ಕಲ್ಯಾಣಸಿರಿ ವಿಶೇಷ

ಬಲ್ಡೋಟ ಸ್ಥಾಪನೆ ನಿಲ್ಲಿಸಿ, ರೈತರ ಭೂಮಿ ಮರಳಿಸಲಿ: ಕೆ.ಬಿ. ಗೋನಾಳ

ಬಲ್ಡೋಟ ಸ್ಥಾಪನೆ ನಿಲ್ಲಿಸಿ, ರೈತರ ಭೂಮಿ ಮರಳಿಸಲಿ: ಕೆ.ಬಿ. ಗೋನಾಳ

Stop the establishment of Baldota and return the land to the farmers: K.B. Gonal

ಕೊಪ್ಪಳ : ಇಲ್ಲಿನ ನಗರಸಭೆ ಸಂಕೀರ್ಣದ ಮುಂದೆ 15ನೇ ದಿನದಲ್ಲಿ ಮುನ್ನೆಡೆದ ಬಲ್ಡೋಟ ಒಳಗೊಂಡು ವಿವಿಧ ಕಾರ್ಖಾನೆ ವಿಸ್ತರಣೆ ವಿರೋಧಿಸಿ, ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆಯ ಜಂಟಿ ಕ್ರಿಯಾ ವೇದಿಕೆಯ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹವನ್ನು ಅಖಂಡ ಕರ್ನಾಟಕ ಹೂಗಾರ ಮಹಾಸಭಾ ಹಾಗೂ ತಾಲೂಕು ಹೂಗಾರ ಯುವಕ ಸಂಘ ಬೆಂಬಲಿಸಿದವು.
ಧರಣಿಗೆ ಇವರನ್ನು ಸ್ವಾಗತ ಮಾಡಿ ಎಂಎಸ್ಪಿಎಲ್ ಕಂಪನಿಯ ಉದ್ಯೋಗಿಗಳೆ ನಿನ್ನೆ ರೈತರ ವೇಶದಲ್ಲಿ ಬೀದಿಗಿಳಿದರು. ಕಂಪನಿ ಮ್ಯಾನೇಜರುಗಳೇ ಕ್ಯಾಮರಾಮನ್ ಆಗಿದ್ದರು. ಪತ್ರಕರ್ತರು ನೀವು ಯಾವ ಪತ್ರಿಕೆ ಎಂದು ಕೇಳುತ್ತಲೇ ಅಲ್ಲಿಂದ ಪರಾರಿ ಆದರು. 2011ರಿಂದ ಬಲ್ಡೋಟ ಆರಂಭವಾಗಿದ್ದರೂ ಭೂ-ನಿರಾಶ್ರಿತ ರೈತರ ಕುಟುಂಬಕ್ಕೆ ಉದ್ಯೋಗ ಕೊಟ್ಟಿಲ್ಲ. ಗವಿಶ್ರೀಗಳು ಬಲ್ಡೋಟ ಕಾರ್ಖಾನೆ ವಿಸ್ತರಣೆ ವಿರೋಧಿಸಿದ ನಂತರ ಬಾಧಿತರಿಗೆ ಮಾತನಾಡುವ ಧ್ವನಿ ಬಂದಿದೆ. ಈ ನೆಲದ ನಮ್ಮ ಸಂವಿಧಾನದತ್ತ ಹಕ್ಕುಗಳನ್ನು ಕಿತ್ತುಕೊಳ್ಳಲು ಬಿಡುವುದಿಲ್ಲ. ಯಾವುದೇ ಅಧಿಕಾರಿ, ರಾಜಕಾರಿಣಿಗಳನ್ನು ಕಂಪನಿ ಖರೀದಿ ಮಾಡಬಹದು, ನಗರ ಮತ್ತು ಬಾಧಿತರನ್ನು, ಜನ ಸಾಮಾನ್ಯರನ್ನು ಖರೀದಿಸಲು ಸಾಧ್ಯವಿಲ್ಲ. ದುಃಸ್ಸಾಹಸ ಮಾಡುವ ಕಂಪನಿ ನಗರದ ಜನರನ್ನು ಹತ್ತಿಕ್ಕಲು ಸಾಧ್ಯವಿಲ್ಲ ಎಂದು ಕಾರ್ಮಿಕ ಮುಖಂಡ ಕೆ.ಬಿ.ಗೋನಾಳ ಆಕ್ರೋಶ ವ್ಯಕ್ತಪಡಿಸಿದರು.
ಹೂಗಾರ ಯುವಕ ಸಂಘದ ಅಧ್ಯಕ್ಷ ಸತೀಶ ಹೂಗಾರ ಮಾತನಾಡುತ್ತಾ, ಇಲ್ಲಿ ನಗರ ಬೆಳೆಯಲು ಈ ಕಾರ್ಖಾನೆ ಅಡ್ಡಿಯಾಗಿದೆ. ಪೂರ್ವ ಭಾಗದಲ್ಲಿ ಅರ್ಧ ಬೆಲೆಗೆ ಸೈಟು ಕೇಳುತ್ತಿಲ್ಲ. ಆ ಭೂಮಿ ಬೀಳಾದರೆ ಮತ್ತೇ ಅದೆ ಕಾರ್ಖಾನೆಗೆ ಸೈಟು ಮಾರಿ ಹೋಗಬೇಕಾಗುತ್ತದೆ. ಆಗ ನಗರದಲ್ಲಿ ಜನರಿಲ್ಲದಿದ್ದರೆ ನಮ್ಮ ಹೂ ಖರೀದಿ ಮಾಡುವವರು ಯಾರೂ ಇರೋದಿಲ್ಲ. ನಮ್ಮ ಪ್ರಬಲ ಬೆಂಬಲವನ್ನು ಗವಿಶ್ರೀಗಳು ನಡೆಸಿದ ಹೋರಾಟಕ್ಕೆ ಧಾರೆ ಎರೆದಿದ್ದೇವೆ, ಈ ಹೋರಾಟ ರಾಜಕಾರಣಿಗಳು ಮೌನವಹಿಸಿದಾಗ ನಾವು ಸುಮ್ಮನಿರಲು ಸಾಧ್ಯವಿಲ್ಲ ಎಂದರು.
ಮಹಾಸಭಾ ರಾಜ್ಯ ಉಪಾಧ್ಯಕ್ಷ ಗವಿ ಹೂಗಾರ ರಾಜ್ಯ ಮಟ್ಟದಿಂದ ಈ ಹೋರಾಟಕ್ಕೆ ಬೆಂಬಲ ಪಡೆಯೋಣ ಎಂದರು. ಧರಣಿ ನೇತೃತ್ವವನ್ನು ಜಂಟಿ ಕ್ರಿಯಾ ವೇದಿಕೆಯ ಪ್ರಧಾನ ಸಂಚಾಲಕರು ಹೂಗಾರ ಸಂಘದ ಪದಾಧಿಕಾರಿಗಳಿಗೆ ಸತ್ಯಾಗ್ರಹವನ್ನು ಬೆಂಬಲಿಸಿದ್ದಕ್ಕಾಗಿ ಅಭಿನಂದನೆಗಳನ್ನು ಹೇಳಿದರು. ಹೋರಾಟದಲ್ಲಿ ಸಾಹಿತಿ ಡಿ.ಎಂ. ಬಡಿಗೆರ್, ಎ.ಎಂ. ಮದರಿ, ಶಿವಕುಮಾರ ಹೂಗಾರ, ಮಲ್ಲಪ್ಪ ಹೂಗಾರ, ಯಲ್ಲಪ್ಪ ಬಂಡಿ, ಮೂಕಪ್ಪ ಮೇಸ್ತ್ರಿ, ಪ್ರಕಾಶ ಹೊಳೆಯಪ್ಪನವರ, ಭೀಮಸೇನ ಕಲಕೇರಿ, ಮುತ್ತಪ್ಪ ಹೂಗಾರ, ಹನುಮೇಶ ಹೂಗಾರ, ಹನುಮಂತಪ್ಪ ಗೊಂದಿ, ಎಂ.ಕೆ.ಸಾಹೇಬ್, ಶೋಭಾ ಪೂಜಾರ, ಪಾರ್ವತಿ ಕೊನಸಾಗರ, ಸಾವಿತ್ರಿ ಪರಾಪುರ, ನಾಗರತ್ನ ಎಸ್.ಪಿ. ಗಂಗಮ್ಮ ಕವಲೂರು, ದೇವಪ್ಪ ಹೂಗಾರ, ವೀರೇಶ ಹೂಗಾರ, ಗವಿಸಿದ್ದಪ್ಪ ಹೂಗಾರ, ಶಿವಾನಂದಪ್ಪ ಹೂಗಾರ, ಮುದಕಪ್ಪ ಹೊಸಮನಿ, ಬಸವರಾಜ ಶೀಲವಂತರ, ಸುಂಕಪ್ಪ ಮೀಸಿ, ಯಮನೂರಪ್ಪ ಹಾಲಳ್ಳಿ ಬಸಾಪುರ, ಮಹಾದೇವಪ್ಪ ಎಸ್.ಮಾವಿನಮಡು, ಚನ್ನಬಸಪ್ಪ ಅಪ್ಪಣ್ಢವರ, ಹೇಮರಾಜ ವೀರಾಪೂರ ಭಾಗವಹಿಸಿದ್ದರು.

Mallikarjun

Share
Published by
Mallikarjun

Recent Posts

ಮೆಂತ್ಯ ಸೊಪ್ಪು

ಮೆಂತ್ಯ ಸೊಪ್ಪು Fenugreek ಮಾರ್ಕೆಟ್ ಇಂದ ಮೆಂತ್ಯ ಸೊಪ್ಪನ್ನು ಜಾಸ್ತಿ ತಂದಾಗ ಅದನ್ನು ಬಿಡಿಸಿ ಚೆನ್ನಾಗಿ ತೊಳೆದು ನಂತರ ಮೆಂತ್ಯ…

10 hours ago

ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ?

ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ? What is the benefit of drinking…

11 hours ago

ಪ್ರಭಾವಿಗಳಿಂದ ಸರ್ಕಾರಿ ಗೋಮಾಳ ಅತಿಕ್ರಮಿಸುವ ಹುನ್ನಾರ – ಗ್ರಾಮಸ್ಥರ ವಿರೋಧ

ಪ್ರಭಾವಿಗಳಿಂದ ಸರ್ಕಾರಿ ಗೋಮಾಳ ಅತಿಕ್ರಮಿಸುವ ಹುನ್ನಾರ - ಗ್ರಾಮಸ್ಥರ ವಿರೋಧ Influential people planning to encroach on government…

11 hours ago

ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಮಾ. 16 ರಂದು ಫ್ರೀಡಂ ಪಾರ್ಕ್‌ ನಲ್ಲಿ ಅಹೋರಾತ್ರಿ ಪ್ರತಿಭಟನೆ

ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಮಾ. 16 ರಂದು ಫ್ರೀಡಂ ಪಾರ್ಕ್‌ ನಲ್ಲಿ…

11 hours ago

ಬಾಲ್ಯ ವಿವಾಹ ತಡೆಗೆ ಎಲ್ಲರ ಪಾತ್ರ ಬಹು ಮುಖ್ಯ- ನ್ಯಾ. ಮಹಾಂತೇಶ ದರಗದ್

ಬಾಲ್ಯ ವಿವಾಹ ತಡೆಗೆ ಎಲ್ಲರ ಪಾತ್ರ ಬಹು ಮುಖ್ಯ- ನ್ಯಾ. ಮಹಾಂತೇಶ ದರಗದ್ Everyone's role is very important…

11 hours ago

ಮಾಹಿತಿ ನೀಡಲು ವಿಳಂಬ ಮಾಡಿದ ಗ್ರಾಪಂ ಅಧಿಕಾರಿಗಳಿಗೆ 50 ಸಾವಿರ- ಬಿ. ವೆಂಕಟಸಿಂಗ್

ಮಾಹಿತಿ ನೀಡಲು ವಿಳಂಬ ಮಾಡಿದ ಗ್ರಾಪಂ ಅಧಿಕಾರಿಗಳಿಗೆ 50 ಸಾವಿರ- ಬಿ. ವೆಂಕಟಸಿಂಗ್ 50 thousand to gram panchayat…

11 hours ago