ಕಾತರಕಿ ಶ್ರೀ ದ್ಯಾಮಮ್ಮ ದೇವಿ ಜಾತ್ರೆಗೆ ಚಾಲನೆ
ಜಗದಲ್ಲಿ ಸಕಲ ಜೀವಿಗೂ ಬದುಕುವ ಹಕ್ಕಿದೆ : ಯಶೋಧಾ ಕಟಕೆ
Kataraki Sri Dyamamma Devi Fair kicks off
Every living thing in the world has the right to live: Yashoda Katake ಕೊಪ್ಪಳ: ಭಗವಂತನು ಸೃಷ್ಟಿಸಿದ ಎಲ್ಲಾ ಸಕಲ ಜೀವರಾಶಿಗಳಿಗೂ ಬದುಕುವ ಹಕ್ಕಿದೆ, ಆದ್ದರಿಂದ ಎಲ್ಲದರಲ್ಲೂ ಪರಮಾತ್ಮನನ್ನು ಕಾಣಬೇಕು ಎಂದು ಕಲಬುರಗಿ ಪಿ.ಎಸ್. ಐ. ಶರಣೆ ಯಶೋಧಾ ಕಟಕೆ ಹೇಳಿದರು. ಅವರು ತಾಲ್ಲೂಕಿನ ಕಾತರಕಿ ಗ್ರಾಮದ ಶ್ರೀ ದ್ಯಾಮಮ್ಮದೇವಿ (ಗ್ರಾಮದೇವತೆ) ಜಾತ್ರಾ ಮಹೋತ್ಸವದ ಮಹಿಳಾ ಗೋಷ್ಠಿ ಉದ್ಘಾಟಿಸಿ ಮಾತನಾಡಿದರು.
ಮುಂದುವರೆದು ಮಾತನಾಡಿದ ಅವರು ಭಗವಂತನು ಎಲ್ಲಾ ಆಯಾಮಗಳಲ್ಲಿ ಉತ್ತಮರ ಜೊತೆಗೆ ನಿಲ್ಲುತ್ತಾನೆ, ಮನುಷ್ಯ ಸದಾ ಒಳ್ಳೆಯದನ್ನು ಮಾಡಬೇಕು, ತಂದೆ ತಾಯಿಯರನ್ನು ಭಗವಂತನ ರೂಪದಲ್ಲಿ ನೋಡಬೇಕು. ಹೆಣ್ಣು ಜಗದ ಕಣ್ಣು ಆಕೆಯ ಶಕ್ತಿ ಅಗಾಧವಾದದು, ಆದರೆ ಸಂಸ್ಕಾರಯುತವಾಗಿ ಬದುಕುವದನ್ನು ಕಲಿಸುವುದು ಸಹ ಮುಖ್ಯ. ಖುಷಿಯಿಂದ ಜೀವನ ನಡೆಸಲು ಸರಳತೆ ಬಹಳ ಮುಖ್ಯ, ಆಧ್ಯಾತ್ಮಿಕ ಮತ್ತು ಭಕ್ತಿ ಮಾರ್ಗ ಅನುಸರಿಸಿದರೆ ಜೀವನ ಸುಗಮವಾಗಿ ನಡೆಯುತ್ತದೆ ಎಂದರು.
ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜ್ಯೋತಿ ಎಂ. ಗೊಂಡಬಾಳ ಮಾತನಾಡಿ, ಮಹಿಳಾ ಗೋಷ್ಠಿ ಮೂಲಕ ಮಹಿಳೆಯರ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಮಾಡಿದ್ದು ಸಂತೋಷದ ಸಂಗತಿ. ಒಬ್ಬ ಪುರುಷ ಪತ್ನಿ ಕಳೆದುಕೊಂಡು ವಿಧುರನಾದಾಗ ಆತನಿಗೆ ತೋರಿಸುವ ಅನುಕಂಪವನ್ನ ಮಹಿಳೆ ವಿಧವೆಯಾದಾಗ ತೋರಿಸಿದರೆ ಆಗ ಮಹಿಳಾ ಸ್ವಾತಂತ್ರ÷್ಯ ಸಿಕ್ಕ ಹಾಗೆ ಆಗುತ್ತದೆ. ಮಹಿಳೆ ಇಂದು ಅತ್ಯಂತ ಸ್ವಾವಲಂಬನೆಯಾಗಿ ಬದುಕುತ್ತಿದ್ದಾಳೆ, ಅದಕ್ಕೆ ಪ್ರಸ್ತುತ ಕಾಂಗ್ರೆಸ್ ಸರಕಾರ ಕೊಟ್ಟಿರುವ ಗ್ಯಾರಂಟಿ ಯೋಜನೆಗಳು ಸಹ ಅದಕ್ಕೆ ಪೂರಕವಾಗಿವೆ. ಮಹಿಳೆ ಮುಂದೆ ಬರಬೇಕಾದರೆ ಮನೆಯ ಎಲ್ಲ ಸದಸ್ಯರು ಸಹಕಾರ ಕೊಟ್ಟಾಗ ಮಾತ್ರ ಸಾಧ್ಯವಾಗುತ್ತದೆ.
ಗೋಷ್ಠಿಯ ನೇತೃತ್ವವಹಿಸಿದ್ದ ಕೊಪ್ಪಳದ ಈಶ್ವರೀಯ ವಿಶ್ವವಿದ್ಯಾಲಯದ ರಾಜಯೋಗಿನಿ ಯೋಗಿನ ಅಕ್ಕನವರು ಮಾತನಾಡಿ, ಆತ್ಮಕ್ಕೆ ಸಂಸ್ಕಾರವನ್ನು ಧಾರಣೆ ಮಾಡಿಕೊಳ್ಳಬೇಕು, ಮನುಷ್ಯ ಎಲ್ಲಿಯ ತನಕ ತನ್ನನ್ನು ತಾನು ಅರಿತುಕೊಳ್ಳುವದಿಲ್ಲವೋ ಅಲ್ಲಿಯವರೆಗೆ ಪರಮಾತ್ಮನನ್ನು ಕಾಣಲು ಸಾಧ್ಯವಿಲ್ಲ. ಜಗತ್ತಿಗೆ ಭಗವಂತನು ಒಬ್ಬನೇ ಎಂಬ ಅರಿವು ಇದೆ, ಆ ಅರಿವು ಜಾಗೃತಗೊಂಡಾಗ ಜಾತಿಗಳ ನಡುವೆ ಕಲಹ ಆಗದಂತೆ ಮಾಡುತ್ತದೆ ಎಂದರು.
ಗದಗ ಜಿಲ್ಲಾ ಮಾಜಿ ಜಿ. ಪಂ. ಉಪಾಧ್ಯಕ್ಷರಾದ ಶೋಭಾ ಬಸವರಾಜ ಮೇಟಿ ಅವರು ಮಾತನಾಡಿ, ನಮ್ಮ ಮಕ್ಕಳು ನಮ್ಮನ್ನು ಅವರ ಶಿಕ್ಷಕರನ್ನು ನೆರೆಹೊರೆಯವರನ್ನು ನೋಡಿ ಕಲಿಯುತ್ತಾರೆ ಹೊರತು ಯಾವುದೋ ಕಥೆ, ಚಿತ್ರ ನೋಡಿ ಅಲ್ಲ. ನಮ್ಮ ಪೀಳಿಗೆ ಚನ್ನಾಗಿ ಸುಸಂಸ್ಕöÈತ, ಸಂಸ್ಕಾರವAತರಾಗಿ ಇರಬೇಕು ಅಂದರೆ ನಾವು ಹಾಗೆ ಇರಬೇಕು ಆದ್ದರಿಂದ ಎಲ್ಲಾ ತಾಯಂದಿರು ಹಾಗೆ ಇರಲು ಪ್ರಯತ್ನಿಸಬೇಕು ಎಂದರು.
ಮಾತ್ರೋಶ್ರೀ ವನಜ ಗಂಗಾಧರ ಪುರೋಹಿತ ಅವರು ಅಧ್ಯಕ್ಷತೆವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಗ್ರಾಮ. ಪಂಚಾಯತಿ ಅಧ್ಯಕ್ಷೆ ಶಿವಮ್ಮ ಈಶಪ್ಪ ಬೈರಣ್ಣವರ್, ಸುನಂದಾ ಈಶಪ್ಪ ಗದ್ದಿಕೇರಿ, ಶಿವಗಂಗಾ ಭೂಮ್ಮಕ್ಕನವರ್, ಕೋಮಲ ಕುದುರಿಮೋತಿ, ಅನ್ನಪೂರ್ಣ ಮನ್ನಾಪುರ, ಇತರರು ಭಾಗವಹಿಸಿದ್ದರು. ಮಧ್ಯಾಹ್ನ ಉಡಿ ತುಂಬುವ ಕಾರ್ಯಕ್ರಮ ನಂತರ ಭಕ್ತಿ ಸಂಗೀತ ಜಗದಯ್ಯ ಸಾಲಿಮಠ ಮತ್ತು ಮಹೇಶ ತಳವಾರ ಅವರ ತಂಡದ ಜರುಗಿತು. ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾಜಿ ತಾ. ಪಂ. ಅಧ್ಯಕ್ಷ ವೆಂಕನಗೌಡ ಹಿರೇಗೌಡ್ರ ಮಾತನಾಡಿದರು. ಶಿವರಂಜನಿ ಹಿರೇಗೌಡ್ರ ಮತ್ತು ಮಹಾದೇವಿ ಭೈರಣ್ಣವರ ಕಾರ್ಯಕ್ರಮ ನಿರ್ವಹಿಸಿದರು.
ಸಾಹಿತಿ ವೀರಣ್ಣ ಹುರಕಡ್ಲಿ ಅವರ ಸಂಪಾದಕತ್ವದ ಕಾತರಕಿ ಗತ ವೈಭವ ಗ್ರಂಥ ಬಿಡುಗಡೆಗೊಳಿಸಲಾಯಿತು.
ಇದಕ್ಕೂ ಮುಂಚೆ ಬೆಳಿಗ್ಗೆ ಪೂರ್ಣ ಕುಂಭದೊAದಿಗೆ ಗಂಗಾಸ್ಥಳಕ್ಕೆ ಹೋಗಿ ಪೂಜೆ ನೆರವೇರಿಸಿ ವಿವಿಧ ಕಲಾ ತಂಡಗಳು ಹಾಗೂ ವಾದ್ಯ ಮೇಳದೊಂದಿಗೆ ಗ್ರಾಮದೇವತೆಯ ಮೆರವಣಿಗೆ ಜರುಗಿತು.
Ben.V. Result: Sanjana S.A, Lavanya Yadav R. of APS Educational Institute rank first ಬೆಂ.ವಿವಿ ಫಲಿತಾಂಶ…
Cancel my account and give me all the money in my account. ನನ್ನ ಅಕೌಂಟನ್ನು ಕ್ಯಾನ್ಸಲ್…
ತಂದೆಯ ಋಣ ತೀರಿಸಲು ..ಎಷ್ಟೇ ಜನ್ಮ ಹುಟ್ಟಿ ಬಂದರೂ ಸಾಧ್ಯವಿಲ್ಲ No matter how many births you take,…
Devotee's iPhone fell into his pocket! Alas, it ended after falling into his pocket. ಹುಂಡಿಗೆ…
ಮೆಂತ್ಯ ಸೊಪ್ಪು Fenugreek ಮಾರ್ಕೆಟ್ ಇಂದ ಮೆಂತ್ಯ ಸೊಪ್ಪನ್ನು ಜಾಸ್ತಿ ತಂದಾಗ ಅದನ್ನು ಬಿಡಿಸಿ ಚೆನ್ನಾಗಿ ತೊಳೆದು ನಂತರ ಮೆಂತ್ಯ…
ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ? What is the benefit of drinking…