ಲಯನ್ಸ್ ಕ್ಲಬ್ ವತಿಯಿಂದ ಹಮ್ಮಿಕೊಂಡಿದ್ದಕಾರ್ಯಕ್ರಮಗಳಲ್ಲಿಸ್ವಾತಂತ್ರ್ಯ ತ್ಸವ ಹೋರಾಟಗಾರ ದಿ,ಅಲ್ಲೂರಿಸತ್ಯನಾರಾಯಣರಾಜು ಅವರ ಜೀವನ ಕುರಿತ ಪುಸ್ತಕ ಬಿಡುಗಡೆ

 
A book on the life of freedom fighter Alluri Satyanarayana Raju was released at a program organized by the Lions Club.

ಗಂಗಾವತಿ: ೭೯ನೇ ಸ್ವಾತಂತ್ರ‍್ಯೋತ್ಸವದ ಅಂಗವಾಗಿ ಲಯನ್ಸ್ ಕ್ಲಬ್ ಗಂಗಾವತಿ ಸಂಸ್ಥೆ, ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತ್ತು. ಲಯನ್ಸ್ ಕ್ಲಬ್ ಅಧ್ಯಕ್ಷರಾದ ಡಾ. ಶಿವಕುಮಾರ್ ಮಾಲಿಪಾಟೀಲ್ ಅವರು ರಾಷ್ಟç ಧ್ವಜಾರೋಹಣ ನೆರವೇರಿಸಿದರು.
ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಅಪ್ರತಿಮ ಸ್ವತಂತ್ರ ಹೋರಾಟಗಾರರಾಗಿದ್ದ ಶ್ರೀ ಅಲ್ಲೂರಿ ಸತ್ಯನಾರಾಯಣ ರಾಜು ಅವರ ಜೀವನ ಕುರಿತ ಎಸ್.ಡಿ.ವಿ ಅಜೀಜ್ ಅವರು ಇಂಗ್ಲಿಷ್ ಭಾಷೆಯಲ್ಲಿ ರಚಿಸಿದ ಪುಸ್ತಕ ಬಿಡುಗಡೆ ಹಾಗೂ ಪುಸ್ತಕ ಪರಿಚಯ ಕಾರ್ಯಕ್ರಮ ನಡೆಯಿತು.
ಪುಸ್ತಕದ ಬಗ್ಗೆ ವಿವರವಾಗಿ ಖ್ಯಾತ ಕಣ್ಣಿನ ತಜ್ಞರಾದ ಡಾ. ಹನುಮಂತಪ್ಪ ಹಾಗೂ ಡಾ.ಶಿವಕುಮಾರ ಮಾಲಿಪಾಟೀಲ್ ಅವರು ಮಾತನಾಡಿದರು.
ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಖ್ಯಾತ ಹಾಸ್ಯ ಭಾಷಣಕಾರರಾದ ಗಂಗಾವತಿ ಪ್ರಾಣೇಶ ಅವರು, ಅಪ್ಪಟ ದೇಶಪ್ರೇಮಿಯಾಗಿದ್ದ ಅಲ್ಲೂರಿ ಸತ್ಯನಾರಾಯಣರಾಜು ಅವರ ಪುಸ್ತಕ ಕನ್ನಡದಲ್ಲಿ ಬರಬೇಕು, ಆಗ ಅಂತಹ ಹೋರಾಟಗಾರರ ಪರಿಚಯ ಕನ್ನಡಿಗರಿಗೂ ಆಗುತ್ತದೆ ಎಂದರು. ಆದರ್ಶ ದಂಪತಿಗಳಾದ ದಿ. ಅಲ್ಲೂರಿ ಸತ್ಯನಾರಾಯಣರಾಜು ಹಾಗೂ ದಿ. ಅನ್ನಪೂರ್ಣಮ್ಮ ಅವರ ಪುತ್ರರಾದ ಡಾ. ಸೋಮರಾಜು ಅವರು, ಅವರ ತಂದೆಯವರ ಜೀವನ ಚರಿತ್ರೆಯನ್ನು ಪುಸ್ತಕ ರೂಪದಲ್ಲಿ ತಂದಿದ್ದು ಸಾರ್ಥಕ ಕೆಲಸವೆಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ವೈದ್ಯರಾದ ಡಾ. ಚಂದ್ರಪ್ಪ ವಹಿಸಿದ್ದರು. ನಂತರ ವಸುಧಾ ಪೌಂಢೇಷನ್ ಹೈದರಾಬಾದ್ ಅವರು ದಾನವಾಗಿ ನೀಡಿದ ಬೆಡ್‌ಶೀಟು, ಸೀರೆಗಳನ್ನು ಅನಾಥಾಶ್ರಮಕ್ಕೆ ಹಸ್ತಾಂತರಿಸಲಾಯಿತು ಹಾಗೂ ವಿಕಲಚೇತನ ಶಾಲೆಯ ಮಕ್ಕಳಿಗೆ ಪುಸ್ತಕ, ಬೆಡ್‌ಶೀಟುಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಡಾ.ಮಾದವಶೆಟ್ಟಿ, ಡಾ.ಮಲ್ಲನಗೌಡ, ಡಾ. ಸುಲೋಚನಾ ಚಿನಿವಾಲರ್, ಡಾ. ಎ.ಎಸ್.ಎನ್ ರಾಜು, ಡಾ. ನಾಗರಾಜ, ಸಿದ್ದನಗೌಡ ವಕೀಲರು, ಡಾ. ಮಧುಸೂದನ್, ಡಾ. ಪ್ರಶಾಂತ ದೇಸಾಯಿ, ರಾಜಶೇಖರ ಹೇರೂರ್, ಸುಭಾಷ್ ಬಂಬ್, ಚೇತನ ಹಿರೇಮಠ, ಲಯನ್ಸ್ ಕ್ಲಬ್ ಖಜಾಂಚಿ ಶಿವಪ್ಪ ಗಾಳಿ ಇತರರಿದ್ದರು.

Mallikarjun

Share
Published by
Mallikarjun

Recent Posts

ಮೆಂತ್ಯ ಸೊಪ್ಪು

ಮೆಂತ್ಯ ಸೊಪ್ಪು Fenugreek ಮಾರ್ಕೆಟ್ ಇಂದ ಮೆಂತ್ಯ ಸೊಪ್ಪನ್ನು ಜಾಸ್ತಿ ತಂದಾಗ ಅದನ್ನು ಬಿಡಿಸಿ ಚೆನ್ನಾಗಿ ತೊಳೆದು ನಂತರ ಮೆಂತ್ಯ…

15 hours ago

ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ?

ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ? What is the benefit of drinking…

15 hours ago

ಪ್ರಭಾವಿಗಳಿಂದ ಸರ್ಕಾರಿ ಗೋಮಾಳ ಅತಿಕ್ರಮಿಸುವ ಹುನ್ನಾರ – ಗ್ರಾಮಸ್ಥರ ವಿರೋಧ

ಪ್ರಭಾವಿಗಳಿಂದ ಸರ್ಕಾರಿ ಗೋಮಾಳ ಅತಿಕ್ರಮಿಸುವ ಹುನ್ನಾರ - ಗ್ರಾಮಸ್ಥರ ವಿರೋಧ Influential people planning to encroach on government…

15 hours ago

ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಮಾ. 16 ರಂದು ಫ್ರೀಡಂ ಪಾರ್ಕ್‌ ನಲ್ಲಿ ಅಹೋರಾತ್ರಿ ಪ್ರತಿಭಟನೆ

ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಮಾ. 16 ರಂದು ಫ್ರೀಡಂ ಪಾರ್ಕ್‌ ನಲ್ಲಿ…

15 hours ago

ಬಾಲ್ಯ ವಿವಾಹ ತಡೆಗೆ ಎಲ್ಲರ ಪಾತ್ರ ಬಹು ಮುಖ್ಯ- ನ್ಯಾ. ಮಹಾಂತೇಶ ದರಗದ್

ಬಾಲ್ಯ ವಿವಾಹ ತಡೆಗೆ ಎಲ್ಲರ ಪಾತ್ರ ಬಹು ಮುಖ್ಯ- ನ್ಯಾ. ಮಹಾಂತೇಶ ದರಗದ್ Everyone's role is very important…

15 hours ago

ಮಾಹಿತಿ ನೀಡಲು ವಿಳಂಬ ಮಾಡಿದ ಗ್ರಾಪಂ ಅಧಿಕಾರಿಗಳಿಗೆ 50 ಸಾವಿರ- ಬಿ. ವೆಂಕಟಸಿಂಗ್

ಮಾಹಿತಿ ನೀಡಲು ವಿಳಂಬ ಮಾಡಿದ ಗ್ರಾಪಂ ಅಧಿಕಾರಿಗಳಿಗೆ 50 ಸಾವಿರ- ಬಿ. ವೆಂಕಟಸಿಂಗ್ 50 thousand to gram panchayat…

15 hours ago