Padodaka v/s Karunodaka
 

*ಪೂಜ್ಯ ಶ್ರೀ ಮಹಾಜಗದ್ಗುರು ಮಾತೆ ಮಹಾದೇವಿಯವರು ಪಾದೋದಕ ಪದದ ಬದಲಿಗೆ ಕರುಣೋದಕ ಎಂದು ಬಳಸಲು ಕಾರಣವೇನು?*

ಲಿಂಗಾಯತ ಧರ್ಮದ ಪ್ರಮುಖ ತತ್ವಗಳಲ್ಲಿ ಬರುವ ಅಷ್ಟಾವರಣಗಳಲ್ಲಿ ಪಾದೋದಕವು ಒಂದು.

*ಸರಿಯಾದ ಆಧ್ಯಾತ್ಮಿಕ ಕಲ್ಪನೆ ಇಲ್ಲದ, ಲಿಂಗಾಯತ ಧರ್ಮ ಶಾಸ್ತ್ರವನ್ನು ಸರಿಯಾಗಿ ಅಭ್ಯಾಸಿಸದ ಕೆಲವು ಮೂಢರು ಜಂಗಮತ್ವವನ್ನು ಒಂದು ಜಾತಿಗೆ ಸಂಬಂಧಿಸಿ, ಪಾದೋದಕ ಪ್ರಸಾದ ಕೊಡುವವರಲ್ಲಿ ಯೋಗ್ಯತೆ ಇಲ್ಲದಾಗಲು ಅವರಿಂದ ಯಾಂತ್ರಿಕವಾಗಿ ಪಾದೋದಕ- ಪ್ರಸಾದಗಳನ್ನು ಸ್ವೀಕರಿಸುವರು*
~ *ಮಾತಾಜಿ*
( ಲಿಂಗಾಯತ ಧರ್ಮ ಕೈಪಿಡಿ)
ಗುರು ಬಸವಣ್ಣನವರೇ ತಮ್ಮ ವಚನದಲ್ಲಿ ಹೀಗೆ ಹೇಳಿದ್ದಾರೆ
*ಕ್ರಿಯಾಚಾರವಿಲ್ಲದ ಭೂತ ಪ್ರಾಣಿಗಳಲ್ಲಿ ಜಂಗಮವೆಂದು ಪಾದೋದಕ ಪ್ರಸಾದವ ಕೊಳಲಾಗದು*

ಹೀಗೆ ಮುಗ್ಧ ಭಕ್ತರನ್ನು ದಾರಿ ತಪ್ಪಿಸುವ ಕೆಲಸ ಕೆಲವು ಜಂಗಮರು ಹಾಗೂ ಖಾವಿಧಾರಿಗಳು ಮಾಡುತ್ತಿದ್ದರು. ಅಷ್ಟೇ ಅಲ್ಲದೆ ಏನು ಅರಿಯದ ಭಕ್ತರಿಗೆ ಸರಿಯಾದ ಅರಿವು ಮೂಡುಸುವುದು ಕಷ್ಟ ಸಾಧ್ಯವಾಗಿತ್ತು.
*ಪಾದೋದಕ – ಪ್ರಸಾದದ ಮೂಲ ಉದ್ದೇಶವೇ ಗುರು ಲಿಂಗ ಜಂಗಮದ ಕರುಣೆ ಪಡೆಯಲು* ಹೀಗಿರುವಾಗ ಸಮಾಜದ ಒಳಿತಿಗಾಗಿ ಪರಮಪೂಜ್ಯ ಮಾತಾಜಿಯವರು
ಪಾದೋದಕದ ಬದಲಿಗೆ ಕರುಣೋದಕ ಮತ್ತು ಕರುಣಾಪ್ರಸಾದ ಎಂಬ ತಾತ್ವಿಕವಾಗಿ ಸರಿಹೊಂದುವ ಪದಗಳನ್ನು ಬಳಕೆಗೆ ತಂದರು.

*ಬಸವ ಸಂಸ್ಕೃತಿ ಅಭಿಯಾನದಲ್ಲಿ ಪೂಜ್ಯ ಸಾಣೆಹಳ್ಳಿ ಪಂಡಿತಾರಾಧ್ಯ ಶ್ರೀಗಳು ಮಾತಾಜಿಯವರ ಈ ವಿಚಾರವನ್ನು ಅಲ್ಲಗಳೆದಿರುವುದು ಹಾಸ್ಯಸ್ಪದ ಅಷ್ಟೇ ಅಲ್ಲದೆ ಅವರ ಭೌತಿಕ ಮತ್ತು ಮಾನಸಿಕ ದಾರಿದ್ರ್ಯವನ್ನು ತೋರಿಸುತ್ತದೆ*

ಬಸವ ಸಂಸ್ಕೃತಿ ಅಭಿಯಾನ *ಲಿಂಗಾಯತ ಸ್ವತಂತ್ರ ಧರ್ಮವನ್ನು* ಗುರಿಯಾಗಿಟ್ಟುಕೊಂಡು ಅದನ್ನು ಗಳಿಸುವತ್ತ ಹೆಚ್ಚಿನ ಪ್ರಾಮುಖ್ಯತೆ ಕೊಡಬೇಕು ಆದರೆ ಯಾವ ಪರಮಪೂಜ್ಯ ಮಾತಾಜಿಯವರು ಲಿಂಗಾಯತ ಧರ್ಮ ಹಾಗೂ ಬಸವ ತತ್ವವನ್ನು ಜಗತ್ತಿಗೆ ಮೊಟ್ಟ ಮೊದಲ ಬಾರಿಗೆ ತಮ್ಮ ಜೀವನವನ್ನೇ ತ್ಯಾಗ ಮಾಡಿ ಪ್ರಚಾರ ಮಾಡಿದರೋ ಅವರನ್ನು ಸ್ಮರಿಸದೇ ಇನ್ನು ಅವರ ವಿಚಾರಗಳನ್ನು ತಿರಸ್ಕರಿಸುವ ಮನೋಭಾವನೆ ಇದ್ದವರಿಂದ ಸಮಾಜ ಏನು ಪಡೆದುಕೊಳ್ಳಲು ಸಾಧ್ಯ.

ಪೂಜ್ಯ ಸಾಣೆಹಳ್ಳಿ ಶ್ರೀಗಳು ಆಗಿರಬಹುದು ಅಥವಾ ಲಿಂಗಾಯತ ಮಾಠಧಿಪತಿಳ ಒಕ್ಕೂಟದ ಯಾವುದೇ ಶ್ರೀಗಳು ಆಗಿರಬಹುದು ಎಷ್ಟೇ ಅಭಿಯಾನ ಮಾಡಿದರು ಏನೇ ಹೇಳಿದರು ಪರಮಪೂಜ್ಯ ಮಾತಾಜಿ ಪರಮಾಪೂಜ್ಯ ಅಪ್ಪಾಜಿಯವರೇ ಲಿಂಗಾಯತ ಧರ್ಮದ ಪುನರುತ್ತಾನಕರು ಎಂಬುದು ಸಾರ್ವತ್ರಿಕ ಸತ್ಯ. ( *Appaji and Mataji are universal truth*
ಪೂಜ್ಯ ಅಪ್ಪಾಜಿ ಮತ್ತು ಪೂಜ್ಯ ಮಾತಾಜಿಯರ ಹೆಸರು ಮತ್ತು ವಿಚಾರಗಳು ಎಂದಿದಿಗೂ ಅಮರ ಹಾಗೂ ಶಾಶ್ವತ
ಅದನ್ನು ಯಾರು ತಪ್ಪಿಸಲು ಸಾಧ್ಯವಿಲ್ಲ.

ಅವರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗಿದರೆ ಹೆಚ್ಚಿನ ಯಶಸ್ಸು ಹಾಗೂ ಶ್ರೇಯಸ್ಸು ಎಲ್ಲ ಮಠಧಿಪತಿಗಳಿಗೂ ದೊರಕುವುದು ಎಂದು ಈ ಮೂಲಕ ವಿನಂತಿಸುತ್ತೇನೆ.

  • ಸಂಗಮೇಶ ಕೆ ಬಿ
  • ರಾಷ್ಟ್ರೀಯ ಬಸವ ದಳ
  • ಬೆಂಗಳೂರು
Mallikarjun

Share
Published by
Mallikarjun

Recent Posts

ಮೆಂತ್ಯ ಸೊಪ್ಪು

ಮೆಂತ್ಯ ಸೊಪ್ಪು Fenugreek ಮಾರ್ಕೆಟ್ ಇಂದ ಮೆಂತ್ಯ ಸೊಪ್ಪನ್ನು ಜಾಸ್ತಿ ತಂದಾಗ ಅದನ್ನು ಬಿಡಿಸಿ ಚೆನ್ನಾಗಿ ತೊಳೆದು ನಂತರ ಮೆಂತ್ಯ…

11 hours ago

ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ?

ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ? What is the benefit of drinking…

11 hours ago

ಪ್ರಭಾವಿಗಳಿಂದ ಸರ್ಕಾರಿ ಗೋಮಾಳ ಅತಿಕ್ರಮಿಸುವ ಹುನ್ನಾರ – ಗ್ರಾಮಸ್ಥರ ವಿರೋಧ

ಪ್ರಭಾವಿಗಳಿಂದ ಸರ್ಕಾರಿ ಗೋಮಾಳ ಅತಿಕ್ರಮಿಸುವ ಹುನ್ನಾರ - ಗ್ರಾಮಸ್ಥರ ವಿರೋಧ Influential people planning to encroach on government…

11 hours ago

ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಮಾ. 16 ರಂದು ಫ್ರೀಡಂ ಪಾರ್ಕ್‌ ನಲ್ಲಿ ಅಹೋರಾತ್ರಿ ಪ್ರತಿಭಟನೆ

ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಮಾ. 16 ರಂದು ಫ್ರೀಡಂ ಪಾರ್ಕ್‌ ನಲ್ಲಿ…

12 hours ago

ಬಾಲ್ಯ ವಿವಾಹ ತಡೆಗೆ ಎಲ್ಲರ ಪಾತ್ರ ಬಹು ಮುಖ್ಯ- ನ್ಯಾ. ಮಹಾಂತೇಶ ದರಗದ್

ಬಾಲ್ಯ ವಿವಾಹ ತಡೆಗೆ ಎಲ್ಲರ ಪಾತ್ರ ಬಹು ಮುಖ್ಯ- ನ್ಯಾ. ಮಹಾಂತೇಶ ದರಗದ್ Everyone's role is very important…

12 hours ago

ಮಾಹಿತಿ ನೀಡಲು ವಿಳಂಬ ಮಾಡಿದ ಗ್ರಾಪಂ ಅಧಿಕಾರಿಗಳಿಗೆ 50 ಸಾವಿರ- ಬಿ. ವೆಂಕಟಸಿಂಗ್

ಮಾಹಿತಿ ನೀಡಲು ವಿಳಂಬ ಮಾಡಿದ ಗ್ರಾಪಂ ಅಧಿಕಾರಿಗಳಿಗೆ 50 ಸಾವಿರ- ಬಿ. ವೆಂಕಟಸಿಂಗ್ 50 thousand to gram panchayat…

12 hours ago