ಐಸಿಎಸ್ಐ ರಾಷ್ಟ್ರೀಯ ಅಧ್ಯಕ್ಷರಾಗಿ ಸಿ.ಎಸ್. ಪವನ್ ಜಿ.  ಚಂದಕ್, ಉಪಾಧ್ಯಕ್ಷರಾಗಿ ಸಿ.ಎಸ್. ದ್ವಾರಕಾನಾಥ್ ಚೆನ್ನೂರ್ ಆಯ್ಕೆ

ಐಸಿಎಸ್ಐ ರಾಷ್ಟ್ರೀಯ ಅಧ್ಯಕ್ಷರಾಗಿ ಸಿ.ಎಸ್. ಪವನ್ ಜಿ.  ಚಂದಕ್, ಉಪಾಧ್ಯಕ್ಷರಾಗಿ ಸಿ.ಎಸ್. ದ್ವಾರಕಾನಾಥ್ ಚೆನ್ನೂರ್ ಆಯ್ಕೆ

C.S. Pawan G. Chandak elected as ICSI National President, C.S. Dwarkanath Chennur elected as Vice President

ಬೆಂಗಳೂರು: ಕೇಂದ್ರ ಸರ್ಕಾರದ ಕಾರ್ಪೋರೇಟ್ ವ್ಯವಹಾರಗಳ ಸಚಿವಾಲಯದಡಿ ಬರುವ ಇನ್ಸ್ಟಿಟ್ಯೂಟ್ ಆಫ್ ಕಂಪನಿ ಸೆಕ್ರಟರೀಸ್ ಆಫ್ ಇಂಡಿಯಾ (ಐಸಿಎಸ್ಐ) ಸಂಸ್ಥೆಯ 2026ನೇ ಸಾಲಿನ ರಾಷ್ಟ್ರೀಯ ಅಧ್ಯಕ್ಷರಾಗಿ ಸಿಎಸ್. ಪವನ್ ಜಿ.  ಚಂದಕ್, ಉಪಾಧ್ಯಕ್ಷರಾಗಿ ಸಿಎಸ್. ದ್ವಾರಕಾನಾಥ್ ಚೆನ್ನೂರ್ ಆಯ್ಕೆ ಯಾಗಿದ್ದಾರೆ.

ಸಿ.ಎಸ್. ಪವನ್ ಜಿ. ಚಂದಕ್ ಅವರು ಅವರು ಅರ್ಹ ಕಾರ್ಮಿಕ ಕಾನೂನುಗಳು ಹಾಗೂ ಕಾರ್ಮಿಕ ಕಲ್ಯಾಣ ಕ್ಷೇತ್ರದಲ್ಲಿ ವಿಶೇಷ ಪರಿಣಿತಿ ಪಡೆದಿದ್ದಾರೆ. ಅವರು ಸಾಂಸ್ಥಿಕ ಕಾನೂನು, ವಿದೇಶಿ ವಿನಿಮಯ ಕಾನೂನು, ಕೈಗಾರಿಕಾ ಕಾನೂನು, ಕಾನೂನು ಮಾಪನ ಶಾಸ್ತ್ರ, ಸೆಕ್ರೇಟರಿ ವಲಯದಲ್ಲಿ ಲೆಕ್ಕಪತ್ರ ಪರಿಶೋಧನೆ, ಮಧ್ಯಸ್ಥಿಕೆ (ಆರ್ಬಿಟ್ರೇಷನ್) ವಿಚಾರಗಳು, ಎಸ್.ಇ.ಝಟ್, ಎಸ್.ಟಿ.ಪಿ.ಇ ಹಾಗೂ ಡಿಒಟಿ ಕ್ಷೇತ್ರಗಳಲ್ಲಿ ವಿಶಾಲ ಅನುಭವ ಹೊಂದಿದ್ದಾರೆ.

ದೊಡ್ಡ ಸಾಂಸ್ಥಿಕ ಸಂಸ್ಥೆಗಳು ಹಾಗೂ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಸ್ವತಂತ್ರ ನಿರ್ದೇಶಕ ಮತ್ತು ಸಲಹೆಗಾರರಾಗಿ ಕಾರ್ಯನಿರ್ವಹಿಸಿದ್ದು, ತಮ್ಮ ಪರಿಣತಿಯ ಕ್ಷೇತ್ರಗಳಲ್ಲಿನ ಸವಾಲುಗಳು ಮತ್ತು ಸಮಸ್ಯೆಗಳ ಕುರಿತು ಆಳವಾದ ಅರಿವು ಹೊಂದಿದ್ದಾರೆ. ಸಾಂಸ್ಥಿಕ ಕಾನೂನು ಸಂಬಂಧಿತ ವಿಷಯಗಳ ನಿರ್ವಹಣೆ, ವ್ಯವಹಾರ ರಚನೆ (ಡೀಲ್ ಸ್ಟ್ರಕ್ಚರಿಂಗ್) ಮತ್ತು ಮರ್ಜರ್–ಅಮಾಲ್ಗಮೇಷನ್ ಕುರಿತು ಸಲಹೆ ನೀಡುವಲ್ಲಿ ನಿಪುಣರು.ಸಿಎಸ್ ದ್ವಾರಕಾನಾಥ್ ಚೆನ್ನೂರು ಅವರು ಐಸಿಎಸ್ಐ ಫೆಲೋ ಸದಸ್ಯರಾಗಿದ್ದು, ದಿವಾಳಿತನ ವಲಯದಲ್ಲಿ ಅವರು  ವೃತ್ತಿಪರರು ಮತ್ತು ಅರ್ಹತೆ ಪಡೆದ ಸಾಮಾಜಿಕ ಲೆಕ್ಕ ಪರಿಶೋಧಕರು. 1992ರಲ್ಲಿ ಕಂಪನಿ ಸೆಕ್ರಟರಿಯಾಗಿ ತಮ್ಮ ವೃತ್ತಿಜೀವನ ಆರಂಭಿಸಿದ ಅವರು, ಸುಮಾರು 10 ವರ್ಷಗಳ ಕಾಲ ವಿವಿಧ ಕಂಪನಿಗಳಲ್ಲಿ ಕೆಲಸ ಮಾಡಿದ ನಂತರ 2002ರಲ್ಲಿ ವೃತ್ತಿಪರ ಅಭ್ಯಾಸ ಆರಂಭಿಸಿದರು. ಪ್ರಸ್ತುತ ಅವರು ಖಾಸಗಿ ಹಾಗೂ ಸಾರ್ವಜನಿಕ ವಲಯದಲ್ಲಿ ಪಟ್ಟಿ ಮಾಡಲಾದ ಕಂಪನಿಗಳು ಮತ್ತು ವಿದೇಶಿ ಕಂಪನಿಗಳ ಉಪಕಂಪನಿಗಳು ಒಳಗೊಂಡಂತೆ, ಕಂಪನಿಗಳ ಕಾಯ್ದೆ, ಫೆಮಾ, ಆರ್.ಬಿ.ಐ ನಿಯಮಗಳು ಮತ್ತು ಸೆಬಿ ನಿಯಮಗಳ ಅಡಿಯಲ್ಲಿ ಸೇವೆಗಳನ್ನು ನೀಡುತ್ತಿದ್ದಾರೆ. ಅವರ ಪರಿಣತಿ ಕ್ಷೇತ್ರಗಳಲ್ಲಿ ಸಾಂಸ್ಥಿಕ ಕಾನೂನುಗಳು ಮತ್ತು ದಿವಾಳಿತನ ಹಾಗೂ ದಿವಾಳಿತನ ಸಂಹಿತೆ, 2016 ಸೇರಿವೆ.

Mallikarjun

Share
Published by
Mallikarjun

Recent Posts

ಮೆಂತ್ಯ ಸೊಪ್ಪು

ಮೆಂತ್ಯ ಸೊಪ್ಪು Fenugreek ಮಾರ್ಕೆಟ್ ಇಂದ ಮೆಂತ್ಯ ಸೊಪ್ಪನ್ನು ಜಾಸ್ತಿ ತಂದಾಗ ಅದನ್ನು ಬಿಡಿಸಿ ಚೆನ್ನಾಗಿ ತೊಳೆದು ನಂತರ ಮೆಂತ್ಯ…

10 hours ago

ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ?

ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ? What is the benefit of drinking…

11 hours ago

ಪ್ರಭಾವಿಗಳಿಂದ ಸರ್ಕಾರಿ ಗೋಮಾಳ ಅತಿಕ್ರಮಿಸುವ ಹುನ್ನಾರ – ಗ್ರಾಮಸ್ಥರ ವಿರೋಧ

ಪ್ರಭಾವಿಗಳಿಂದ ಸರ್ಕಾರಿ ಗೋಮಾಳ ಅತಿಕ್ರಮಿಸುವ ಹುನ್ನಾರ - ಗ್ರಾಮಸ್ಥರ ವಿರೋಧ Influential people planning to encroach on government…

11 hours ago

ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಮಾ. 16 ರಂದು ಫ್ರೀಡಂ ಪಾರ್ಕ್‌ ನಲ್ಲಿ ಅಹೋರಾತ್ರಿ ಪ್ರತಿಭಟನೆ

ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಮಾ. 16 ರಂದು ಫ್ರೀಡಂ ಪಾರ್ಕ್‌ ನಲ್ಲಿ…

11 hours ago

ಬಾಲ್ಯ ವಿವಾಹ ತಡೆಗೆ ಎಲ್ಲರ ಪಾತ್ರ ಬಹು ಮುಖ್ಯ- ನ್ಯಾ. ಮಹಾಂತೇಶ ದರಗದ್

ಬಾಲ್ಯ ವಿವಾಹ ತಡೆಗೆ ಎಲ್ಲರ ಪಾತ್ರ ಬಹು ಮುಖ್ಯ- ನ್ಯಾ. ಮಹಾಂತೇಶ ದರಗದ್ Everyone's role is very important…

11 hours ago

ಮಾಹಿತಿ ನೀಡಲು ವಿಳಂಬ ಮಾಡಿದ ಗ್ರಾಪಂ ಅಧಿಕಾರಿಗಳಿಗೆ 50 ಸಾವಿರ- ಬಿ. ವೆಂಕಟಸಿಂಗ್

ಮಾಹಿತಿ ನೀಡಲು ವಿಳಂಬ ಮಾಡಿದ ಗ್ರಾಪಂ ಅಧಿಕಾರಿಗಳಿಗೆ 50 ಸಾವಿರ- ಬಿ. ವೆಂಕಟಸಿಂಗ್ 50 thousand to gram panchayat…

11 hours ago