ತಾವರಗೇರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜುರುಗಿದ 02 ಮನೆ ಕಳ್ಳತನ ಪ್ರಕರಣಗಳು ಪತ್ತೆ ಒಬ್ಬ ಆರೋಪಿತನ ಬಂಧನ

02 house burglaries detected in Thavaragera police station area, one accused arrested

ತಾವರಗೇರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜುರುಗಿದ 02 ಮನೆ ಕಳ್ಳತನ ಪ್ರಕರಣಗಳು ಪತ್ತೆ
ಒಬ್ಬ ಆರೋಪಿತನ ಬಂಧನ

ಗಂಗಾವತಿ,26:ತಾವರಗೇರಾ ಪೊಲೀಸ್ ಠಾಣಾ ವ್ಯಾಪ್ತಿಯ ಹುಲಿಯಾಪುರ ಗ್ರಾಮದಲ್ಲಿ ನಡೆದ 02 ಮನೆ ಕಳ್ಳತನ ಪ್ರಕರಣಗಳಾದ ತಾವರಗೇರಾ ಪೊಲೀಸ್ ಠಾಣಾ ಗುನ್ನೆ ನಂ:162/2025, ಕಲಂ:305 ಬಿ.ಎನ್.ಎಸ್.-2023 ಹಾಗೂ ಗುನ್ನೆ ನಂ:169/2025 ಕಲಂ:333[1], 305 ಬಿ.ಎನ್.ಎಸ್.-2023 ನೇದ್ದವುಗಳಿಗೆ ಸಂಬಂಧಿಸಿದಂತೆ ಪ್ರಕರಣದಲ್ಲಿನ ಆರೋಪಿತರ ಹಾಗೂ ಮುದ್ದೇಮಾಲಿನ ಪತ್ತೆ ಕುರಿತು.

ಮಾನ್ಯ ಶ್ರೀ ಡಾ. ರಾಮ್.ಎಲ್.ಅರಸಿದ್ದಿ, IPS, ಪೊಲೀಸ್ ಅಧೀಕ್ಷಕರು ಕೊಪ್ಪಳ, ಮಾನ್ಯ ಶ್ರೀ ಆರ್. ಹೇಮಂತಕುಮಾರ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಕೊಪ್ಪಳ ರವರ ಸೂಕ್ತ ನಿರ್ದೇಶನದಂತೆ ಮಾನ್ಯ ಶ್ರೀ ಜಾಯಪ್ಪ ನ್ಯಾಮಗೌಡರ ಪೊಲೀಸ್ ಉಪಾಧೀಕ್ಷಕರು ಗಂಗಾವತಿ ಉಪ ವಿಭಾಗ ಹಾಗೂ ಶ್ರೀ ಯಶವಂತ ಬಿಸನಳ್ಳಿ ಸಿಪಿಐ ಕುಷ್ಟಗಿ ವೃತ್ತ ರವವರ ಮಾರ್ಗದರ್ಶನದಲ್ಲಿ ಪ್ರಕರಣದ ತನಿಖಾಧಿಕಾರಿ ಶ್ರೀ ಚಂದ್ರಪ್ಪ ಹೆಚ್.ಪಿ.ಎಸ್.ಐ [ಕಾ&ಸು] ತಾವರಗೇರಾ ಪೊಲೀಸ್ ಠಾಣೆ ನೇತೃತ್ವದ ತಂಡ ಹಾಗೂ ತಂಡದ ಸದಸ್ಯರಾದ 01] ಶ್ರೀ ಬಸವರಾಜ ಇಂಗಳದಾಳ ಹೆಚ್.ಸಿ-249, 02] ಶ್ರೀ ಮಹ್ಮದರಫಿ ಸಿ.ಹೆಚ್.ಸಿ.78, 03) ಶ್ರೀ ಯಮನಪ್ಪ ಸಿಪಿಸಿ-209, 04] ಶ್ರೀ ವಿರೇಶ ಸಿಪಿಸಿ-200 ಹಾಗೂ ತಾಂತ್ರಿಕ ವಿಭಾಗದ 10] ಶ್ರೀ ಪ್ರಸಾದ ಎಪಿಸಿ-166, 11] ಶ್ರೀ ಮಂಜುನಾಥ ಎಪಿಸಿ-87 ಇವರನ್ನೊಳಗೊಂಡ ಒಂದು ತಂಡವನ್ನು ರಚನೆ ಮಾಡಿದ್ದು ಇರುತ್ತದೆ.

ಪ್ರಕರಣದ ಪತ್ತೆ ಕಾರ್ಯಕ್ಕೆ ನೇಮಕ ಮಾಡಿದ ತನಿಖಾ ತಂಡವು ಆರೋಪಿತರ ಸುಳಿವು ಕುರಿತು ಮಾಹಿತಿ ಸಂಗ್ರಹಿಸಿ ದಿನಾಂಕ:25-11-2025 ರಂದು 02 ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿತನಾದ ವಿರೇಶ ತಂದೆ ಬಸಪ್ಪ ನಾಲತ್ವವಾಡ ವಯ:35, ಜಾತಿ:ಲಿಂಗಾಯತ, ಉ:ಡಾಬಾ ವ್ಯಾಪಾರ, ಸಾ:ಹುಲಿಯಾಪುರ, ತಾ:ಕುಷ್ಟಗಿ, ಜಿಲ್ಲಾ: ಕೊಪ್ಪಳ ಈತನನ್ನು ಪತ್ತೆ ಮಾಡಿ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿ ಆರೋಪಿತನಿಂದ 02 ಪ್ರಕರಣಕ್ಕೆ ಸಂಬಂಧಿಸಿದಂತೆ 80 ಗ್ರಾಂ ತೂಕದ ಚಿನ್ನಾಭರಣ ಅಂದಾಜು ಕೀ 6 ಲಕ್ಷ 40 ಸಾವಿರ ಬೆಲೆ ಬಾಳುವಂತವುಗಳನ್ನು ವಶಪಡಿಸಿಕೊಂಡು ಆರೋಪಿತನಿಗೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದು ಇರುತ್ತದೆ. ತನಿಖಾ ತಂಡದ ಕಾರ್ಯವನ್ನು ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರು ಕೊಪ್ಪಳ ರವರು ಪ್ರಶಂಶಿಸಿದ್ದಾರೆ.

Mallikarjun

Share
Published by
Mallikarjun

Recent Posts

ಮೆಂತ್ಯ ಸೊಪ್ಪು

ಮೆಂತ್ಯ ಸೊಪ್ಪು Fenugreek ಮಾರ್ಕೆಟ್ ಇಂದ ಮೆಂತ್ಯ ಸೊಪ್ಪನ್ನು ಜಾಸ್ತಿ ತಂದಾಗ ಅದನ್ನು ಬಿಡಿಸಿ ಚೆನ್ನಾಗಿ ತೊಳೆದು ನಂತರ ಮೆಂತ್ಯ…

12 hours ago

ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ?

ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ? What is the benefit of drinking…

12 hours ago

ಪ್ರಭಾವಿಗಳಿಂದ ಸರ್ಕಾರಿ ಗೋಮಾಳ ಅತಿಕ್ರಮಿಸುವ ಹುನ್ನಾರ – ಗ್ರಾಮಸ್ಥರ ವಿರೋಧ

ಪ್ರಭಾವಿಗಳಿಂದ ಸರ್ಕಾರಿ ಗೋಮಾಳ ಅತಿಕ್ರಮಿಸುವ ಹುನ್ನಾರ - ಗ್ರಾಮಸ್ಥರ ವಿರೋಧ Influential people planning to encroach on government…

12 hours ago

ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಮಾ. 16 ರಂದು ಫ್ರೀಡಂ ಪಾರ್ಕ್‌ ನಲ್ಲಿ ಅಹೋರಾತ್ರಿ ಪ್ರತಿಭಟನೆ

ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಮಾ. 16 ರಂದು ಫ್ರೀಡಂ ಪಾರ್ಕ್‌ ನಲ್ಲಿ…

13 hours ago

ಬಾಲ್ಯ ವಿವಾಹ ತಡೆಗೆ ಎಲ್ಲರ ಪಾತ್ರ ಬಹು ಮುಖ್ಯ- ನ್ಯಾ. ಮಹಾಂತೇಶ ದರಗದ್

ಬಾಲ್ಯ ವಿವಾಹ ತಡೆಗೆ ಎಲ್ಲರ ಪಾತ್ರ ಬಹು ಮುಖ್ಯ- ನ್ಯಾ. ಮಹಾಂತೇಶ ದರಗದ್ Everyone's role is very important…

13 hours ago

ಮಾಹಿತಿ ನೀಡಲು ವಿಳಂಬ ಮಾಡಿದ ಗ್ರಾಪಂ ಅಧಿಕಾರಿಗಳಿಗೆ 50 ಸಾವಿರ- ಬಿ. ವೆಂಕಟಸಿಂಗ್

ಮಾಹಿತಿ ನೀಡಲು ವಿಳಂಬ ಮಾಡಿದ ಗ್ರಾಪಂ ಅಧಿಕಾರಿಗಳಿಗೆ 50 ಸಾವಿರ- ಬಿ. ವೆಂಕಟಸಿಂಗ್ 50 thousand to gram panchayat…

13 hours ago