂದರ್ಶನದ ನಂತರ ನಿಯೋಜನೆಗೆ ಆಯ್ಕೆಗೊಂಡ ಅಭ್ಯರ್ಥಿಗಳ ಹೆಸರುಗಳನ್ನು ಸೂಚನಾ ಫಲಕದಲ್ಲಿ ಪ್ರಕಟಿಸಲಾಗುವುದು. ಶಿಶಿಕ್ಷÄ ತರಬೇತಿ ಸಂದರ್ಶನಕ್ಕೆ ಹಾಜರಾಗುವ ಅಭ್ಯರ್ಥಿಗಳು ಮೊಬೈಲ್ ಸಂಖ್ಯೆ, ಆಧಾರ ಕಾರ್ಡ ಪ್ರತಿ, ಇ-ಮೇಲ್ ವಿಳಾಸದ ದಾಖಲೆಗಳನ್ನು ಹೊಂದಿರಬೇಕು ಹಾಗೂ ರಾಷ್ಟಿçÃಕೃತ ಬ್ಯಾಂಕಿನ ಖಾತೆಯನ್ನು ಹೊಂದಿದ್ದು, ಆ ಖಾತೆಗೆ ಆಧಾರ ಕಾರ್ಡ ಸಂಖ್ಯೆ ಜೋಡಣೆಯಾಗಿರಬೇಕು. ಶಿಶಿಕ್ಷÄ ತರಬೇತಿ ಸಂದರ್ಶನಕ್ಕೆ ಹಾಜರಾಗುವ ಅಭ್ಯರ್ಥಿಗಳ ಹೆಸರು, ತಂದೆಯ ಹೆಸರು, ಅಡ್ಡ ಹೆಸರು ಹಾಗೂ ಜನ್ಮ ದಿನಾಂಕವು ಎಸ್.ಎಸ್.ಎಲ್.ಸಿ ಅಂಕಪಟ್ಟಿ ಹಾಗೂ ಆಧಾರ ಕಾರ್ಡನಲ್ಲಿ ಒಂದೇ ತೆರನಾಗಿರಬೇಕು. ಇಲ್ಲವಾದಲ್ಲಿ ಅಂತಹ ಅರ್ಜಿಗಳನ್ನು ತಿರಸ್ಕರಿಸಲಾಗುವುದು. ಎಲ್ಲಾ ರೀತಿಯಲ್ಲಿ ಮಾಹಿತಿ ಸರಿಯಾಗಿರುವ ಅಭ್ಯರ್ಥಿಗಳು www. apprenticeshipindia.gov.in ನಲ್ಲಿ ನೋಂದಣಿ ಮಾಡಿಕೊಂಡು ಪೋರ್ಟಲ್‌ನಿಂದ DIVISIONAL CONTROLLER, KKRTC KOPPAL DIVISION, ESTABLESHMENT (E06162900063) ನಲ್ಲಿ ಫೆಬ್ರವರಿ 25 ರ ಸಂಜೆ 5.30 ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ನೋಂದಣಿ ಇಲ್ಲದೇ ಇರುವಂತಹ ಅಭ್ಯರ್ಥಿಗಳನ್ನು ಅನರ್ಹಗೊಳಿಸಲಾಗುವುದು ಎಂದು ಕೊಪ್ಪಳ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Ben.V. Result: Sanjana S.A, Lavanya Yadav R. of APS Educational Institute rank first ಬೆಂ.ವಿವಿ ಫಲಿತಾಂಶ…
Cancel my account and give me all the money in my account. ನನ್ನ ಅಕೌಂಟನ್ನು ಕ್ಯಾನ್ಸಲ್…
ತಂದೆಯ ಋಣ ತೀರಿಸಲು ..ಎಷ್ಟೇ ಜನ್ಮ ಹುಟ್ಟಿ ಬಂದರೂ ಸಾಧ್ಯವಿಲ್ಲ No matter how many births you take,…
Devotee's iPhone fell into his pocket! Alas, it ended after falling into his pocket. ಹುಂಡಿಗೆ…
ಮೆಂತ್ಯ ಸೊಪ್ಪು Fenugreek ಮಾರ್ಕೆಟ್ ಇಂದ ಮೆಂತ್ಯ ಸೊಪ್ಪನ್ನು ಜಾಸ್ತಿ ತಂದಾಗ ಅದನ್ನು ಬಿಡಿಸಿ ಚೆನ್ನಾಗಿ ತೊಳೆದು ನಂತರ ಮೆಂತ್ಯ…
ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ? What is the benefit of drinking…