ಮಡಿವಾಳ ಮಾಚಿದೇವರ ಸಮುದಾಯ ಭವನದ ಗುದ್ದಲಿ ಪೂಜೆ
Hudali Puja at Madiwala Machidevara Community Hall ವರದಿ: ಬಂಗಾರಪ್ಪ .ಸಿ.
ಹನೂರು : ಪ್ರತಿಯೊಂದು ಜನಾಂಗವು ತನ್ನದೆ ಆದ ಭವನಗಳನ್ನು ಹೊಂದಬೇಕು ,ಮಡಿವಾಳ ಮಾಚಿದೇವರ
ಸಮುದಾಯ ಭವನದ ಕಾಮಗಾರಿಯು ಉತ್ತಮ ಗುಣಮಟ್ಟದ ವಸ್ತುಗಳಿಂದ ಕಟ್ಟಬೆಕು ದೀರ್ಘಕಾಲ ಬಾಳಿಕೆ ಬರುವಂತೆ ಮಾಡಬೇಕೆಂದು
ಶಾಸಕರಾದ ಎಮ್ ಆರ್ ಮಂಜುನಾಥ್ ತಿಳಿಸಿದರು.
ಹನೂರು ಪಟ್ಟಣದ ಏಳನೆ ವಾರ್ಡಿನಲ್ಲಿ ಮಡಿವಾಳ ಮಾಚಿದೇವರ ಜಯಂತಿಯ ಸಮಯದಲ್ಲಿ ಇಂದು ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು ಶೋಷಿತ ವರ್ಗಕ್ಕೆ ಸೇರಿದ ಸಮುದಾಯಕ್ಕೆ ನ್ಯಾಯ ಒದಗಿಸುವ ಕೆಲಸವನ್ನು ನಾನು ಮಾಡಿದ್ದೇನೆ . ಶಾಸಕರ ನಿಧಿಯಯಿಂದ ಸುಮಾರು ಹದಿನಾರು ಲಕ್ಷರೂಗಳ ವೆಚ್ಚದಲ್ಲಿ ಹಣ ನೀಡುವ ಮೂಲಕ ಪ್ರಾರಂಭಮಾಡಿದ್ದೆನೆ , ಅಲ್ಲದೆ ವೈಯಕ್ತಿಕವಾಗಿ ನಾನು ಸಹಾಯ ಮಾಡಲು ಸಿದ್ದನಿದ್ದೇನೆ . ಇನ್ನೂಳಿದ ಬೇಡಿಕೆಗಳನ್ನು ಬೇಡಿಕೆಗಳನ್ನು ಹಂತ ಹಂತವಾಗಿ ನಾನು ಈಡೇರಿಸುವ ಪ್ರಯತ್ನ ಮಾಡಲಾಗುವುದು. ಸಮುದಾಯದ ಎಲ್ಲಾ ಮುಖಂಡರ ಒಗ್ಗೂಡಿಸುವ ಪ್ರಯತ್ನ ಮಾಡಿ ಸಮುದಾಯ ಭವನದ ಕಾಮಗಾರಿಯು ಯಶಸ್ವಿಗೆ ಸಹಕರಿಸಲು ಸೂಚಿಸಿದರು.
ಇದೇ ಸಮಯದಲ್ಲಿ ಮಾತನಾಡಿದ ಜಿಲ್ಲಾ ಉಪಾಧ್ಯಕ್ಷರಾದ ವಿಜಯ್ ಕುಮಾರ್ ರವರು ಹನ್ನೆರಡು ವರ್ಷಗಳ ಕಾಲದ ಹೋರಾಟದ ಫಲವಾಗಿ ಇಂದು ಗುದ್ದಲಿಪೂಜೆ ಮಾಡಲಾಗಿದೆ , ತುಳಿತಕ್ಕೊಳಗಾದ ಸಮುದಾಯಗಳನ್ನು ಮೆಲಕ್ಕೆತ್ತಲು ಶಾಸಕರ ಶ್ರಮ ಬಹಳಷ್ಟಿದೆ , ನುಡಿದಂತೆ ನಡೆದಿದ್ದಾರೆ ಹಿಂದುಳಿದ ವರ್ಗಗಳಲ್ಲಿ ತಾವು ಬೆಳೆದು ಬಂದಿದ್ದಾರೆ ,ಎಲ್ಲಾ ಸಮುದಾಯಗಳನ್ನು ಒಗ್ಗೂಡಿಸುವ ಪ್ರಯತ್ನ ಮಾಡಿದ್ದಿರ , ಅಧಿಕಾರಿಗಳ ಬೆನ್ನತ್ತಿ ಕೆಲಸ ಮಾಡುವ ಹಠ ನಿಮ್ಮದಾಗಿದೆ , ಕ್ಷೇತ್ರದಲ್ಲಿ ನೀರಿನ ವ್ಯವಸ್ಥೆಯ ಮೂಲಕ ರೈತರಿಗೆ ಸಹಕಾರಿಯಗಿದ್ದಾರೆ . ಕ್ಷೇತ್ರದ ಅಭಿವೃದ್ಧಿಗೆ ಹಲವಾರು ಯೋಜನೆಯನ್ನು ಮುಂದಿನ ದಿನಗಳಲ್ಲಿ ಕಾರ್ಯಗತಗೊಳಿಸಲು ತಾವು ಅಣಿಯಾಗಬೇಕು ,ಹಾಗೆಯೆ ಜಿಲ್ಲಾ ಸಂಘಕ್ಕೆ ನನ್ನನ್ನು ಆಯ್ಕೆ ಮಾಡಿದ ನನ್ನ ಸಮುದಾಯಕ್ಕೆ ನಾನು ಸದಾ ಚಿರ ಋಣಿಯಾಗಿದ್ದೆನೆ ಎಂದರು.
ಇದೇ ಸಂದರ್ಭದಲ್ಲಿ ಚಾಮರಾಜನಗರ ಜಿಲ್ಲೆಯ ಮಡಿವಾಳ ಮಾಚಿದೇವರ ಜಿಲ್ಲಾ ಸಂಘದ ಅಧ್ಯಕ್ಷರಾದ ರೇವಣ್ಣ, ಪಟ್ಟಣ ಪಂಚಾಯತಿ ಮಾಜಿ ಅಧ್ಯಕ್ಷರಾದ ಮಮ್ತಾಜ್ ಬೇಗಂ. ಮುಖಂಡರುಗಳಾದ , ಡಿ ಅರ್ ಮಾದೇಶ್ . ಮಂಜೇಶ್ . ರಾಜೂಗೌಡ ,ನಾಗರಾಜು. ಮೋಹನ್. ಪ್ರಸನ್ನ ಕುಮಾರ್ , ಸಿದ್ದರಾಜು . ನಿರ್ಮಿತ ಕೇಂದ್ರದ ಅಧಿಕಾರಿಗಳು ರವಿಕುಮಾರ್ . ಪ್ರವೀಣ್ ಕುಮಾರ್ ಸೇರಿದಂತೆ ಹಲವಾರು ಹಾಜರಿದ್ದರು.
Ben.V. Result: Sanjana S.A, Lavanya Yadav R. of APS Educational Institute rank first ಬೆಂ.ವಿವಿ ಫಲಿತಾಂಶ…
Cancel my account and give me all the money in my account. ನನ್ನ ಅಕೌಂಟನ್ನು ಕ್ಯಾನ್ಸಲ್…
ತಂದೆಯ ಋಣ ತೀರಿಸಲು ..ಎಷ್ಟೇ ಜನ್ಮ ಹುಟ್ಟಿ ಬಂದರೂ ಸಾಧ್ಯವಿಲ್ಲ No matter how many births you take,…
Devotee's iPhone fell into his pocket! Alas, it ended after falling into his pocket. ಹುಂಡಿಗೆ…
ಮೆಂತ್ಯ ಸೊಪ್ಪು Fenugreek ಮಾರ್ಕೆಟ್ ಇಂದ ಮೆಂತ್ಯ ಸೊಪ್ಪನ್ನು ಜಾಸ್ತಿ ತಂದಾಗ ಅದನ್ನು ಬಿಡಿಸಿ ಚೆನ್ನಾಗಿ ತೊಳೆದು ನಂತರ ಮೆಂತ್ಯ…
ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ? What is the benefit of drinking…